ಕರ್ನಾಟಕ ಲೋಕಸೇವಾ ಆಯೋಗದಿಂದ FDA ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಮಹತ್ವದ ಮಾಹಿತಿ
Published by: Basavaraj Halli | Date:25 ಸೆಪ್ಟೆಂಬರ್ 2021

ಕರ್ನಾಟಕ ಲೋಕಸೇವಾ ಆಯೋಗವು 2019ನೇ ಸಾಲಿನ ವಿವಿಧ ಇಲಾಖೆಗಳಲ್ಲಿನ ಸಹಾಯಕರು ಅಥವಾ ಪ್ರಥಮ ದರ್ಜೆ ಸಹಾಯಕರ(FDA) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು, ಹಾಗೂ 28 ಫೆಬ್ರವರಿ 2021ರಂದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಯಶಸ್ವಿಯಾಗಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿತ್ತು, ಹಾಗೂ ಇತ್ತೀಚೆಗಷ್ಟೇ ದಾಖಲಾತಿ ಪರಿಶೀಲನೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಒಂದು ಅನುಪಾತ ಮೂರು ರಂತೆ (1:3) ಆಯ್ಕೆ ಪಟ್ಟಿಯನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿತ್ತು ಸದರಿ ನೇಮಕಾತಿಗೆ ಸಂಬಂಧಿಸಿದಂತೆ,
ಆಯ್ಕೆ ಪಟ್ಟಿಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗಾಗಿ ಪ್ರಕಟಣೆ ಹೊರಡಿಸಿದ್ದು, ಅಭ್ಯರ್ಥಿಗಳು ಕೋರಿದ ಮೀಸಲಾತಿಗಳಿಗೆ ಅನುಗುಣವಾಗಿ ಪೂರಕ ಪ್ರಮಾಣ ಪತ್ರಗಳು, ಜನ್ಮದಿನಾಂಕ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪ್ರಮಾಣಪತ್ರಗಳನ್ನು ನಿಗದಿಪಡಿಸಿದ ಕೊನೆಯ ದಿನಾಂಕವಾದ 16 ಅಕ್ಟೋಬರ್ 2021ರೊಳಗೆ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿದೆ.
ದಾಖಲಾತಿಗಳನ್ನು ಪೋಸ್ಟ್ ಮಾಡಬೇಕಾದ ವಿಳಾಸ :
ಕಾರ್ಯದರ್ಶಿಗಳು,
ಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ಸೌಧ, ಬೆಂಗಳೂರು - 560001
* ಅರ್ಹತೆ ಪಡೆದ ಅಭ್ಯರ್ಥಿಗಳು ಇನ್ನೂ ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖೆ ಪ್ರಕಟಿಸಿರುವ ಅಧಿಕೃತ ಪ್ರಕಟಣೆಯನ್ನು ಡೌನ್ ಲೋಡ್ ಮಾಡಿಕೊಂಡು ಮಾಹಿತಿಯನ್ನು ಪಡೆಯಬಹುದಾಗಿದೆ.

Comments