Loading..!

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ FDA ಮತ್ತು SDA ಹುದ್ದೆಗಳ ಇಲಾಖಾ ಆದ್ಯತೆಗೆ ಸಲ್ಲಿಸಲು ಅವಕಾಶ ನೀಡಿರುವ ಕುರಿತು
| Date:27 ಸೆಪ್ಟೆಂಬರ್ 2019
not found
ಕರ್ನಾಟಕ ರಾಜ್ಯ ಲೋಕಸೇವಾ ಆಯೋಗವು ದಿನಾಂಕ 01 ಸೆಪ್ಟೆಂಬರ್ 2017 ರಂದು FDA ಮತ್ತು SDA ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಪ್ರಥಮ ದರ್ಜೆ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಆಯ್ಕೆಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳಿಂದ ಯಾವುದೇ ಇಲಾಖಾ ಆದ್ಯತೆಯನ್ನು ಪಡೆದಿರುವುದಿಲ್ಲ ಆದ್ದರಿಂದ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾದ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಸಲ್ಲಿಸಲಾದ ದಾಖಲೆಗಳು ಅದರ ಷರಾಗಳಿಗೆ ಒಳಪಟ್ಟಂತೆ ದಿನಾಂಕ 21 ಸೆಪ್ಟೆಂಬರ್ 2019 ರಿಂದ ದಿನಾಂಕ 05 ಅಕ್ಟೋಬರ್ 2019 ರೊಳಗೆ ಈ ಕೆಳಗೆ ನೀಡಿರುವ ಆಯೋಗದ ಅಧಿಕೃತ ಜಾಲತಾಣದ ಲಿಂಕ್ ಅನ್ನು ಬಳಸಿಕೊಂಡು ಅಭ್ಯರ್ಥಿಗಳು ತಮ್ಮ ಆದ್ಯತೆಯನ್ನು ತಪ್ಪದೆ ಆನ್ಲೈನ್ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಅಭ್ಯರ್ಥಿಗಳು ಇಲಾಖಾ ಆದ್ಯತೆಯನ್ನು ನೀಡಲು ತಪ್ಪಿದಲ್ಲಿ ಅಥವಾ ಅಪೂರ್ಣವಾದ ಆದ್ಯತೆಯನ್ನು ನೀಡಿದಲ್ಲಿ ನಿಯಮಗಳನುಸಾರ ಆಯೋಗ ಇಲಾಖೆಯ ಹಂಚಿಕೆಯನ್ನು ಮಾಡಲು ಮಾಡಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಲಾಖಾ ಆದ್ಯತೆಯನ್ನು ಆನ್ಲೈನ್ ಮೂಲಕ ಮಾತ್ರವೇ ಸಲ್ಲಿಸಲು ಅವಕಾಶ ನೀಡಲಾಗಿದ್ದು ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಲಾಗುವ ಯಾವುದೇ ಆದ್ಯತೆಗಳನ್ನು ಪರಿಗಣಿಸುವುದಿಲ್ಲವೆಂದು ಇಲಾಖಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments