📢 ಬೆಂಗಳೂರು: ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ (KPSC) ಮೂಲಕ ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿದ್ದ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಇದೀಗ ಮಹತ್ವದ ಮಾಹಿತಿ ಹೊರಬಿದ್ದಿದೆ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿನ 92 ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳು, ಜಲಸಂಪನ್ಮೂಲ ಇಲಾಖೆಯಲ್ಲಿನ 90+10 ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳು ಹಾಗೂ ಇತರೆ ಗ್ರೂಪ್-ಸಿ (Non-HK ಭಾಗದ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ದಾಖಲೆ ಪರಿಶೀಲನೆ (Document Verification - DV) ಯ ವೇಳಾಪಟ್ಟಿ ಪ್ರಕಟಗೊಂಡಿದೆ.
ಈಗಾಗಲೇ ಅಧಿಸೂಚಿದ KEA & KPSC ಗ್ರೂಪ್-ಸಿ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
ಕರ್ನಾಟಕ ಲೋಕ ಸೇವಾ ಆಯೋಗ(KPSC)ದಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಜಲಸಂಪನ್ಮೂಲ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ ನೇಮಕಾತಿಯು ವಿವಿಧ ಹಂತಗಳನ್ನು ಈಗಾಗಲೇ ಪುನಗೊಳಿಸಿದ್ದು, ಇದೀಗ ದಾಖಲೆ ಪರಿಶೀಲನೆಯನ್ನು ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 1:3 ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ನಡೆಸಲಾಗುತ್ತಿದೆ. ದಾಖಲೆ ಪರಿಶೀಲನೆಯನ್ನು 2025 ಡಿಸೆಂಬರ್-17 ರಿಂದ 23 ರ ವರೆಗೆ KPSC ಕಚೇರಿಯಲ್ಲಿ ನಡೆಸಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 1:3 ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಅರ್ಹ ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ / ರಿಜಿಸ್ಟ್ರೇಷನ್ ಸಂಖ್ಯೆಯ ಆಧಾರದ ಮೇಲೆ ನಿಗದಿಪಡಿಸಿರುವ ದಿನಾಂಕ ಹಾಗೂ ಸಮಯದಲ್ಲಿ ಮೂಲ ದಾಖಲೆಗಳು ಮತ್ತು ಅಗತ್ಯ ಪ್ರತಿಗಳೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು. ದಾಖಲೆ ಪರಿಶೀಲನೆಗೆ ಹಾಜರಾಗಿ ನಿಮ್ಮ ಕನಸಿನ್ನ ವೃತ್ತಿಯನ್ನು ಪ್ರಾರಂಭಿಸಿ.
🗓️ ಪ್ರಮುಖ ದಿನಾಂಕಗಳು ಮತ್ತು ವಿವರಗಳು :
• ಪ್ರಮುಖ ನೇಮಕಾತಿಗಳು:
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿನ 92 ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳು.
- ಜಲಸಂಪನ್ಮೂಲ ಇಲಾಖೆಯಲ್ಲಿನ 90+10 ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗಳು.
- ಗ್ರೂಪ್-ಸಿ (Non-HK ಭಾಗದ) ವೃಂದದ ಇತರೆ ಹುದ್ದೆಗಳು.
• ಪ್ರಕ್ರಿಯೆ ಅವಧಿ: 2025 ರ ಡಿಸೆಂಬರ್ 17 ರಿಂದ ಡಿಸೆಂಬರ್ 23 ರವರೆಗೆ.
• ಆಯ್ಕೆ ಅನುಪಾತ: ನೇಮಕಾತಿ ನಿಯಮದ ಪ್ರಕಾರ 1:3 ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.
• ಸ್ಥಳ: ಕರ್ನಾಟಕ ಲೋಕಸೇವಾ ಆಯೋಗದ ಕಛೇರಿ, 'ಉದ್ಯೋಗ ಸೌಧ', ಬೆಂಗಳೂರು - 560001.
📌ಅಭ್ಯರ್ಥಿಗಳಿಗೆ ಸೂಚನೆ:
- ವೇಳಾಪಟ್ಟಿ ಬಿಡುಗಡೆ: KPSC ಯು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ BBMP AE ನೇಮಕಾತಿ ಮತ್ತು ಜಲಸಂಪನ್ಮೂಲ ಇಲಾಖೆ AE ನೇಮಕಾತಿ ಸೇರಿದಂತೆ ಗ್ರೂಪ್-ಸಿ ಹುದ್ದೆಗಳ DV ಗಾಗಿ ದಿನಾಂಕ ಮತ್ತು ಸಮಯದ ಸಮಗ್ರ ಟೈಮ್ ಟೇಬಲ್ ಅನ್ನು ಪ್ರಕಟಿಸಿದೆ.
- ಅರ್ಹತೆ ಪಡೆದ ಅಭ್ಯರ್ಥಿಗಳು ತಮ್ಮ ಹೆಸರು ಮತ್ತು ರೋಲ್ ಸಂಖ್ಯೆಯನ್ನು ಟೈಮ್ ಟೇಬಲ್‌ನಲ್ಲಿ ಪರಿಶೀಲಿಸಿಕೊಳ್ಳುವುದು ಕಡ್ಡಾಯ.
- ನಿಗದಿತ ದಿನಾಂಕ ಮತ್ತು ಸಮಯಕ್ಕೆ KPSC ಕಚೇರಿಗೆ ಅಗತ್ಯವಿರುವ ಎಲ್ಲ ಮೂಲ ದಾಖಲೆಗಳೊಂದಿಗೆ (Original Documents) ಹಾಜರಾಗಬೇಕು.
