ಕರ್ನಾಟಕ ಲೋಕಸೇವಾ ಆಯೋಗದಿಂದ ದಿನಾಂಕ 15 ಮಾರ್ಚ್ 2017 ರಲ್ಲಿ ಅಧಿಸೂಚಿಸಲಾದ ಈ ಕೆಳಕಂಡ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ 27 ಏಪ್ರಿಲ್ 2020 ರಂದು ಕೆಪಿಎಸ್ಸಿಯ ಅಧಿಕೃತ ಜಾಲತಾಣದಲ್ಲಿ ಅಭ್ಯರ್ಥಿಗಳನ್ನು ಆಯ್ಕೆಗಾಗಿ ಪ್ರಕಟಿಸಲಾಗಿದೆ. ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ಇಲಾಖೆ ಮತ್ತು ಹುದ್ದೆಗಳ ಹೆಸರುಗಳು ಈ ಕೆಳಗಿನಂತಿದೆ * ಪೌರಾಡಳಿತ ನಿರ್ದೇಶನಾಲಯದಲ್ಲಿ ಅಕೌಂಟೆಂಟ್ * ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕರು * ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಯಲ್ಲಿ ಕಲಾ ಶಿಕ್ಷಕರು * ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಯಲ್ಲಿ ಪ್ರಥಮ ದರ್ಜೆ ಗಣಕ ಯಂತ್ರ ಸಹಾಯಕರು * ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಯಲ್ಲಿ ಉಗ್ರಾಣ ನಿಯಂತ್ರಕರು ಅಥವಾ ವಾರ್ಡನ್ * ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಯಲ್ಲಿ ಕ್ಯಾಟರಿಂಗ್ ಸೂಪರ್ ವೈಸರ್ / ನಿಲಯಪಾಲಕ * ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ ಕಿರಿಯ ಲೆಕ್ಕ ಸಹಾಯಕರು * ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಇವುಗಳ ಜೊತೆಗೆ ಕೆಪಿಎಸ್ಸಿಯು ದಿನಾಂಕ 05 ಅಕ್ಟೋಬರ್ 2016 ರಂದು ಅಧಿಸೂಚಿಸಲಾದ * ಪೌರಾಡಳಿತ ಇಲಾಖೆಯಲ್ಲಿನ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಅಕೌಂಟೆಂಟ್ ಮತ್ತು * ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಕಾನೂನು ಮಾಪನ ನಿರೀಕ್ಷಕ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಕೆಪಿಎಸ್ಸಿಯ ಅಭ್ಯರ್ಥಿಗಳ ಮಾಹಿತಿಗಾಗಿ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. ಅಭ್ಯರ್ಥಿಗಳು KPSC ಯಾ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆಯ್ಕೆ ಪಟ್ಟಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು






Comments