📢 KPSC ಯಿಂದ ಪ್ರಮುಖ ನೇಮಕಾತಿಗಳಿಗೆ ದಾಖಲೆ ಪರಿಶೀಲನೆ ದಿನಾಂಕ ಪ್ರಕಟ!
ಕರ್ನಾಟಕ ಲೋಕಸೇವಾ ಆಯೋಗ (KPSC)ವು ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆ ಪರಿಶೀಲನೆ (Document Verification) ಕುರಿತಂತೆ ಅಧಿಕೃತ ಪತ್ರಿಕಾ ಪ್ರಕಟಣೆಯನ್ನು 11-12-2025ರಂದು ಬಿಡುಗಡೆ ಮಾಡಿದೆ. ಈ ಪ್ರಕಟಣೆಯಂತೆ,ಆಯ್ಕೆಯಾದ ಅಭ್ಯರ್ಥಿಗಳಿಗೆ 17-12-2025 ರಿಂದ 23-12-2025ರ ವರೆಗೆ ಹಂತ ಹಂತವಾಗಿ ಪರಿಶೀಲನೆ ನಡೆಯಲಿದೆ.
KPSC ನಡೆಸಿದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
KPSCಯ ವಿವಿಧ ಹುದ್ದೆಗಳ ದಾಖಲೆ ಪರಿಶೀಲನೆ ನಡೆಯುವ ಸಮಯ ಮತ್ತು ದಿನಾಂಕ.
➡️ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) 92 ಹುದ್ದೆಗಳಿಗೆ : 17-12-2025 ಮತ್ತು 18-12-2025 ಬೆಳಿಗ್ಗೆ 10.00 ಗಂಟೆ ಹಾಗೂ ಮಧ್ಯಾಹ್ನ 02.30 ಗಂಟೆಯವರೆಗೆ ದಾಖಲೆ ಪರಿಶೀಲನೆ ನಡೆಯಲಿದೆ.
➡️ ಭೂಮಾಪನ, ಕಂದಾಯ ವ್ಯವಸ್ಥೆ, ಮತ್ತು ಭೂ ದಾಖಲೆಗಳ ಇಲಾಖೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು 24 ಹುದ್ದೆಗಳಿಗೆ : 19-12-2025 ಬೆಳಿಗ್ಗೆ 10.00 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ.
➡️ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಪತ್ರಾಂಕಿತ ವ್ಯವಸ್ಥಾಪಕರು/ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು 21 ಹುದ್ದೆಗಳಿಗೆ : 19-12-2025 ಮಧ್ಯಾಹ್ನ 02.30 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ.
➡️ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೇಶಕರು 20 ಹುದ್ದೆಗಳಿಗೆ : 20-12-2025 ಬೆಳಿಗ್ಗೆ 10.00 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ.
➡️ ಕಾರ್ಖಾನೆಗಳು, ಬಾಯರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ಕಾರ್ಖಾನೆಗಳ ಸಾಯಕ ನಿರ್ದೇಶಕರು 07 ಹುದ್ದೆಗಳಿಗೆ : 20-12-2025 ಮಧ್ಯಾಹ್ನ 02.30 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ.
➡️ ಅಂತರ್ಜಲ ನಿರ್ದೇಶನಾಲಯ ದಲ್ಲಿನ ಭೂ ವಿಜ್ಞಾನಿ 10 ಹುದ್ದೆಗಳಿಗೆ : 20-12-2025 ಮಧ್ಯಾಹ್ನ 02.30 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ.
➡️ ಕಾರ್ಖಾನೆಗಳು, ಬಾಯರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯಲ್ಲಿ ಬಾಯರ್ ಗಳ ಸಹಾಯಕ ನಿರ್ದೇಶಕರು 03 ಹುದ್ದೆಗಳಿಗೆ : 20-12-2025 ಮಧ್ಯಾಹ್ನ 02.30 ಗಂಟೆಗೆ ದಾಖಲೆ ಪರಿಶೀಲನೆ ನಡೆಯಲಿದೆ.
➡️ ಜಲ ಸಂಪನ್ಮೂಲ ಇಲಾಖೆ ಸಹಾಯಕ ಇಂಜಿನಿಯರ್ (ಸಿವಿಲ್) (ವಿಭಾಗ-1) 90 ಹುದ್ದೆಗಳಿಗೆ : 22-12-2025 ಮತ್ತು 23-12-2025 ಬೆಳಿಗ್ಗೆ 10.00 ಗಂಟೆ ಹಾಗೂ ಮಧ್ಯಾಹ್ನ 02.30 ಗಂಟೆಯವರೆಗೆ ದಾಖಲೆ ಪರಿಶೀಲನೆ ನಡೆಯಲಿದೆ.
