Loading..!

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ(KEA) ಗ್ರಾಮ ಆಡಳಿತ ಅಧಿಕಾರಿ & GTTC ಹುದ್ದೆಗಳ ನೇಮಕಾತಿಯ ಕೀ ಉತ್ತರಗಳು ಇದೀಗ ಪ್ರಕಟ
Published by: Yallamma G | Date:4 ಅಕ್ಟೋಬರ್ 2024
not found

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಗ್ರಾಮ ಆಡಳಿತ ಅಧಿಕಾರಿ (VAO) ಮತ್ತು GTTC ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಸ್ತುತ ಈ ಹುದ್ದೆಗಳ ನೇಮಕಾತಿಯ ಮೊದಲ ಹಂತವಾದ ಕಡ್ಡಾಯ ಕನ್ನಡ ಲಿಖಿತ ಪರೀಕ್ಷೆಯನ್ನು ದಿನಾಂಕ 29 -ಸೆಪ್ಟೆಂಬರ್-2024 ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ಯಶಸ್ವಿಯಾಗಿ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಪ್ರಾಧಿಕಾರವು ಅಧಿಕೃತ ಜಾಲತಾಣದಲ್ಲಿ ಉತ್ತರಗಳನ್ನು ಪ್ರಕಟಿಸಿದೆ.

ಅಭ್ಯರ್ಥಿಗಳು ಕೀ ಉತ್ತರಗಳನ್ನು ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಬಹುದು. ಪ್ರಕಟಿಸಲಾದ ಕೀ ಉತ್ತರಗಳ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು2 ಅಕ್ಟೋಬರ್ 2024 ಸಂಜೆ 05:00 ರೊಳಗಾಗಿ ವೆಬ್ ಸೆಟ್ ನಲ್ಲಿ ಒದಗಿಸಲಾದ ಆನ್ ಲೈನ್ ಲಿಂಕನ ಮೂಲಕ ಮಾತ್ರ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ. ಪ್ರತಿ ಪ್ರಶ್ನೆಗೆ ಆಕ್ಷೇಪಣೆಯನ್ನು ಸಲ್ಲಿಸಲು ₹50 ಶುಲ್ಕ ವಿಧಿಸಲಾಗಿದೆ.


- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ.

Comments