ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಪರೀಕ್ಷೆ ರದ್ದು – ಹೊಸ ಅಧಿಸೂಚನೆ ನಿರೀಕ್ಷೆ
ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದ್ದ ಕೃಷಿ ಅಧಿಕಾರಿ 86 ಹುದ್ದೆಗಳು ಹಾಗೂ ಸಹಾಯಕ ಕೃಷಿ ಅಧಿಕಾರಿ 586 ಹುದ್ದೆಗಳ ಪರೀಕ್ಷೆಗಳನ್ನು ಸರ್ಕಾರದ ಹೊಸ ನಿರ್ದೇಶನದನ್ವಯ ರದ್ದುಪಡಿಸಲಾಗಿದೆ. ಪರಿಶಿಷ್ಟ ಜಾತಿ ಒಳ ಮೀಸಲಾತಿ ಅಳವಡಿಸಿಕೊಂಡು ಶೀಘ್ರದಲ್ಲೇ ಹೊಸ ಅಧಿಸೂಚನೆ ಹೊರಬರಲಿದೆ.
ಕರ್ನಾಟಕ ಲೋಕಸೇವಾ ಆಯೋಗವು (KPSC) 20-09-2024 ರಂದು ಪ್ರಕಟಿಸಿದ್ದ ಹಾಗೂ 31-12-2024 ರಂದು ತಿದ್ದುಪಡಿಗೊಂಡ ಅಧಿಸೂಚನೆಯನ್ವಯ, ಕೃಷಿ ಇಲಾಖೆಯ ಕೃಷಿ ಅಧಿಕಾರಿ 86 ಹುದ್ದೆಗಳು ಹಾಗೂ ಸಹಾಯಕ ಕೃಷಿ ಅಧಿಕಾರಿ 586 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಇದರ ಅಂಗವಾಗಿ, ಅಭ್ಯರ್ಥಿಗಳಿಗೆ ದಿನಾಂಕ 27-09-2025 ರಂದು ಕನ್ನಡ ಭಾಷಾ ಪರೀಕ್ಷೆ ಹಾಗೂ 28-09-2025 ಮತ್ತು 05-10-2025 ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿಪಡಿಸಲಾಗಿತ್ತು.
ಆದರೆ, ರಾಜ್ಯ ಸರ್ಕಾರದ ಹೊಸ ನಿರ್ದೇಶನದಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ (Internal Reservation for SC) ಅಳವಡಿಸಿಕೊಳ್ಳಬೇಕಾದ ಕಾರಣ, ಈ ಅಧಿಸೂಚನೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಇದೇ ನಿಯಮವನ್ನು ಸರ್ಕಾರದ ಎಲ್ಲಾ ಇಲಾಖೆ/ನಿಗಮ/ಮಂಡಳಿ/ಸ್ವಾಯತ್ತ ಸಂಸ್ಥೆಗಳ ನೇರ ನೇಮಕಾತಿಗೆ ಅನ್ವಯಿಸುವಂತೆ ಸೂಚನೆ ನೀಡಲಾಗಿದೆ.
ಅದರಿಂದ, ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಹಳೆಯ ಅಧಿಸೂಚನೆ ಮಾನ್ಯವಲ್ಲ. ಹೊಸದಾಗಿ ಪರಿಶಿಷ್ಟ ಜಾತಿ ಒಳ ಮೀಸಲಾತಿಯನ್ನು ಅಳವಡಿಸಿಕೊಂಡು ತಿದ್ದುಪಡಿ ಅಧಿಸೂಚನೆ ಹೊರಬರುವ ನಿರೀಕ್ಷೆ ಇದೆ.
ಇದರಿಂದ, ಸೆಪ್ಟೆಂಬರ್ 27, 28 ಹಾಗೂ ಅಕ್ಟೋಬರ್ 5 ರಂದು ನಿಗದಿಯಾಗಿದ್ದ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು ರದ್ದುಪಡಿಸಲಾಗಿದೆ.
🔎 ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ
- ಹಳೆಯ ಅಧಿಸೂಚನೆಗಳ ಆಧಾರದ ಮೇಲೆ ಪರೀಕ್ಷೆಗಳು ನಡೆಯುವುದಿಲ್ಲ.
- ಸರ್ಕಾರದ ಹೊಸ ನಿರ್ದೇಶನದಂತೆ ಹೊಸ ಅಧಿಸೂಚನೆ ಪ್ರಕಟವಾಗುವವರೆಗೆ ಕಾಯಬೇಕು.
- ಹೊಸ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನ್ವಯವಾಗಲಿದೆ.
- ಮುಂದಿನ ವೇಳಾಪಟ್ಟಿ ಹಾಗೂ ದಿನಾಂಕಗಳನ್ನು ಕೇವಲ ಹೊಸ ಅಧಿಸೂಚನೆಯ ಮೂಲಕವೇ ಪ್ರಕಟಿಸಲಾಗುವುದು.
Comments