Loading..!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿನ AE & JE (Civil) ಹುದ್ದೆಗಳ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಅಧಿಕೃತ ಅಧಿಸೂಚನೆ ಪ್ರಕಟ
Published by: Yallamma G | Date:27 ನವೆಂಬರ್ 2023
Image not found

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಹೆಸ್ಕಾಂ ಗಳಲ್ಲಿನ AE & JE (Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆವಾರು ಅರ್ಹತಾ ಪಟ್ಟಿಯನ್ನು KPTCL ಪ್ರಕಟಿಸಿತ್ತು. ಹುದ್ದೆಗಳ ಆಯ್ಕೆ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಹೆಸ್ಕಾಂ ಗಳಲ್ಲಿನ AE & JE (Civil) ಹುದ್ದೆಗಳ ನೇಮಕಾತಿಯ ಕುರಿತು29-11-2023ರಂದು ದಾಖಲಾತಿ ಪರಿಶೀಲನೆಗೆ (Document Verification) ಹಾಜರಾಗಲು KPTCL ಅಧಿಕೃತ ಪ್ರಕಟಣೆ ಹೊರಡಿಸಿದೆ. ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿ ತಮ್ಮ ಅರ್ಜಿಯಲ್ಲಿ ತಿಳಿಸಿರುವ ಮಾಹಿತಿಗನುಗುಣವಾಗಿ ಎಲ್ಲ ಮೂಲ ದಾಖಲೆಗಳೊಡನೆ ಖುದ್ದಾಗಿ ದಾಖಲಾತಿ ಪರಿಶೀಲನೆ ಈ ಕೆಳಗಿನ ವಿಳಾಸಕ್ಕೆ ಹಾಜರಾಗುವಂತ್ತೆ  ತಿಳಿಸಲಾಗಿದೆ. 


ದಾಖಲಾತಿ ಪರಿಶೀಲನೆ ನಡೆಯುವ ಸ್ಥಳ : 
29.11.2023 ರಂದು ಬೆಳ್ಳಿಗ್ಗೆ 10:00 ಘಂಟೆಗೆ 
KPTCL Accounts Officers' Association. #28. Silver Jubilee Building Race Course
Cross Road, Near New Congress Party Office, Ananda Rao Circle, Bengaluru-560009)


* ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ.

Comments