ಈಗಾಗಲೇ ಅಧಿಸೂಚಿದ KEA & KPSC ಗ್ರೂಪ್-ಸಿ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
KPSC ದಾಖಲೆ ಪರಿಶೀಲನೆಗೆ ಬೇಕಾದ ಅಗತ್ಯ ದಾಖಲೆಗಳು
1️⃣ ಕಡ್ಡಾಯ ದಾಖಲೆಗಳು (Mandatory Documents)
👉 ಎಲ್ಲಾ ದಾಖಲೆಗಳ ಮೂಲ ಪ್ರತಿಗಳು (Original) ಹಾಗೂ 2–3 ಜೆರಾಕ್ಸ್ ಪ್ರತಿಗಳು ತರಬೇಕು.
KPSC ಕಾಲ್ ಲೆಟರ್ / ದಾಖಲೆ ಪರಿಶೀಲನೆ ಸೂಚನೆ ಪತ್ರ
ಆನ್‌ಲೈನ್ ಅರ್ಜಿ ಪ್ರತಿಯನ್ನು (Application Printout)
SSLC / 10ನೇ ತರಗತಿ ಅಂಕಪಟ್ಟಿ
ಜನ್ಮ ದಿನಾಂಕ ದೃಢೀಕರಣಕ್ಕಾಗಿ
PUC / ಡಿಪ್ಲೊಮಾ / ಡಿಗ್ರಿ ಅಂಕಪಟ್ಟಿಗಳು
ಅರ್ಹತಾ ಪದವಿ ಪ್ರಮಾಣ ಪತ್ರ (Degree Certificate / Provisional Certificate)
2️⃣ ಗುರುತಿನ ದಾಖಲೆಗಳು (Identity Proof) : ಕೆಳಗಿನವುಗಳಲ್ಲಿ ಯಾವುದಾದರೂ ಒಂದು:
ಆಧಾರ್ ಕಾರ್ಡ್
ವೋಟರ್ ಐಡಿ
ಪಾಸ್‌ಪೋರ್ಟ್
ಡ್ರೈವಿಂಗ್ ಲೈಸೆನ್ಸ್
3️⃣ ವರ್ಗ/ಮೀಸಲು ಸಂಬಂಧಿತ ದಾಖಲೆಗಳು : (ಅರ್ಜಿ ಸಲ್ಲಿಸುವಾಗ ಮೀಸಲು ಕೇಳಿದ್ದಲ್ಲಿ ಮಾತ್ರ)
ಜಾತಿ ಪ್ರಮಾಣ ಪತ್ರ (Caste Certificate)
SC / ST / Cat-I / 2A / 2B / 3A / 3B
ಮಾನ್ಯ ಅವಧಿಯಲ್ಲಿರುವುದು ಕಡ್ಡಾಯ
ಆದಾಯ ಪ್ರಮಾಣ ಪತ್ರ (Income Certificate)
ಶುಲ್ಕ ವಿನಾಯಿತಿ / ಮೀಸಲುಗಾಗಿ
ಕನ್ನಡ ಮಾಧ್ಯಮ ಪ್ರಮಾಣ ಪತ್ರ (Kannada Medium Certificate) – ಅನ್ವಯಿಸಿದರೆ
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ (Rural Certificate) – ಅನ್ವಯಿಸಿದರೆ
4️⃣ ವಿಶೇಷ ವರ್ಗದ ದಾಖಲೆಗಳು (If Applicable)
ವಿಕಲಚೇತನ ಪ್ರಮಾಣ ಪತ್ರ (PwD Certificate) – ಸರ್ಕಾರದ ಮಾನ್ಯ ಆಸ್ಪತ್ರೆಯಿಂದ
ಹಳೆಯ ಸೈನಿಕ ಪ್ರಮಾಣ ಪತ್ರ (Ex-Serviceman Certificate)
ವಿಧವಾ ಪ್ರಮಾಣ ಪತ್ರ (Widow Certificate) – ಮಹಿಳಾ ಅಭ್ಯರ್ಥಿಗಳಿಗೆ
ಕ್ರೀಡಾ ಕೋಟಾ ಪ್ರಮಾಣ ಪತ್ರ – ಮಾನ್ಯ ಸಂಸ್ಥೆಯಿಂದ
5️⃣ ಅನುಭವ ಸಂಬಂಧಿತ ದಾಖಲೆಗಳು : (ಅನುಭವ ಕಡ್ಡಾಯವಾಗಿರುವ ಹುದ್ದೆಗಳಿಗಾಗಿ)
ಅನುಭವ ಪ್ರಮಾಣ ಪತ್ರ (Experience Certificate)
ನೇಮಕಾತಿ ಆದೇಶ / ಸೇವಾ ಪ್ರಮಾಣ ಪತ್ರ (Appointment Order)
ಕರ್ನಾಟಕ ಲೋಕಸೇವಾ ಆಯೋಗ (KPSC) ಯಲ್ಲಿ ಹೈದೆರಾಬಾದ್ ಕರ್ನಾಟಕ (Non-HK) ಭಾಗದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ 1:3 ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಯ (Document Verification) ದಿನಾಂಕವನ್ನು ಇದೀಗ ಪ್ರಕಟಿಸಲಾಗಿದೆ.
