Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಗ್ರೂಪ್-ಸಿ ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರಗಳು ಬಿಡುಗಡೆ
Published by: Basavaraj Halli | Date:7 ಜುಲೈ 2025
Image not found
ಇದೇನು, ಗ್ರೂಪ್-ಸಿ ಪರೀಕ್ಷೆಗೆ ಅರ್ಜಿ ಹಾಕಿದ್ದು ನೆನಪಿದೆಯಾ? ಹಾಗಾದ್ರೆ ಆ ಮೊಬೈಲ್ ಅನ್ನು ತೆಗೆದುಕೊಂಡು ನಿಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಸಿದ್ಧರಾಗಿ!

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಗ್ರೂಪ್-ಸಿ ಹುದ್ದೆಗಳಿಗೆ ಪ್ರವೇಶ ಪತ್ರಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ನಿಮ್ಮ ಕನಸಿನ ಉದ್ಯೋಗಕ್ಕೆ ಮೊದಲ ಹೆಜ್ಜೆ ಇಲ್ಲಿಂದಲೇ ಪ್ರಾರಂಭ.
ಹಾಗಾದರೆ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಬೇಕಾದರೆ ಏನು ಮಾಡಬೇಕು? ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ನೋಡಲು ಯಾವ ಲಿಂಕ್ ಬಳಸಬೇಕು? ಪರೀಕ್ಷೆ ಬರೆಯಲು ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು? 

 

ಇದೇನು, ಗ್ರೂಪ್-ಸಿ ಪರೀಕ್ಷೆಗೆ ಅರ್ಜಿ ಹಾಕಿದ್ದು ನೆನಪಿದೆಯಾ? ಹಾಗಾದ್ರೆ ಆ ಮೊಬೈಲ್ ಅನ್ನು ತೆಗೆದುಕೊಂಡು ನಿಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಲು ಸಿದ್ಧರಾಗಿ!
ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಸಂ: ಪಿಎಸ್‌ಸಿ 506 ಆ‌ಟಿಬಿ-2/2023-24/3497, ದಿ: 15-03-2024 ರಂದು ಅಧಿಸೂಚಿಸಲಾದ ಪದವಿ ಮಟ್ಟದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ  ವಿವಿಧ ಗ್ರೂಪ್ 'ಸಿ' 60 ಹುದ್ದೆಗಳಿಗೆ ದಿನಾಂಕ: 12-07-2025 ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು 13-07-2025 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಸಂಬಂಧ ಪ್ರವೇಶ ಪತ್ರಗಳನ್ನು 05-07-2025 ರಿಂದ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 

ಹಾಗಾದರೆ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಬೇಕಾದರೆ ಏನು ಮಾಡಬೇಕು? ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ನೋಡಲು ಯಾವ ಲಿಂಕ್ ಬಳಸಬೇಕು? ಪರೀಕ್ಷೆ ಬರೆಯಲು ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು? 

- ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆಯೋಗದ ಅಂತರ್ಜಾಲ http://kpsc.kar.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಸದರಿ ಪರೀಕ್ಷೆಯ ವೇಳಾಪಟ್ಟಿಯು ಆಯೋಗದ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ.

ಈ ಬಾರಿ ಕೆಪಿಎಸ್‌ಸಿ ಕೆಲವು ಹೊಸ ಬದಲಾವಣೆಗಳನ್ನು ತಂದಿದೆ:

- ಆನ್‌ಲೈನ್ ಮೂಲಕವೇ ಪರೀಕ್ಷೆ ನಡೆಯಲಿದೆ (CBT ಮಾದರಿ)

- ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತ ಇರುತ್ತದೆ

ಸುಮಾರು 60 ಹುದ್ದೆಗಳಿಗೆ ನಡೆಯುತ್ತಿರುವ ಈ ನೇಮಕಾತಿಯಲ್ಲಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಠಿಣ ಪರೀಕ್ಷೆ ನಡೆಯಲಿದೆ. ಪರೀಕ್ಷೆಯ ನಂತರದ ಪ್ರಕ್ರಿಯೆ 2025ರೊಳಗೆ ಪೂರ್ಣಗೊಳಿಸಲು ಆಯೋಗ ಕ್ರಮ ಕೈಗೊಂಡಿದೆ.

 

ಪರೀಕ್ಷೆಯ ಕೊನೆಯ ದಿನಗಳಲ್ಲಿ ಓದಿನ ಜೊತೆ-ಜೊತೆಗೆ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ. ಇದು ನಿಮ್ಮ ಕನಸಿನ ಉದ್ಯೋಗಕ್ಕೆ ಸೇತುವೆಯಾಗಿದೆ!



  •  

  •  

  •  

  •  

  •  

  • Beta


Beta feature

Comments