ಕರ್ನಾಟಕ ಲೋಕ ಸೇವಾ ಆಯೋಗದಿಂದ 19-03-2022 ರಲ್ಲಿ ಅಧಿಸೂಚಿಸಲಾದ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕಿರಿಯ ಅಭಿಯಂತರರ (ಸಿವಿಲ್) 74 + 15 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022ರನ್ವಯ ತಿದ್ದುಪಡಿ ಪಟ್ಟಿಗಳನ್ನು ಸಿದ್ಧಪಡಿಸಲಾಗಿದ್ದು, ಪ್ರಸ್ತುತ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಗಾಗಿ ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಯ ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2021ರ ತಿದ್ದುಪಡಿ ನಿಯಮಗಳ ನಿಯಮಗಳನ್ವಯ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರೇಕಟಿಸಲಾಗಿದೆ. (ಹೈಕೋರ್ಟ್ ಆದೇಶದಂತೆ) ಹುದ್ದೆಗಳ ನೇಮಕಾತಿಗಾಗಿ ಪೂರ್ವದಲ್ಲಿ 2024ರ ಜನವರಿ 22ರಂದು ಅಂತಿಮ ಆಯ್ಕೆಪಟ್ಟಿ ಹಾಗೂ 2025ರ ಮಾರ್ಚ್ 26ರಂದು ಹೆಚ್ಚುವರಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಕರ್ನಾಟಕ ಲೋಕ ಸೇವಾ ಆಯೋಗದಿಂದ 2025ರ ಏಪ್ರಿಲ್ 09ರಂದು ನೀಡಿದ ಆದೇಶದಂತೆ, ಸದರಿ ಅಧಿಸೂಚನೆ ಹಾಗೂ 2022ರ ಏಪ್ರಿಲ್ 22ರಂದು ಪ್ರಕಟಿಸಿದ್ದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಗರ ಯೋಜಕರು (50 + 10 ಹೈಕೋರ್ಟ್ ಹುದ್ದೆಗಳು) ಹುದ್ದೆಗಳ ಹೆಚ್ಚುವರಿ ಪಟ್ಟಿಯಲ್ಲಿರುವ 31 ಸಾಮಾನ್ಯ ಅಭ್ಯರ್ಥಿಗಳಿಗೆ ಸ್ವ-ಇಚ್ಛಾ ಹೇಳಿಕೆ ನೀಡಲು ಅವಕಾಶ ನೀಡಲಾಗಿತ್ತು.
ಆದರೆ, ಯಾರೂ ಸ್ವ-ಇಚ್ಛಾ ಹೇಳಿಕೆ ಸಲ್ಲಿಸದ ಕಾರಣ, ಇಲಾಖೆಯ ಬೇಡಿಕೆಯ ಪ್ರಕಾರ ಕಿರಿಯ ಅಭಿಯಂತರರ ಹುದ್ದೆಗೆ ಹೊಸ ಹೆಚ್ಚುವರಿ ಆಯ್ಕೆಪಟ್ಟಿ ನಿಯಮಾನುಸಾರ ಸಿದ್ಧಪಡಿಸಿ ಪ್ರಕಟಿಸಲಾಗಿದೆ ಎಂದು ಆಯೋಗವು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಸಂಪೂರ್ಣ ಹೆಚ್ಚುವರಿ ಆಯ್ಕೆಪಟ್ಟಿಯನ್ನು KPSC ಅಧಿಕೃತ ವೆಬ್‌ಸೈಟ್ (http://kpsc.kar.nic.in) ನಲ್ಲಿ ಪರಿಶೀಲಿಸಬಹುದು.
ಪ್ರಮುಖ ಸೂಚನೆ: ಈ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಣೆಯ ನಂತರ, ಇಲಾಖೆಯ ಮುಂದಿನ ಕ್ರಮಗಳು ಶೀಘ್ರದಲ್ಲೇ ನಡೆಯಲಿವೆ.
Comments