Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ ಗ್ರೂಪ್-ಸಿ ಹುದ್ದೆಗಳ ಪರೀಕ್ಷೆ ಕುರಿತು ಇತ್ತೀಚಿನ ಮಾಹಿತಿ ನಿಮಗಾಗಿ
Published by: Basavaraj Halli | Date:13 ಡಿಸೆಂಬರ್ 2021
not found
ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 31 ಜೂಲೈ 2020 ರಂದು ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿತ್ತು,

ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಪದವಿ ಪೂರ್ವ ಮಟ್ಟದ ವಿದ್ಯಾರ್ಹತೆಯುಳ್ಳ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಇದೆ ದಿನಾಂಕ 19 ಡಿಸೆಂಬರ್ 2021ರಂದು ನಿಗದಿಪಡಿಸಿದ್ದು, ರಾಜ್ಯದ ಒಟ್ಟು 29 ಜಿಲ್ಲಾ ಕೇಂದ್ರಗಳು ಹಾಗೂ ಜಮಖಂಡಿ, ಬೈಲಹೊಂಗಲ, ಮಾನ್ವಿ, ಸಿಂಧನೂರು, ಗಂಗಾವತಿ, ಕುಮಟಾ, ಶಹಾಪುರ ಒಟ್ಟು 7 ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಸದರಿ ಪರೀಕ್ಷೆಗೆ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಇಲಾಖಾ ಜಾಲತಾಣದಿಂದ ಡೌನ್ ಲೋಡ್ ಮಾಡಿಕೊಂಡು ಅಲ್ಲೇ ನಮೂದಿಸಿರುವ ನೋಂದಣಿ ಸಂಖ್ಯೆ ಹಾಗೂ ವಿಳಾಸದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಪ್ರಕಟಣೆ ಹೊರಡಿಸಿದೆ.



Comments