ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಯಬೇಕಿದ್ದ ದಾಖಲಾತಿ ಪರಿಶೀಲನೆ ರದ್ದು
Published by: Basavaraj Halli | Date:15 ಫೆಬ್ರುವರಿ 2021

ಕರ್ನಾಟಕ ಲೋಕಸೇವಾ ಆಯೋಗದಿಂದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 18 ಮತ್ತು 19 ಫೆಬ್ರವರಿ 2021 ರಂದು ನಿಗದಿಪಡಿಸಲಾಗಿದ್ದ ಮೂಲ ದಾಖಲಾತಿಗಳ ಪರಿಶೀಲನೆಯನ್ನು ಆಡಳಿತಾತ್ಮಕ ಕಾರಣಗಳಿಂದಾಗಿ ರದ್ದುಗೊಳಿಸಲಾಗಿದ್ದು, ಅಭ್ಯರ್ಥಿಗಳು ಆಯೋಗಕ್ಕೆ ಖುದ್ದಾಗಿ ಹಾಜರಾಗುವಂತಿಲ್ಲ, ಬದಲಿಗೆ ಈಗಾಗಲೇ ಕಳುಹಿಸಿರುವ ಸೂಚನಾಪತ್ರದಲ್ಲಿನ ನಿಯಮಗಳಿಗನುಗುಣವಾಗಿ ಆನ್ ಲೈನ್ ಅರ್ಜಿಯಲ್ಲಿ ನಮೂದಿಸಿರುವಂತೆ ನಿಮಗೆ ಅನ್ವಯಿಸುವ ಎಲ್ಲ ಪ್ರಮಾಣ ಪತ್ರಗಳ 2 ಸೆಟ್ ಜೆರಾಕ್ಸ್ ಪ್ರತಿಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ದಿನಾಂಕ 22 ಫೆಬ್ರುವರಿ 2021ರೊಳಗಾಗಿ ತ್ವರಿತ ಅಂಚೆ (ಸ್ಪೀಡ್ ಪೋಸ್ಟ್/Speed Post) ಮೂಲಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಿಕೊಡಬೇಕು.
ದಾಖಲಾತಿಗಳನ್ನು ಕಳುಹಿಸಿಕೊಡಬೇಕಾದ ವಿಳಾಸ:
ಕಾರ್ಯದರ್ಶಿಗಳು,
ಕರ್ನಾಟಕ ಲೋಕಸೇವಾ ಆಯೋಗ (ನೇಮಕಾತಿ ಶಾಖೆ-2)
ಉದ್ಯೋಗ ಸೌಧ, ಬೆಂಗಳೂರು-01

Comments