Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಗ್ರೂಪ್-ಬಿ ಹುದ್ದೆಗಳ ಪರೀಕ್ಷಾ ಪ್ರವೇಶ ಪತ್ರ ಪ್ರಕಟ | ಈ ಕುರಿತು ಮಾಹಿತಿ ನಿಮಗಾಗಿ
Published by: Bhagya R K | Date:21 ಜುಲೈ 2025
Image not found

ನಿಮಗೆ ಸರ್ಕಾರಿ ಉದ್ಯೋಗ ಬೇಕಿದೆಯಾ? ಹಾಗಾದರೆ ಈ ಸುದ್ದಿ ನಿಮಗಾಗಿಯೇ! ಕರ್ನಾಟಕ ಲೋಕಸೇವಾ ಆಯೋಗ (KPSC) ಗ್ರೂಪ್-ಬಿ ಹುದ್ದೆಗಳ ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಪ್ರಕಟಿಸಿದೆ. ಈ ಹಂತದಲ್ಲಿ ನಿಮ್ಮ ಹೆಸರಿದೆಯಾ?


ಎಷ್ಟೋ ಜನ ತಿಂಗಳುಗಳಿಂದ ಕಾಯುತ್ತಿದ್ದ "ಕರ್ನಾಟಕ ಲೋಕಸೇವಾ ಆಯೋಗದ" ಪರೀಕ್ಷೆಯ ಅಧಿಕೃತ ಮಾಹಿತಿ ಇಲ್ಲಿದೆ. ನಿಮ್ಮ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ, ಪರೀಕ್ಷಾ ದಿನಾಂಕ ಮತ್ತು ಇತರ ಮಹತ್ವದ ವಿವರಗಳು ಇಲ್ಲಿವೆ.


ಆದರೆ ಎಚ್ಚರಿಕೆ! ಪರೀಕ್ಷೆಗೆ ಹೋಗುವ ಮುನ್ನ ನೀವು ತಿಳಿದುಕೊಳ್ಳಬೇಕಾದ ಒಂದು ಮಹತ್ವದ ವಿಷಯವಿದೆ...


📌 ಕರ್ನಾಟಕ ಲೋಕಸೇವಾ ಆಯೋಗ (KPSC)ದ ಅಧಿಸೂಚನೆ ಸಂಖ್ಯೆ ಪಿಎಸ್‌ಸಿ 1 ಆರ್‌ಟಿಬಿ-2/2023, ದಿನಾಂಕ: 13-03-2024ರನ್ವಯ ಹೈ.ಕ ವೃಂದದಲ್ಲಿನ ವಿಭಿನ್ನ ಗ್ರೂಪ್ "ಬಿ" ಹುದ್ದೆಗಳಿಗೆ ಸಂಬಂಧಿಸಿದಂತೆ ಕನ್ನಡ ಭಾಷಾ ಪರೀಕ್ಷೆಯನ್ನು 26-07-2025ರಂದು ನಡೆಸಲಾಗುತ್ತದೆ.


ಹಾಗಾದರೆ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಬೇಕಾದರೆ ಏನು ಮಾಡಬೇಕು? ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ನೋಡಲು ಯಾವ ಲಿಂಕ್ ಬಳಸಬೇಕು? ಪರೀಕ್ಷೆ ಬರೆಯಲು ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು? 


ಈ ಸಂಬಂಧ, ಅರ್ಹ ಅಭ್ಯರ್ಥಿಗಳಿಗೆ ದಿನಾಂಕ: 19-07-2025 ರಿಂದ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಆಯೋಗದ ಅಧಿಕೃತ ವೆಬ್‌ಸೈಟ್
👉 https://kpsconline.karnataka.gov.in
ಇದರಿಂದ ಪಡೆಯಬಹುದಾಗಿದೆ.


🔗ವಿನಾಯಿತಿ ಪಡಿದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ :
ಕನ್ನಡ ಭಾಷೆಯನ್ನು SSLC ಅಥವಾ ಅದಕ್ಕಿಂತ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು, ಹಾಗೆಯೇ ಇತ್ತೀಚೆಗೆ ಯಾವುದೇ ನೇಮಕಾತಿ ಸಂಸ್ಥೆಯು ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು, ಈ ಬಾರಿಯ 2025ರ ಜುಲೈ 26ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ಪಡೆಯಲಾಗಿದೆ.


ಹೀಗಾಗಿ, ಇಂತಹ ಅಭ್ಯರ್ಥಿಗಳು ಹಾಲ್ ಟಿಕೆಟ್ ಬಿಡುಗಡೆ ಆಗಿದರೂ ಕೂಡಾ, ಈ ಪರೀಕ್ಷೆಯಲ್ಲಿ ಹಾಜರಾಗಬೇಕಾಗಿರುವ ಅಗತ್ಯವಿಲ್ಲ.


📢ಮಾಹಿತಿ ಸೂಚನೆ :
* ಬಾಕಿ ಎಲ್ಲಾ ಅಭ್ಯರ್ಥಿಗಳು ತಮ್ಮ ಹಾಲ್ ಟಿಕೆಟ್ ಅನ್ನು ಸಮಯಕ್ಕೆ ಮುಂಚಿತವಾಗಿ ಡೌನ್‌ಲೋಡ್ ಮಾಡಿಕೊಂಡು, ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಕೆಪಿಎಸ್ಸಿ ಸೂಚಿಸಿದೆ.
* ಪ್ರವೇಶ ಪತ್ರವಿಲ್ಲದ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಪ್ರವೇಶ ನೀಡಲಾಗುವುದಿಲ್ಲ.


ಹೆಚ್ಚಿನ ಮಾಹಿತಿಗಾಗಿ ಹಾಗೂ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿರಿ.


📄 ಮುಖ್ಯ ಸೂಚನೆಗಳು:
- ಪರೀಕ್ಷೆಯ ದಿನಾಂಕ: 26-07-2025
- ಪ್ರವೇಶ ಪತ್ರ ಡೌನ್‌ಲೋಡ್ ದಿನಾಂಕ: 19-07-2025 ರಿಂದ
- ಅಧಿಕೃತ ವೆಬ್‌ಸೈಟ್: https://kpsconline.karnataka.gov.in


📌 ಪರೀಕ್ಷೆಯ ಕೊನೆಯ ದಿನಗಳಲ್ಲಿ ಓದಿನ ಜೊತೆ-ಜೊತೆಗೆ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ. ಇದು ನಿಮ್ಮ ಕನಸಿನ ಉದ್ಯೋಗಕ್ಕೆ ಸೇತುವೆಯಾಗಿದೆ!

Comments