Loading..!

KPSCಯಿಂದ ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟ | ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Yallamma G | Date:5 ಆಗಸ್ಟ್ 2025
Image not found

          ಕರ್ನಾಟಕ ಲೋಕ ಸೇವಾ ಆಯೋಗದಿಂದ 11-02-2019 ರಲ್ಲಿ ಅಧಿಸೂಚಿಸಲಾದ 2018ನೇ ಸಾಲಿನ ವಿವಿಧ ನ್ಯಾಯಾಂಗ ಘಟಕಗಳಲ್ಲಿನ ಹೈದ್ರಾಬಾದ್-ಕರ್ನಾಟಕ ವೃಂದದ-81 ಹಾಗೂ ಉಳಿಕೆ ಮೂಲ ವೃಂದದ 494 ದ್ವಿತೀಯ ದರ್ಜೆ ಸಹಾಯಕರ (SDA) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 


               ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ:02.03.2021ರಂದು, ಹಾಗೂ ಉಳಿಕೆ ಮೂಲ ವೃಂದದ ಹೆಚ್ಚುವರಿ ಪಟ್ಟಿಯನ್ನು 11.08.2023 ಮತ್ತು ಹೈದ್ರಾಬಾದ್-ಕರ್ನಾಟಕ ವೃಂದದ ಹೆಚ್ಚುವರಿ ಪಟ್ಟಿಯನ್ನು 26.09.2022ರಂದು ಪ್ರಕಟಿಸಲಾಗಿರುತ್ತದೆ.


                ಪ್ರಸ್ತುತ, ಸದರಿ ಹುದ್ದೆಗಳ ಶೇಕಡ 10ರಷ್ಟು ವರ್ಗೀಕರಣಕ್ಕೆ ಸೀಮಿತಗೊಳಿಸಿ, ಹೆಚ್ಚುವರಿ ಆಯ್ಕೆಪಟ್ಟಿಗಾಗಿ ಇಲಾಖೆಗಳಿಂದ ಸ್ವೀಕೃತವಾದ ಬೇಡಿಕೆ ಪತ್ರಗಳ ಕಾಲಾನುಕ್ರಮದನುಸಾರ ಉಳಿಕೆ ಮೂಲ ವೃಂದದ 64 ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಹಾಗೂ ಕಟ್‌ಆಫ್ ಅಂಕಗಳ ಪಟ್ಟಿಯನ್ನು ಮತ್ತು ಹೈ.ಕ ವೃಂದದ ಹುದ್ದೆಗಳ ಶೇಕಡ 10ರಷ್ಟು ವರ್ಗೀಕರಣಕ್ಕೆ ಸಿದ್ಧಪಡಿಸಲಾದ ಹೆಚ್ಚುವರಿ ಪಟ್ಟಿ ಹಾಗೂ 14 ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಮತ್ತು ಕಟ್‌ಆಫ್ ಅಂಕಗಳ ಪಟ್ಟಿಯನ್ನು ದಿನಾಂಕ:04.08.2025ರಂದು ಆಯೋಗದ ವೆಬ್‌ಸೈಟ್ http://kpsc.kar.nic.in ರಡಿಯಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

* ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಪ್ರಕ್ರಿಯೆಯ ವಿವರಗಳು : 
=> ಹೆಚ್ಚುವರಿ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:
=> ದಾಖಲೆ ಪರಿಶೀಲನೆ: ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಜುಲೈ 25 ರಿಂದ ಆಗಸ್ಟ್ 5, 2023 ರ ನಡುವೆ ದಾಖಲೆ ಪರಿಶೀಲನೆಗೆ ಹಾಜರಾಗಬೇಕು.
=> ಅಗತ್ಯ ದಾಖಲೆಗಳು: ಅಭ್ಯರ್ಥಿಗಳು ಅವರ ಶೈಕ್ಷಣಿಕ ಪ್ರಮಾಣಪತ್ರಗಳು, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಗುರುತಿನ ಚೀಟಿ ಮತ್ತು ಇತರ ಅಗತ್ಯ ದಾಖಲೆಗಳನ್ನು ತರಬೇಕು.
=> ವೈದ್ಯಕೀಯ ಪರೀಕ್ಷೆ: ದಾಖಲೆ ಪರಿಶೀಲನೆಯ ನಂತರ, ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು.
=> ನೇಮಕಾತಿ ಪತ್ರ: ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಲಾಗುವುದು.


ಸೂಚನೆ : ಅಭ್ಯರ್ಥಿಗಳು ಈ ಕುರಿತು ಹೆಚ್ಚಿನ ಮಾಹಿತಿಯನ್ನು http://kpsc.kar.nic.in ಆಯೋಗದ ವೆಬ್‌ಸೈಟ್ ಮೂಲಕ ಪಡೆಯಬಹುದು. 

Comments