📄 ದಾಖಲೆ ಪರಿಶೀಲನೆಗೆ ತರಬೇಕಾದ ದಾಖಲೆಗಳು : ಅಭ್ಯರ್ಥಿಗಳು ಕೆಳಕಂಡ ಮೂಲ ದಾಖಲೆಗಳು ಹಾಗೂ ಸ್ವಯಂ ಪ್ರಮಾಣಿತ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು:
- SSLC / PUC / ಎಂಜಿನಿಯರಿಂಗ್ ಪದವಿ ಪ್ರಮಾಣಪತ್ರ
- ಅಂಕಪಟ್ಟಿಗಳು (Marks Cards)
- ಜಾತಿ ಮತ್ತು ಮೀಸಲಾತಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
- ಆದಾಯ ಪ್ರಮಾಣಪತ್ರ
- ಅಭ್ಯರ್ಥಿ ವಿವರಗಳ ಪ್ರಿಂಟ್ ಔಟ್
- ಸರ್ಕಾರ ನೀಡಿದ ಗುರುತಿನ ಚೀಟಿ (Aadhaar / Voter ID)
- ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ
1:3 ಅನುಪಾತದ ಮಹತ್ವ:
• ಆಯೋಗವು ಪ್ರತಿ ಹುದ್ದೆಗೆ ಮೂರು ಅರ್ಹ ಅಭ್ಯರ್ಥಿಗಳನ್ನು (1:3 ಅನುಪಾತದಲ್ಲಿ) ಮೂಲ ದಾಖಲೆ ಪರಿಶೀಲನೆಗೆ ಕರೆದಿದೆ. ಅಂತಿಮ ಆಯ್ಕೆಯು ಕೇವಲ ಒಂದು ಹುದ್ದೆಗೆ ಮಾತ್ರ ನಡೆಯಲಿದೆ.
• ಈ ಹಂತವು ನೇಮಕಾತಿಯಲ್ಲಿ ಅತ್ಯಂತ ನಿರ್ಣಾಯಕವಾಗಿದ್ದು, ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಮತ್ತು ಪ್ರಸ್ತುತಪಡಿಸಿದ ಎಲ್ಲಾ ದಾಖಲೆಗಳು ಅಧಿಸೂಚನೆಯ ನಿಯಮಗಳ ಪ್ರಕಾರ ಸರಿಯಾಗಿವೆಯೇ ಎಂಬುದನ್ನು ದೃಢೀಕರಿಸಲಾಗುತ್ತದೆ.
• ಯಾವುದೇ ಒಂದು ದಾಖಲೆ (ಉದಾಹರಣೆಗೆ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಗ್ರಾಮೀಣ/ಕನ್ನಡ ಮಾಧ್ಯಮ ಪ್ರಮಾಣಪತ್ರ ಅಥವಾ ಶೈಕ್ಷಣಿಕ ಅರ್ಹತೆ) ಅಧಿಸೂಚನೆಯ ಷರತ್ತುಗಳನ್ನು ಪೂರೈಸದಿದ್ದರೆ, ಅಂತಹ ಅಭ್ಯರ್ಥಿಯು ಅಂತಿಮ ಆಯ್ಕೆಯಿಂದ ಅನರ್ಹಗೊಳ್ಳುವ ಸಾಧ್ಯತೆ ಇರುತ್ತದೆ.
⚠️ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ :
🔹ದಾಖಲೆ ಪರಿಶೀಲನೆ ಅಂತಿಮ ಆಯ್ಕೆ ಪ್ರಕ್ರಿಯೆಯ ಪ್ರಮುಖ ಹಂತವಾಗಿದೆ
🔹ಅಪೂರ್ಣ ದಾಖಲೆಗಳು ಅಥವಾ ಗೈರು ಹಾಜರಾತಿ ಕಂಡುಬಂದಲ್ಲಿ ಅಭ್ಯರ್ಥಿತ್ವ ರದ್ದಾಗುವ ಸಾಧ್ಯತೆ ಇದೆ.
🔹ನಿಗದಿತ ದಿನಾಂಕ ತಪ್ಪಿದರೆ ಮತ್ತೊಂದು ಅವಕಾಶ ಇರುವುದಿಲ್ಲ
🔹ಎಲ್ಲಾ ವಿವರಗಳನ್ನು KPSC ಅಧಿಕೃತ ಅಧಿಸೂಚನೆಯ ಪ್ರಕಾರ ಪರಿಶೀಲಿಸುವುದು ಕಡ್ಡಾಯ
📝 ಸಾರಾಂಶ : BBMP ಮತ್ತು ಜಲಸಂಪನ್ಮೂಲ ಇಲಾಖೆಯ Assistant Engineer (Civil) ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿ 1:3 ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ಡಿಸೆಂಬರ್ 17–23, 2025 ರೊಳಗೆ KPSC ಕಚೇರಿಯಲ್ಲಿ ನಡೆಯುವ ದಾಖಲೆ ಪರಿಶೀಲನೆಗೆ ತಪ್ಪದೆ ಹಾಜರಾಗಬೇಕು. ಇದು ನೇಮಕಾತಿಯ ಅಂತಿಮ ಹಂತಕ್ಕೆ ಅತ್ಯಂತ ನಿರ್ಣಾಯಕವಾಗಿದೆ.
📢 ಇನ್ನಷ್ಟು KPSC ಅಪ್‌ಡೇಟ್‌ಗಳಿಗಾಗಿ “KPSC Vaani”ಯೊಂದಿಗೆ ಸಂಪರ್ಕದಲ್ಲಿರಿ.
KPSC ನಡೆಸಿದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ






Comments