ಕರ್ನಾಟಕ ಲೋಕಸೇವಾ ಆಯೋಗದ (KPSC) ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಪ್ರವೇಶ ಪತ್ರಗಳ ಕುರಿತ ಲೇಟೆಸ್ಟ್ ಮಾಹಿತಿ ನಿಮಗಾಗಿ
Published by: Basavaraj Halli | Date:8 ಆಗಸ್ಟ್ 2024

ಕರ್ನಾಟಕ ಲೋಕಸೇವಾ ಆಯೋಗವು 2024-25 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ (KAS) ಗ್ರೂಪ್ - 'ಎ' ಮತ್ತು ಗ್ರೂಪ್- 'ಬಿ' ವೃಂದದ 384 ಹುದ್ದೆಗಳ ನೇಮಕಾತಿಗಾಗಿ 26/02/2024 ರಂದು ಅಧಿಸೂಚನೆಯನ್ನು ಹೊರಡಿಸಿಲಾಗಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿಯ ಮೊದಲನೇ ಹಂತವಾಗಿ ಪೂರ್ವಭಾವಿ (Preliminary) ಪರೀಕ್ಷೆಯನ್ನು 25/08/2024 ರಂದು ನಡೆಸಲು ನಿರ್ಧರಿಸಲಾಗಿತ್ತು, ಅದೇ ದಿನ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ (IBPS) ಗುಮಾಸ್ತ ಹುದ್ದೆಗಳ ಪರೀಕ್ಷೆ ಇರುವುದರಿಂದ ಹಾಗೂ ಹಲವಾರು ಅಭ್ಯರ್ಥಿಗಳು ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಮನವಿ ಸಲ್ಲಿಸಿರುವುದರಿಂದಾಗಿ ಪೂರ್ವಭಾವಿ (Preliminary) ಪರೀಕ್ಷೆಯನ್ನು ಮುಂದೂಡಲಾಗಿದ್ದು, ದಿನಾಂಕ 27 ಆಗಸ್ಟ್ 2024 ರ ಮಂಗಳವಾರ ಪೂರ್ವಭಾವಿ (Preliminary) ಪರೀಕ್ಷೆಯ ಹೊಸ ದಿನಾಂಕವನ್ನು ನಿಗದಿಪಡಿಸಲಾಗಿದೆ.
** ದಿನಾಂಕದಲ್ಲಿ ಯಾವುದೇ ಬದಲಾವಣೆಗಳಿರುವದಿಲ್ಲ ಎಂದು KPSC ಯು ಇದೀಗ ಸ್ಪಷ್ಟ ಪಡಿಸಿದ್ದು, ದಿನಾಂಕ 15 ಆಗಸ್ಟ್ 2024 ರ ನಂತರ ಪ್ರವೇಶ ಪತ್ರಗಳನ್ನು ಇಲಾಖಾ ಜಾಲತಾಣದಲ್ಲಿ ಡೌನ್ಲೋಡ್ ಮಾಡಿಕೊಳ್ಳಲ್ಲು ಅವಕಾಶ ನೀಡಲಾಗುವುದೆಂದು ಇದೀಗ ತಿಳಿಸಿದೆ .
* ಈ ಕುರಿತ ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಿದ KPSC ಯಾ ಅಧಿಕೃತ ಪ್ರಕಟಣೆಯನ್ನು ಗಮನಿಸಬಹುದು.

Comments