KPSC ಯಿಂದ FDA ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪ್ರವೇಶ ಪತ್ರಗಳು ಇದೀಗ ಪ್ರಕಟಗೊಂಡಿವೆ
Published by: Basavaraj Halli | Date:16 ಜನವರಿ 2021

ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 23 ಜನವರಿ 2021 (ಶನಿವಾರ) ಹಾಗೂ ದಿನಾಂಕ 24 ಜನವರಿ 2021 (ಭಾನುವಾರ)ಗಳಂದು ನಡೆಸಲಿರುವ ವಿವಿಧ ಇಲಾಖೆಗಳಲ್ಲಿನ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ತನ್ನ ಅಧಿಕೃತ ಜಾಲತಾಣದಲ್ಲಿ ಅವಕಾಶವನ್ನು ಕಲ್ಪಿಸಿದೆ.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಬಳಕೆದಾರರ ಹೆಸರು (User Name) ಮತ್ತು ಪಾಸ್ ವರ್ಡ್ ಗಳ ಮೂಲಕ ತಮ್ಮ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಅದರ ಪ್ರಿಂಟ್ ಪಡೆದು ನಿಗದಿಪಡಿಸಿದ ದಿನಾಂಕದಂದು ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗಲು KPSC ಪ್ರಕಟನೆಯಲ್ಲಿ ತಿಳಿಸಿದೆ.

Comments