Loading..!

KEAಯಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿನ ಕಿರಿಯ ಸಹಾಯಕರು ಹುದ್ದೆಗಳ ದಾಖಲಾತಿ ಪರಿಶೀಲನೆಗಾಗಿ ಅಧಿಸೂಚನೆ ಪ್ರಕಟ
Published by: Yallamma G | Date:22 ನವೆಂಬರ್ 2025
Image not found

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿನ ಕಿರಿಯ ಸಹಾಯಕರು ಹುದ್ದೆಗಳ ದಾಖಲಾತಿ ಪರಿಶೀಲನೆ. (KEA KFCSC Document Verification 2025)


             ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿ ಖಾಲಿ ಇರುವ 263 ಕಿರಿಯ ಸಹಾಯಕರು ಹುದ್ದೆಗಳ ನೇಮಕಾತಿಗಾಗಿ 23/06/2023 ರಂದು  ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 


              ಉಲ್ಲೇಖ 1ಮತ್ತು 2ರ ಅಧಿಸೂಚನೆಗಳಿಗೆ ಅನುಗುಣವಾಗಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿ ಈ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಸಾಮಾನ್ಯ ಪತ್ರಿಕೆ, ನಿರ್ದಿಷ್ಟ ಪತ್ರಿಕೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್. ಕಂಪ್ಯೂಟರ್ ಜ್ಞಾನ ಮುಂತಾದ ವಿಷಯಗಳಲ್ಲಿ ಸ್ಮರ್ದಾತ್ಮಕ ಪರೀಕ್ಷೆಯನ್ನುಅಕ್ಟೋಬರ್-2023 ಮತ್ತು ನವೆಂಬರ್-2023ರಲ್ಲಿ ಯಶಸ್ವಿಯಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿರುತ್ತದೆ.


             ಸ್ಪರ್ದಾತ್ಮಕ ಪರೀಕ್ಷೆಯನ್ನು ನಡೆಸಿದ ತರುವಾಯ, ತಾತ್ಕಾಲಿಕ ಸರಿ ಉತ್ತರಗಳನ್ನು (ಕೀ ಉತ್ತರಗಳು) ದಿನಾಂಕ:04-12-2023 ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿ ಅಭ್ಯರ್ಥಿಗಳಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ, ಆಕ್ಷೇಪಿತ ಕೀ ಉತ್ತರಗಳನ್ನು ವಿಷಯ ತಜ್ಞರ ಸಮಿತಿಯ ಮೂಲಕ ಪರಿಶೀಲಿಸಿ ಅಂತಿಮ ಕೀ ಉತ್ತರಗಳನ್ನು ದಿನಾಂಕ:15-02-2024 ರಂದು ಪ್ರಕಟಿಸಿರುತ್ತದೆ.


            ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಅಂಕಪಟ್ಟಿಯನ್ನು ಅಭ್ಯರ್ಥಿಗಳ/ಹುದ್ದೆವಾರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ದಿನಾಂಕ: 20.06.2024 ರಂದು ಪ್ರಕಟಿಸಲಾಗಿರುತ್ತದೆ.


               ಮುಂದುವರೆದು, ದಾಖಲಾತಿಗಳ ಪರಿಶೀಲನೆಗಾಗಿ, ಸೂಚಿತ ರಿಕ್ತ ಸ್ಥಾನಗಳ ಆಧಾರದ ಮೇಲೆ ಹುದ್ದೆವಾರು ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ವೆಬ್ ಸೈಟ್ https://kfcsc.karnataka.gov.in de 1:3 ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇದೀಗ ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 1:3 ಅರ್ಹತಾ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಯನ್ನು ದಿನಾಂಕ 1, 2 ಮತ್ತು 3 ಡಿಸೆಂಬರ್ 2025 ರಂದು ನಡೆಸಲಿದೆ. 


ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದಲ್ಲಿನ (KFCSC) ಖಾಲಿ ಇರುವ 'ಕಿರಿಯ ಸಹಾಯಕರು' ಹುದ್ದೆಗಳ ಭರ್ತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು (Merit List) ಈಗಾಗಲೇ ಪ್ರಕಟಿಸಲಾಗಿದೆ. ಸದರಿ ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳಿಗೆ ಮೂಲ ದಾಖಲಾತಿಗಳ ಪರಿಶೀಲನೆಯನ್ನು (Document Verification) ನಡೆಸಲು ನಿರ್ಧರಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಪರಿಶೀಲನೆಗಾಗಿ ಈ ಕೆಳಕಂಡ ವೇಳಾಪಟ್ಟಿಯಂತೆ ಹಾಜರಾಗಲು ಸೂಚಿಸಲಾಗಿದೆ.


