Loading..!

ಕರ್ನಾಟಕ ಲೋಕಸೇವಾ ಆಯೋಗದ (KPSC) ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ದಿನಾಂಕ ಮರು ನಿಗದಿ.!
Published by: Bhagya R K | Date:5 ಆಗಸ್ಟ್ 2024
not found

ಕರ್ನಾಟಕ ಲೋಕಸೇವಾ ಆಯೋಗವು 2024-25 ನೇ ಸಾಲಿನ ಗೆಜೆಟೆಡ್ ಪ್ರೊಬೇಷನ‌ರ್ (KAS) ಗ್ರೂಪ್ - 'ಎ' ಮತ್ತು ಗ್ರೂಪ್- 'ಬಿ' ವೃಂದದ 384 ಹುದ್ದೆಗಳ ನೇಮಕಾತಿಗಾಗಿ 26/02/2024 ರಂದು ಅಧಿಸೂಚನೆಯನ್ನು ಹೊರಡಿಸಿಲಾಗಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿಯ ಮೊದಲನೇ ಹಂತವಾಗಿ ಪೂರ್ವಭಾವಿ (Preliminary) ಪರೀಕ್ಷೆಯನ್ನು 25/08/2024 ರಂದು ನಡೆಸಲು ನಿರ್ಧರಿಸಲಾಗಿತ್ತು, ಅದೇ ದಿನ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ (IBPS) ಗುಮಾಸ್ತ ಹುದ್ದೆಗಳ ಪರೀಕ್ಷೆ ಇರುವುದರಿಂದ ಹಾಗೂ ಹಲವಾರು ಅಭ್ಯರ್ಥಿಗಳು ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಮನವಿ ಸಲ್ಲಿಸಿರುವುದರಿಂದಾಗಿ ಪೂರ್ವಭಾವಿ (Preliminary) ಪರೀಕ್ಷೆಯನ್ನು ಮುಂದೂಡಲಾಗಿದ್ದು, ದಿನಾಂಕ 27 ಆಗಸ್ಟ್ 2024 ರ ಮಂಗಳವಾರ ಪೂರ್ವಭಾವಿ (Preliminary) ಪರೀಕ್ಷೆಯ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಈ ಕುರಿತ ಸವಿವರವಾದ ಮಾಹಿತಿ ಈ ಕೆಳಗೆ ನೀಡಿರುವ PDF ನಲ್ಲಿ ಲಭ್ಯ, ಈ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೇ KPSC ಜಾಲತಾಣದಲ್ಲಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ...


** ಈ ಕುರಿತ ಅಧಿಕೃತ ಜಾಲತಾಣದಲ್ಲಿ ಮಾಹಿತಿ ಪ್ರಕಟಗೊಂಡ ಬಳಿಕವಷ್ಟೇ ಅಭ್ಯರ್ಥಿಗಳು ದಿನಾಂಕವನ್ನು ಖಚಿತಪಡಿಸಿಕೊಳ್ಳಬಹುದು, ಸಧ್ಯಕ್ಕೆ ಇದು ಕೇವಲ ನಿಮಗೆ ಮಾಹಿತಿಯಾಗಿರುತ್ತದೆ ಅಷ್ಟೇ. 

Comments

User ಆಗ. 6, 2024, 8:55 ಪೂರ್ವಾಹ್ನ
User ಆಗ. 6, 2024, 12:07 ಅಪರಾಹ್ನ