Loading..!

KPSCಯಿಂದ BBMPಯಲ್ಲಿನ ಕನ್ನಡ ಉಪನ್ಯಾಸಕರು ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಇದೀಗ ಪ್ರಕಟ
Published by: Yallamma G | Date:5 ಆಗಸ್ಟ್ 2025
Image not found

               ಕರ್ನಾಟಕ ಲೋಕಸೇವಾ ಆಯೋಗವು (KPSC) ಇದೀಗ BBMPಯಲ್ಲಿನ ಕನ್ನಡ ಉಪನ್ಯಾಸಕರ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಈಗಲೇ ಪರಿಶೀಲಿಸಬಹುದು. ಆಯ್ಕೆಪಟ್ಟಿಯನ್ನು ಹೇಗೆ ಪರಿಶೀಲಿಸುವುದು, ಆಕ್ಷೇಪಣೆಗಳನ್ನು ಹೇಗೆ ಸಲ್ಲಿಸುವುದು ಮತ್ತು ಮುಂದಿನ ಪ್ರಕ್ರಿಯೆ ಏನು ಎಂಬುದನ್ನು ಈಗ ನೋಡೋಣ. 


               ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 07-10-2024 ರಂದು ಅಧಿಸೂಚಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯಲ್ಲಿನ ಕನ್ನಡ ಉಪನ್ಯಾಸಕರು - 3 (ಬ್ಯಾ.ಲಾ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 


                  ಇದೀಗ ಕರ್ನಾಟಕ ಲೋಕ ಸೇವಾ ಆಯೋಗವು ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನಾಗರೀಕ ಸೇವೆಗಳ ನಿಯಮಗಳು 2021 ರ ಅನ್ವಯ ಸಿದ್ಧ ಪಡಿಸಿದ್ದು ಅಭ್ಯರ್ಥಿಗಳ ಮಾಹಿತಿಗಾಗಿ ಕರ್ನಾಟಕ ಲೋಕ ಸೇವಾ ಆಯೋಗವು(KPSC) ತನ್ನ ಇಲಾಖಾ ಜಾಲ ತಾಣದಲ್ಲಿ ಇದೀಗ ಪ್ರಕಟಿಸಿದೆ.   


             ಅಭ್ಯರ್ಥಿಗಳು ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಗೊಂಡ 7 ದಿನಗಳವಳಗಾಗಿ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ.
📝ಆಕ್ಷೇಪಣೆಗಳನ್ನು ಸಲ್ಲಿಸುವ ವಿಳಾಸ : 
ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು-560001 


                  ಈ ವಿಳಾಸಕ್ಕೆ ಮಾತ್ರ ತಲುಪುವಂತೆ ಕಳುಹಿಸತಕ್ಕದ್ದು, ಆಕ್ಷೇಪಣೆಗಳನ್ನು ಸ್ವೀಕರಿಸುವ ಕೊನೆಯ ದಿನಾಂಕದೊಳಗಾಗಿ ಸಲ್ಲಿಸಬೇಕು ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳ ಆಕ್ಷೇಪಣೆಗಳು ಅಂಚೆಯ ಮೂಲಕ ಆಯೋಗಕ್ಕೆ ತಲುಪಲು ವಿಳಂಬವಾದಲ್ಲಿ ಕೆ.ಪಿ.ಎಸ್.ಸಿ.ಯು ಜವಾಬ್ದಾರಿಯಾಗಿರುವುದಿಲ್ಲ.


📌ಪ್ರಮುಖ ಅಂಶಗಳು : 
1) ಆಕ್ಷೇಪಣೆಗಳನ್ನು ಕಡ್ಡಾಯವಾಗಿ ಆಯೋಗದ ಜಾಲತಾಣದಲ್ಲಿ ಪ್ರಕಟಿಸಿರುವ ನಮೂನೆಯಲ್ಲಿಯೇ (ಕನ್ನಡ ಅಥವಾ ಇಂಗ್ಲೀಷ್) ಸಲ್ಲಿಸಬೇಕು.
2) ಆಕ್ಷೇಪಣೆಗಳನ್ನು ಸಲ್ಲಿಸುವ ಪ್ರತಿ ಪ್ರಶ್ನೆಗೆ ರೂ.50/-ರಂತೆ ಶುಲ್ಕವನ್ನು (ಐ.ಪಿ.ಓ ಅಥವಾ ಡಿ.ಡಿ. ಮೂಲಕ) ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗಸೌಧ, ಬೆಂಗಳೂರು, ಇವರ ಹೆಸರಿಗೆ ಸಂದಾಯ ಮಾಡಬೇಕು.
3) ಶುಲ್ಕ ಸಂದಾಯ ಮಾಡದ ಆಕ್ಷೇಪಣಾ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
4) ಪ್ರತಿ ಪ್ರಶ್ನೆಯ ಕೀ ಉತ್ತರಕ್ಕೆ ಸಲ್ಲಿಸುವ ಆಕ್ಷೇಪಣೆಗಳಿಗೆ ಪೂರಕವಾಗಿ ಸಲ್ಲಿಸುವ ದಾಖಲೆಗಳಿಗೆ ಸಂಬಂಧಿಸಿದಂತೆ ಲೇಖಕರ ಹೆಸರು. ಪ್ರಕಾಶನದ ಪ್ರತಿ ಇತ್ಯಾದಿ ವಿವರಗಳನ್ನು ಆಕ್ಷೇಪಣೆಗಳೊಂದಿಗೆ ನಿಗದಿತ ನಮೂನೆಯಲ್ಲಿ ನಮೂದಿಸತಕ್ಕದ್ದು.
5) ದಾಖಲೆಗಳನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು.
6) ದಾಖಲೆಗಳ ಪ್ರತಿ ಪುಟದ ಮೇಲೆ ಪ್ರಶ್ನೆ ಸಂಖ್ಯೆ ಮತ್ತು ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯತಕ್ಕದ್ದು.
7) ಆಕ್ಷೇಪಣೆಯೊಂದಿಗೆ ಅಭ್ಯರ್ಥಿಯು ದೃಢೀಕರಿಸಿದ ಪ್ರವೇಶ ಪತ್ರದ ಪ್ರತಿಯನ್ನು ಪರಿಶೀಲನೆಗಾಗಿ ಲಗತ್ತಿಸಬೇಕು.

Comments