Loading..!

KPSCಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಅಭಿಯಂತರರ (ಗ್ರೇಡ್-1) ಹುದ್ದೆಗಳ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ಇದೀಗ ಪ್ರಕಟ
Published by: Bhagya R K | Date:8 ಸೆಪ್ಟೆಂಬರ್ 2025
Image not found

 ಕರ್ನಾಟಕ ಲೋಕಸೇವಾ ಆಯೋಗದಿಂದ (KPSC) ದಿನಾಂಕ 01/09/2022 ರಂದು ಅಧಿಸೂಚಿಸಲಾದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯದಲ್ಲಿನ ಒಟ್ಟು 288 ಹುದ್ದೆಗಳು (229 + 59 ಹೈಕೋರ್ಟ್ ಆದೇಶದಂತೆ) ಸಹಾಯಕ ಅಭಿಯಂತರರು (ಗ್ರೇಡ್-1)  ಹುದ್ದೆಗಳ ನೇಮಕಾತಿಗಾಗಿ ಅಧುಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 


ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮಗಳನ್ವಯ ಭರ್ತಿಗೆ ಪ್ರಕಟಿಸಲ್ಪಟ್ಟಿದ್ದವು. ಮೂಲ ಅಂತಿಮ ಆಯ್ಕೆಪಟ್ಟಿ 31-01-2024ರಂದು ಪ್ರಕಟಿಸಲಾಗಿತ್ತು ಮತ್ತು 16-04-2024ರಂದು ಅಭ್ಯರ್ಥಿಗಳ ಮಾಹಿತಿಗಾಗಿ ಮರು ಪ್ರಕಟಣೆ ಮಾಡಲಾಗಿತ್ತು.


ಅಧಿಸೂಚನೆ ವಿವರ:
- ಮೂಲ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 1 ಆರ್‌ಟಿಬಿ-1/2021
- ಮೂಲ ಅಧಿಸೂಚನೆ ದಿನಾಂಕ: 21-02-2022
- ಸೇರ್ಪಡೆ ಅಧಿಸೂಚನೆ ದಿನಾಂಕ: 01-09-2022
- ಹುದ್ದೆ: ಸಹಾಯಕ ಅಭಿಯಂತರರು (ಗ್ರೇಡ್-1)
- ನೇಮಕಾತಿ ಪ್ರಾಧಿಕಾರ: ಆಯುಕ್ತರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ


ಇತ್ತೀಚಿನ ಪರಿಷ್ಕರಣೆ :
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ 4518/2024, ದಿನಾಂಕ 05-06-2025ರ ಆದೇಶದಂತೆ, ಆಯೋಗವು ಈಗ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ, ಅಭ್ಯರ್ಥಿಗಳ ಮಾಹಿತಿಗಾಗಿ ಬಿಡುಗಡೆ ಮಾಡಿದೆ.


- ಆಯ್ಕೆಪಟ್ಟಿಯನ್ನು ಪರಿಶೀಲಿಸಲು ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ಅಧಿಕೃತ ವೆಬ್‌ಸೈಟ್ http://kpsc.kar.in ಗೆ ಭೇಟಿ ನೀಡಬಹುದು.


📢 ಮುಖ್ಯ ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಮುಂದಿನ ಸೂಚನೆಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಗಮನಿಸಬೇಕು.


🎉 ನೇಮಕಾತಿ ಆದೇಶಗಳು ಶೀಘ್ರದಲ್ಲೇ ಸಂಬಂಧಿತ ಇಲಾಖೆಯಿಂದ ಹೊರಬೀಳಲಿವೆ. ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಮರ್ಪಕವಾಗಿ ಸಿದ್ಧಪಡಿಸಿಕೊಳ್ಳಬೇಕು.

Comments