KEA ನಿಂದ ಮಹತ್ವದ ಪ್ರಕಟಣೆ : BWSSB JE ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಪ್ರಕಟ - ಪರೀಕ್ಷಾ ದಿನಾಂಕ ಮತ್ತು ಸಮಯದ ವಿವರ ಇಲ್ಲಿದೆ ವೀಕ್ಷಿಸಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರಯು(KEA) ಕಿರಿಯ ಅಭಿಯಂತರರು ಹುದ್ದೆಗಳಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. KEAಯಿಂದ ಅಧಿಸೂಚಿಸಲಾದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಲ್ಲಿನ ಕಿರಿಯ ಅಭಿಯಂತರರು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ಇದೀಗ KEAವು ಅಧಿಕೃತವಾಗಿ ಪ್ರಕಟಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಸಾವಿರಾರು ಅಭ್ಯರ್ಥಿಗಳು ಪರೀಕ್ಷಾ ದಿನಾಂಕಕ್ಕಾಗಿ ಕಾಯುತ್ತಿದ್ದರು. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examinations Authority - KEA) ದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯ ಕಿರಿಯ ಅಭಿಯಂತರರ (Junior Engineer) ಹುದ್ದೆಗಳ ನೇಮಕಾತಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕವನ್ನು ಪರಿಷ್ಕರಿಸಿ, ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ
📌ಪರೀಕ್ಷಾ ದಿನಾಂಕದಲ್ಲಿ ಮಹತ್ವದ ಬದಲಾವಣೆ :
ನವೆಂಬರ್ 19, 2025 ರ ಮೂಲ ವೇಳಾಪಟ್ಟಿಯಂತೆ, ಡಿಸೆಂಬರ್ 20, 2025 ರಂದು ನಡೆಯಬೇಕಿದ್ದ ಕಿರಿಯ ಅಭಿಯಂತರರು (ಸಿವಿಲ್), ಕಿರಿಯ ಅಭಿಯಂತರರು (ಎಲೆಕ್ಟ್ರಿಕಲ್) ಮತ್ತು ಕಿರಿಯ ಅಭಿಯಂತರರು (ಮೆಕ್ಯಾನಿಕಲ್) ಹುದ್ದೆಗಳ ನಿರ್ದಿಷ್ಟ ಪತ್ರಿಕೆ-2 ಪರೀಕ್ಷೆಯನ್ನು "ತಾಂತ್ರಿಕ ಕಾರಣಗಳಿಂದಾಗಿ" ಮುಂದೂಡಲಾಗಿದೆ ಎಂದು KEA ತನ್ನ ಡಿಸೆಂಬರ್ 08, 2025 ರ ಪರಿಷ್ಕೃತ ಅಧಿಸೂಚನೆಯಲ್ಲಿ ತಿಳಿಸಿದೆ.
📌ಪರೀಕ್ಷಾ ದಿನಾಂಕ ಮತ್ತು ಸಮಯದ ವಿವರ :
ಕಿರಿಯ ಅಭಿಯಂತರರು (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್) (ಗ್ರೂಪ್-ಸಿ) ನಿರ್ದಿಷ್ಟ ಪತ್ರಿಕೆ-2 ರ ಪರಿಷ್ಕೃತ ದಿನಾಂಕ 22/12/2025 ರಂದು ಬೆಳಿಗ್ಗೆ 10:30 ರಿಂದ 12:30 ರವರೆಗೆ ನಡೆಯಲಿದೆ.
🔹 ಪ್ರಮುಖ ಸೂಚನೆಗಳು:
=> ಕಿರಿಯ ಅಭಿಯಂತರರ (JE) ನಿರ್ದಿಷ್ಟ ಪತ್ರಿಕೆ-2 ಪರೀಕ್ಷೆಯು ಡಿಸೆಂಬರ್ 22, 2025 (ಸೋಮವಾರ) ರಂದು ಬೆಳಿಗ್ಗೆ 10:30 ರಿಂದ 12:30 ರವರೆಗೆ ನಡೆಯಲಿದೆ.
=> ಪರೀಕ್ಷಾ ಕೇಂದ್ರದಲ್ಲಿ Frisking ಮತ್ತು ಮುಖಚಹರೆ ಪರಿಶೀಲಿಸಿ (Facial Verification) ಪ್ರವೇಶ ನೀಡುವುದರಿಂದ, ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ ಎರಡು ಗಂಟೆಗಳ ಮುಂಚಿತವಾಗಿ ಹಾಜರಾಗಬೇಕು.
=> ದಿನಾಂಕ 19.11.2025 ರ ಮೂಲ ವೇಳಾಪಟ್ಟಿಯ ಇತರ ಎಲ್ಲಾ ವಿವರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.
ಇತರ ಹುದ್ದೆಗಳ ಪರೀಕ್ಷಾ ದಿನಾಂಕಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.






Comments