ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLC) ದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ನೇಮಕಾತಿಯ ಮುಂದಿನ ಹಂತವಾದ ಸ್ಪರ್ಧಾತ್ಮಕ ಪರೀಕ್ಷೆಯನ್ನುಕೂಡಾ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು.
ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ಪ್ರವರ್ಗವಾರು 1:5 ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆಯನ್ನು ನಡೆಸಲು ನಿರ್ಧರಿಸಿದೆ. ದಾಖಲಾತಿ ಪರಿಶೀಲನೆಯನ್ನು ದಿನಾಂಕ 01/08/2025 ಮತ್ತು 02/08/2025 ರಂದು ನಡೆಸಲಾಗುತ್ತದೆ.
📌 ದಾಖಲಾತಿ ಪರಿಶೀಲನೆ ವಿವರ :
ಸ್ಥಳ : ಸಮ್ಮೇಳನ ಸಭಾಂಗಣ. 3ನೇ ಮಹಡಿ, ಶಾಸಕರ ಭವನ-1, ಬೆಂಗಳೂರು.
ದಿನಾಂಕ : 01/08/2025 ಮತ್ತು 02/08/2025 ರಂದು ನಡೆಸಲಾಗುತ್ತದೆ.
⚫️ ದಿನಾಂಕ: 01.08.2025 ರಂದು ಈ ಕೆಳಕಂಡ ವೃಂದಗಳಿಗೆ ದಾಖಲೆಗಳ ಪರಿಶೀಲನೆ ನಡೆಸಲಾಗುವುದು
1. ಸೀನಿಯರ್ ಪ್ರೋಗ್ರಾಮರ್
2. ಜೂನಿಯರ್ ಪ್ರೋಗ್ರಾಮರ್
3. ಜೂನಿಯರ್ ಕನ್ಫೋಲ್ ಆಪರೇಟರ್
4. ಕಂಪ್ಯೂಟರ್ ಆಪರೇಟರ್
⚫️ ದಿನಾಂಕ: 02.08.2025 ರಂದು ಈ ಕೆಳಕಂಡ ವೃಂದಗಳಿಗೆ ದಾಖಲೆಗಳ ಪರಿಶೀಲನೆ ನಡೆಸಲಾಗುವುದು
1. ಸಹಾಯಕರು
2. ಕಿರಿಯ ಸಹಾಯಕರು
3. ದತ್ತಾಂಶ ನಮೂದು ಸಹಾಯಕರು/ಬೆರಳಚ್ಚುಗಾರರು
Comments