Loading..!

BREAKING: ಕೆಇಎ ಮಹತ್ವದ ಪ್ರಕಟಣೆ; KSDL ಮತ್ತು ಕೃಷಿ ಮಾರಾಟ ಇಲಾಖೆ ಪರೀಕ್ಷೆಗಳು ಮುಂದೂಡಿಕೆ! ಪರಿಷ್ಕೃತ ದಿನಾಂಕ ಇಲ್ಲಿದೆ
Published by: Yallamma G | Date:27 ಡಿಸೆಂಬರ್ 2025
not found

                    2026: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್ ನೀಡಿದೆ. 2026ರ ಜನವರಿ ತಿಂಗಳಿನಲ್ಲಿ ನಡೆಯಬೇಕಿದ್ದ ಪ್ರಮುಖ ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡಲಾಗಿದ್ದು, ಇದೀಗ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು (Revised Timetable)ಅಧಿಕೃತವಾಗಿ ಪ್ರಕಟಿಸಲಾಗಿದೆ. ನೀವು ಕೆಎಸ್ಡಿಎಲ್ (KSDL) ಅಥವಾ ಕೃಷಿ ಮಾರಾಟ ಇಲಾಖೆಯ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರೆ, ಬದಲಾದ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.


ಪರೀಕ್ಷೆ ಮುಂದೂಡಿಕೆಯ ವಿವರ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA)ವು ಈ ಹಿಂದೆ 19-11-2025 ರಂದು ಪ್ರಕಟಿಸಿದ್ದ  ವೇಳಾಪಟ್ಟಿಯಂತೆ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL)ಮತ್ತು ಕೃಷಿ ಮಾರಾಟ ಇಲಾಖೆಯ (Agriculture Marketing Department) ವಿವಿಧ ಹುದ್ದೆಗಳಿಗೆಜನವರಿ 10 ಮತ್ತು 12, 2026 ರಂದು ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಅನಿವಾರ್ಯ ತಾಂತ್ರಿಕ ಕಾರಣಗಳಿಂದಾಗಿ ಈ ಪರೀಕ್ಷೆಗಳನ್ನು ಈಗ ಮುಂದೂಡಲಾಗಿದ್ದು, ಪರಿಷ್ಕೃತ ದಿನಾಂಕವನ್ನು ಘೋಷಿಸಲಾಗಿದೆ.

ಈಗಾಗಲೇ ಅಧಿಸೂಚಿದ KEA ಗ್ರೂಪ್-ಸಿ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ


                 KEA ಯು 19-11-2025 ರಂದು ಪ್ರಕಟಿಸಿದ್ದ ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷಾ ವೇಳಾಪಟ್ಟಿಯಲ್ಲಿ 2026 ಜನವರಿ 10 & 12 ರಂದು ನಡೆಸಲು ಉದ್ದೇಶಿಸಲಾಗಿದ್ದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) & ಕೃಷಿ ಮಾರಾಟ ಇಲಾಖೆಯ ಪರೀಕ್ಷೆಗಳನ್ನು ತಾಂತ್ರಿಕ ಕಾರಣಾಂತರದಿಂದ 2026 ಜನವರಿ 18 ಕ್ಕೆ ಮುಂದೂಡಿ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!


ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು
✔ KSDL & ಕೃಷಿ ಮಾರಾಟ ಇಲಾಖೆ ಪರೀಕ್ಷೆ: 2026 ಜನವರಿ 18
✔ ಪರೀಕ್ಷೆ ಮುಂದೂಡಲು ಕಾರಣ: ತಾಂತ್ರಿಕ ಕಾರಣಗಳು
✔ ಪರಿಷ್ಕೃತ ವೇಳಾಪಟ್ಟಿ: KEA ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯ
✔ Admit Card / Hall Ticket Update: ಶೀಘ್ರದಲ್ಲೇ ಪ್ರಕಟ


ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ : ಅಭ್ಯರ್ಥಿಗಳು ಗಮನಿಸಬೇಕಾದ ಹೊಸ ದಿನಾಂಕದ ವಿವರಗಳು ಕೆಳಗಿನಂತಿವೆ:
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) & ಕೃಷಿ ಮಾರಾಟ ಇಲಾಖೆ 
=> ಹಳೆಯ ಪರೀಕ್ಷಾ ದಿನಾಂಕ 10-01-2026 ಮತ್ತು 12-01-2026
=> ಪರಿಷ್ಕೃತ (ಹೊಸ) ಪರೀಕ್ಷಾ ದಿನಾಂಕ 18-01-2026 (ಭಾನುವಾರ)
=> ಇತರೆ ಪರೀಕ್ಷೆಗಳು: ಜನವರಿ 19 ರಂದು ನಿಗದಿಯಾಗಿರುವ ಉಳಿದ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಇಎ ತಿಳಿಸಿದೆ.


ಹೊಸ ಪರೀಕ್ಷಾ ನಿಯಮಗಳು (Negative Marking):

ಈ ಬಾರಿಯ ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ಇರಲಿದ್ದು, ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ 1 ಅಂಕವನ್ನು ಕಡಿತಗೊಳಿಸಲಾಗುತ್ತದೆ. ಅಭ್ಯರ್ಥಿಗಳು ಪರೀಕ್ಷಾ ತಯಾರಿ ನಡೆಸುವಾಗ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. 

KPSCvaani ಯ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ


ಪ್ರವೇಶ ಪತ್ರ (Hall Ticket) ಡೌನ್‌ಲೋಡ್ ಮಾಡುವುದು ಹೇಗೆ?

ಪರೀಕ್ಷೆಗೆ ಕೆಲ ದಿನಗಳ ಮುಂಚಿತವಾಗಿ ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಲ್ ಟಿಕೆಟ್ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಬಳಸಿ ಪ್ರವೇಶ ಪತ್ರ ಪಡೆಯಬಹುದು.
ಅಧಿಕೃತ ವೆಬ್‌ಸೈಟ್: cetonline.karnataka.gov.in/kea
ಸಹಾಯವಾಣಿ: 080-23460460


ಅಭ್ಯರ್ಥಿಗಳ ಗಮನಕ್ಕೆ:
ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಈ ಬದಲಾವಣೆಯನ್ನು ಗಮನಿಸಬೇಕು. ತಾಂತ್ರಿಕ ಕಾರಣಗಳಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ. 


ಸೂಚನೆ: ಅಭ್ಯರ್ಥಿಗಳು ಪ್ರವೇಶ ಪತ್ರ (Hall Ticket), ಹಾಗೂ ಮುಂದಿನ ಅಧಿಕೃತ ಸೂಚನೆಗಳಿಗಾಗಿ KEA Official Website ಹಾಗೂ kpscvaani.com / kpscvaani.in ಮತ್ತು KPSCVaani Flash Updates ಅನ್ನು ನಿರಂತರವಾಗಿ ಗಮನಿಸುತಿರಿ.

Comments