Loading..!

KPTCL ಕಲ್ಯಾಣ ಕರ್ನಾಟಕ ಭಾಗದ Junior Powerman & Junior Station Attendant ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ
Published by: Yallamma G | Date:23 ಜುಲೈ 2025
Image not found

           ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ತನ್ನ ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತೊಂದು ಮಹತ್ವದ ಹಂತವನ್ನು ಮುಗಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ಅಭ್ಯರ್ಥಿಗಳು ಗಮನಿಸಿ, 


            ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು 14.10.2024 ರಂದು ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್(KK) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ನೇಮಕಾತಿಯ ಮುಂದಿನ ಹಂತವಾದ ಸಹನ ಶಕ್ತಿ ಪರೀಕ್ಷೆಯನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ (ಎಸ್.ಎಸ್.ಎಲ್.ಸಿ/10ನೇ ತರಗತಿ) ಗಳಿಸಿರುವ ಅಂಕಗಳ ಜೇಷ್ಠತೆಯ ಆಧಾರದ ಮೇಲೆ ದಿನಾಂಕ: 05.05.2025 ರಿಂದ 08.05.2025 ರವರೆಗೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಸಹನ ಶಕ್ತಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು.


            ಸಹನ ಶಕ್ತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಅಧಿಸೂಚಿತ ಹುದ್ದೆಗಳ 1:5 ರ ಅನುಪಾತದಲ್ಲಿ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಫ್ (Cut-off) ಅಂಕಗಳೊಂದಿಗೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು ತನ್ನ ಇಲಾಖಾ ಜಾಲತಾಣದಲ್ಲಿ ಪ್ರಕಟಿಸಿದೆ. 


           ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಮಂಜಸವಾದ ಆಕ್ಷೇಪಣೆಗಳಿದ್ದಲ್ಲಿ, ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ್ದ ಅಭ್ಯರ್ಥಿಗಳು ಮಾತ್ರ ಸೂಕ್ತ ವಿವರ ಹಾಗೂ ದಾಖಲಾತಿಗಳೊಂದಿಗೆ, ವಿಷಯಸೂಚಿಯಲ್ಲಿ “ಕಿರಿಯ ಸ್ಟೇಷನ್ ಪರಿಚಾರಕ (ಕೆ.ಕೆ)/ಕಿರಿಯ ಪವರ್‌ಮ್ಯಾನ್ (ಕೆ.ಕೆ) - ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ' ಎಂದು ಕಡ್ಡಾಯವಾಗಿ ನಮೂದಿಸಿ, ತಮ್ಮ ಹೆಸರು ಹಾಗೂ ಅರ್ಜಿ ಸಂಖ್ಯೆಯೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಆಕ್ಷೇಪಣೆಗಳನ್ನು ಖುದ್ದಾಗಿ ದಿನಾಂಕ: 31.07.2025 ರ ಸಂಜೆ 05:30 ರವರೆಗೆ ಮಾತ್ರ ಸಲ್ಲಿಸಬಹುದಾಗಿರುತ್ತದೆ.


ಆಕ್ಷೇಪಣೆಗಳನ್ನು ಸಲ್ಲಿಸುವ ವಿಳಾಸ : 
ನಿರ್ದೇಶಕರು (ಆಡಳಿತ ಮತ್ತು ಮಾಸಂ), ನಿಗಮ ಕಾರ್ಯಾಲಯ, ಕವಿಪ್ರನಿನಿ, ಕಾವೇರಿ ಭವನ, ಬೆಂಗಳೂರು-560009 ಇವರಿಗೆ ಸಲ್ಲಿಸುವುದು. 


ಇದೀಗ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತ—ಅಂತಿಮ ದಾಖಲೆ ಪರಿಶೀಲನೆ ಮತ್ತು ನೇಮಕಾತಿಗೆ ಸಿದ್ಧರಾಗಬೇಕಾಗಿದೆ. ಇತ್ತ ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕಿರುವವರು ಕೂಡ ಕಾನೂನುಬದ್ಧವಾದ ಮಾರ್ಗದಲ್ಲಿ ತಮ್ಮ ತಕರಾರನ್ನು ಮಂಡಿಸಬಹುದಾಗಿದೆ. ಈ ಪ್ರಕಟಣೆ KPTCL ನೇಮಕಾತಿಯ ನಿಖರತೆಯ ಹಾಗೂ ಪಾರದರ್ಶಕತೆಯ ದರ್ಶನ ನೀಡಿದ್ದು, ಸರ್ಕಾರಿ ಉದ್ಯೋಗದಲ್ಲಿ ಆಸಕ್ತರ ಪಾಲಿಗೆ ಭರವಸೆಯ ಬೆಳಕು ತಂದಿದೆ.

Comments