ದಾಖಲೆ ಪರಿಶೀಲನಾ ಸ್ಥಳದ ವಿಳಾಸ : 
ನಂ.32 ಡಾ. ಬಾಬು ಜಗಜೀವನರಾಂ 
ಲಿಡ್ಕರ್ ಭವನ ಸಭಾಂಗಣ, 
ಡಾ. ಬಾಬು ಜಗಜೀವನರಾಂ ಚರ್ಮ 
ಕೈಗಾರಿಕಾ ಅಭಿವೃದ್ಧಿ ನಿಗಮ 
ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ 
ವಸಂತನಗರ, ಬೆಂಗಳೂರು- 560052.


=> ಈ ಅಧಿಸೂಚನೆಯ ಅನ್ವಯ, ಹಿಂದೆ ಪ್ರಕಟವಾದ ತಾತ್ಕಾಲಿಕ ಮತ್ತು ಅಂತಿಮ ಆಯ್ಕೆಪಟ್ಟಿಗಳ ಪ್ರಕಾರ ಶಾರ್ಟ್‌ಲಿಸ್ಟ್ ಮಾಡಿರುವ ಅಭ್ಯರ್ಥಿಗಳು ನಿಗದಿತ ದಿನಾಂಕ ಹಾಗೂ ಸ್ಥಳದಲ್ಲಿ ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಾಗುವುದು ಕಡ್ಡಾಯ.


📄 KEA – KFCSC 263 ಹುದ್ದೆಗಳ ಡಾಕ್ಯುಮೆಂಟ್ ವರಿಫಿಕೇಶನ್‌ಗೆ ಅಗತ್ಯವಿರುವ ಪ್ರಮಾಣಪತ್ರಗಳ ಪಟ್ಟಿ : ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೆಳಕಂಡ ಎಲ್ಲಾ ಮೂಲ ದಾಖಲಾತಿಗಳನ್ನು (Original Documents) ಹಾಗೂ ಎರಡು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳನ್ನು (Two sets of attested photocopies) ತರತಕ್ಕದ್ದು:



  1. ಕೆಇಎ ಗೆ ಸಲ್ಲಿಸಿದ ಆನ್‌ಲೈನ್ ಅರ್ಜಿ ನಮೂನೆಯ ಪ್ರತಿ (Printout of Online Application).

  2. ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ (Hall Ticket).

  3. ಜನ್ಮ ದಿನಾಂಕ ದೃಢೀಕರಣಕ್ಕಾಗಿ ಎ.ಎಸ್.ಎಸ್.ಎಲ್.ಸಿ / 10ನೇ ತರಗತಿ ಅಂಕಪಟ್ಟಿ.

  4. ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಎಲ್ಲಾ ವರ್ಷಗಳ/ಸೆಮಿಸ್ಟರ್‌ಗಳ ಅಂಕಪಟ್ಟಿಗಳು (ಪಿಯುಸಿ/ಪದವಿ ಇತ್ಯಾದಿ).

  5. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ).

  6. ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳು (ಮೀಸಲಾತಿ ಕೋರಿದ್ದಲ್ಲಿ, ಸಕ್ಷಮ ಪ್ರಾಧಿಕಾರದಿಂದ ಪಡೆದಿದ್ದು).

  7. ಹೈದರಾಬಾದ್-ಕರ್ನಾಟಕ (ಕಲ್ಯಾಣ ಕರ್ನಾಟಕ) ಪ್ರದೇಶದ ಮೀಸಲಾತಿ ಪ್ರಮಾಣ ಪತ್ರ (ಅನ್ವಯಿಸಿದರೆ - 371J).

  8. ಮಾಜಿ ಸೈನಿಕ / ಅಂಗವಿಕಲ / ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು (ಅನ್ವಯಿಸಿದರೆ).

  9. ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.

  10. ಗುರುತಿನ ಚೀಟಿ (ಆಧಾರ್ ಕಾರ್ಡ್ / ವೋಟರ್ ಐಡಿ / ಪ್ಯಾನ್ ಕಾರ್ಡ್).




  • ಕೆಇಎ ದಾಖಲಾತಿ ಪರಿಶೀಲನೆ (KEA Dakhalati Parishilane)

  • KFCSC ಕಿರಿಯ ಸಹಾಯಕರು ದಾಖಲಾತಿ ಪರಿಶೀಲನೆ (KFCSC Kiriya Sahayakaru Dakhalati Parishilane)

  • KEA Junior Assistant DV Dates

  • ಕರ್ನಾಟಕ ಆಹಾರ ನಿಗಮ ಕಿರಿಯ ಸಹಾಯಕ ನೇಮಕಾತಿ (Karnataka Aahara Nigama Kiriya Sahayaka Nemakati)

Comments