KPSC
14 ಮಾರ್ಚ್ 2020
6 years ago
Published by Surekha Halli
ಕೆಪಿಎಸ್ ಸಿ ಯಿಂದ FDA ಹುದ್ದೆಗಳ ದಾಖಲಾತಿ ಪರಿಶೀಲನೆ ಮುಂದೂಡಿಕೆ
ಕೆಪಿಎಸ್ ಸಿ ಆಯೋಗವು 2018 ನೇ ಸಾಲಿನ ವಿವಿಧ ನ್ಯಾಯಾಂಗ ಘಟಕಗಳಲ್ಲಿನ 269 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲು ಅಭ್ಯರ್ಥಿಗಳ ಮೂಲ ದಾಖಲಾತಿಗಳ ಪರಿಶೀಲನಾ ದಿನಾಂಕವನ್ನು ಈ ಮೊದಲೇ 16-03-2020 ರಿಂದ 20-03-2020 ಎಂದು ನಿಗದಿಪಡಿಸಿದ್ದರು, ಹಾಗೂ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಸಹ ಕಳುಹಿಸಿಕೊಡಲಾಗಿತ್ತು.
ಆದರೆ ರಾಜ್ಯದಲ್ಲಿ ಕೊರೋನಾದ ಭೀತಿ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರವು ಶನಿವಾರ ದಿಂದ ಒಂದು ವಾರದವರೆಗೆ ರಾಜ್ಯದಂತ ಬಹು ಸಂಖ್ಯೆಯಲ್ಲಿ ಜನರು ಸೇರುವ ಸಭೆ, ಸಮಾರಂಭ, ಸಮಾವೇಶ, ಶಾಲಾ /ಕಾಲೇಜು, ಕೋಚಿಂಗ್ ಕ್ಲಾಸ್, ಕಾರ್ಯಾಗಾರ ಮುಂತಾದವುಗಳನ್ನು ಸ್ಥಗಿತಗೊಳಿಸಿದ್ದಾರೆ.
ಆದ್ದರಿಂದ 16-03-2020 ರಿಂದ 20-03-2020 ರವರೆಗೆ ನಡೆಯಬೇಕಿದ್ದ ದಾಖಲಾತಿ ಪರಿಶೀಲನೆಯನ್ನು ಅನಿರ್ದಿಷ್ಠಾವಧಿಯವರೆಗೆ ಮುಂದೂಡಲಾಗಿದೆ. ಮೂಲ ದಾಖಲಾತಿಗಳ ಪರಿಶೀಲನಾ ದಿನಾಂಕವನ್ನು ಅಭ್ಯರ್ಥಿಗಳಿಗೆ ನಂತರದಲ್ಲಿ ತಿಳಿಸಲಾಗುವುದು ಎಂದು KPSC ಯು ಪ್ರಕಟಣೆಯಲ್ಲಿ ತಿಳಿಸಿದೆ.
Comments