ಕರ್ನಾಟಕ ಲೋಕಸೇವಾ ಆಯೋಗದಿಂದ HK ಭಾಗದ ಗ್ರೂಪ್-ಸಿ ಹುದ್ದೆಗಳ ಪ್ರವೇಶ ಪತ್ರಗಳು ಬಿಡುಗಡೆಯಾಗಿವೆ! ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ನಿಮಗೆ ಇದು ಒಂದು ಸುವರ್ಣಾವಕಾಶ. ಈ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದರಿಂದ ಪರೀಕ್ಷೆಯ ದಿನಾಂಕ ತಿಳಿಯುವವರೆಗೆ ಎಲ್ಲಾ ಮಾಹಿತಿ ಇಲ್ಲಿ ಸಿಗುತ್ತದೆ.
ಈ ಲೇಖನದಲ್ಲಿ ನಾವು ಪ್ರವೇಶ ಪತ್ರ ಡೌನ್‌ಲೋಡ್ ಮಾಡುವ ಸರಳ ವಿಧಾನ ಮತ್ತು ಪರೀಕ್ಷೆಗೆ ತರುವ ಅಗತ್ಯ ದಾಖಲೆಗಳ ಪಟ್ಟಿ ಕುರಿತು ತಿಳಿಸುತ್ತೇವೆ. ಅಭ್ಯರ್ಥಿಗಳು ಯಾವ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು ಮತ್ತು ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದರ ಕುರಿತೂ ವಿವರಿಸುತ್ತೇವೆ.
ಕರ್ನಾಟಕ ಲೋಕಸೇವಾ ಆಯೋಗ (KPSC)ದ ಅಧಿಸೂಚನೆ ಸಂ: ಪಿಎಸ್‌ಸಿ 504 ಆಟಿಬಿ-2/2023-24/3495, ದಿನಾಂಕ: 15-03-2024 ರಂದು ಅಧಿಸೂಚಿಸಲಾದ ಪದವಿ ಮಟ್ಟದ ವಿವಿಧ ಇಲಾಖೆಗಳಲ್ಲಿನ ಹೈದರಾಬಾದ್-ಕರ್ನಾಟಕ (HK) ವೃಂದದ ವಿವಿಧ ಗ್ರೂಪ್ 'ಸಿ' ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಆಯೋಗದ ಅಧಿಕೃತ ಮಾಹಿತಿಯ ಪ್ರಕಾರ, ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ 18-ಸೆಪ್ಟೆಂಬರ್-2025 ರಂದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆ 19-ಸೆಪ್ಟೆಂಬರ್-2025 ರಂದು ನಡೆಯಲಿದೆ.ಈ ಪರೀಕ್ಷೆಗಳಿಗೆ ಸಂಬಂಧಿಸಿದ ಹಾಲ್ ಟಿಕೆಟ್ ಅನ್ನು ಈಗ ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಅಭ್ಯರ್ಥಿಗಳು ತಮ್ಮ ಹಾಲ್‌ಟಿಕೆಟ್‌ಗಳನ್ನು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದು. ಪರೀಕ್ಷಾ ವೇಳಾಪಟ್ಟಿಯು ಹಾಗೂ ಸಂಬಂಧಿತ ಸೂಚನೆಗಳ ವಿವರಗಳು ಕೂಡ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಆಯೋಗವು ಅಭ್ಯರ್ಥಿಗಳಿಗೆ ಸಮಯಕ್ಕೆ ಮುಂಚಿತವಾಗಿ ಹಾಲ್‌ಟಿಕೆಟ್ ಡೌನ್‌ಲೋಡ್ ಮಾಡಿಕೊಂಡು, ಪರೀಕ್ಷಾ ಕೇಂದ್ರಕ್ಕೆ ಸೂಚನೆಯಂತೆ ಹಾಜರಾಗಲು ಮನವಿ ಮಾಡಿದೆ.
👉 ಹೆಚ್ಚಿನ ಮಾಹಿತಿಗೆ ಹಾಗೂ ಹಾಲ್‌ಟಿಕೆಟ್ ಡೌನ್‌ಲೋಡ್ ಮಾಡಲು: KPSC ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ.
Comments