ದಿನಾಂಕ: 2025ರ ಡಿಸೆಂಬರ್ 17 ರಿಂದ 23 ರವರೆಗೆ.
ಸ್ಥಳ: ಕರ್ನಾಟಕ ಲೋಕಸೇವಾ ಆಯೋಗ (KPSC), ಉದ್ಯೋಗ ಸೌಧ, ಬೆಂಗಳೂರು-560001.
ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಮಾಹಿತಿ :
🔹 ಪರಿಶೀಲನೆ ಆರಂಭ ದಿನಾಂಕ:👉 17-12-2025
🔹 ಪರಿಶೀಲನೆ ಅಂತಿಮ ದಿನಾಂಕ:👉 23-12-2025
🔹 ಪರಿಶೀಲನೆ ಸಮಯ: ಬೆಳಿಗ್ಗೆ: 10.00 ಗಂಟೆ, ಮಧ್ಯಾಹ್ನ: 02.30 ಗಂಟೆ
🔹 ಪರಿಶೀಲನೆ ನಡೆಯುವ ದಿನಗಳು:
17-12-2025
18-12-2025
19-12-2025
20-12-2025
22-12-2025
23-12-2025
(ಅಭ್ಯರ್ಥಿಗಳ ರೋಲ್ ಸಂಖ್ಯೆ / ಬ್ಯಾಚ್ ಅನುಸಾರ ದಿನಾಂಕ ಮತ್ತು ಸಮಯ ನಿಗದಿಪಡಿಸಲಾಗಿದೆ)
🚨 ಅಭ್ಯರ್ಥಿಗಳಿಗೆ ಮುಖ್ಯ ಸೂಚನೆಗಳು
✔ ಅಭ್ಯರ್ಥಿಗಳು ಮೂಲ ದಾಖಲೆಗಳು (Original Certificates) ಹಾಗೂ ಅವುಗಳ ಪ್ರಮಾಣಿತ ಪ್ರತಿಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
✔ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಹಾಜರಾಗದಿದ್ದಲ್ಲಿ, ಅಭ್ಯರ್ಥಿಯ ಅರ್ಹತೆ ರದ್ದಾಗುವ ಸಾಧ್ಯತೆ ಇದೆ.
✔ ದಾಖಲೆ ಪರಿಶೀಲನೆಗೆ ಸಂಬಂಧಿಸಿದ ಯಾವುದೇ ಬದಲಾವಣೆ ಅಥವಾ ಹೆಚ್ಚುವರಿ ಸೂಚನೆಗಳು KPSC ಅಧಿಕೃತ ವೆಬ್‌ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
✔ ಅರ್ಹತಾ ಪಟ್ಟಿಯಲ್ಲಿ (Eligibility List) 1:3 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಗಳಂದು ತಮ್ಮ ಎಲ್ಲಾ ಮೂಲ ದಾಖಲೆಗಳನ್ನು (Original Documents) ಮತ್ತು ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೊಂದಿಗೆ (Attested Xerox Copies) KPSC ಕಛೇರಿಗೆ ಹಾಜರಾಗುವುದು ಕಡ್ಡಾಯ.
📌ಹೆಚ್ಚಿನ ಮಾಹಿತಿಗಾಗಿ :
ಅಭ್ಯರ್ಥಿಗಳು ತಮ್ಮ ದಾಖಲೆ ಪರಿಶೀಲನೆಯ ದಿನಾಂಕ ಮತ್ತು ಸಮಯದ ವಿವರಗಳನ್ನು ಖಚಿತಪಡಿಸಿಕೊಳ್ಳಲು KPSCVaani ವೆಬ್‌ಸೈಟ್‌ಗೆ (KPSC Website) ಭೇಟಿ ನೀಡುವುದು ಅತ್ಯಗತ್ಯ. ದಾಖಲೆ ಪರಿಶೀಲನೆಗೆ ಸಂಬಂಧಿಸಿದಂತೆ ಆಯೋಗವು ಪ್ರಕಟಿಸುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು.
KPSCvaani ಯ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ






Comments