ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದಿಂದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯ (KSET) ಪ್ರವೇಶ ಪತ್ರಗಳು ಬಿಡುಗಡೆಯಾಗಿವೆ! ಈ ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದರಿಂದ ಪರೀಕ್ಷೆಯ ದಿನಾಂಕ ತಿಳಿಯುವವರೆಗೆ ಎಲ್ಲಾ ಮಾಹಿತಿ ಇಲ್ಲಿ ಸಿಗುತ್ತದೆ.
ಈ ಲೇಖನದಲ್ಲಿ ನಾವು ಪ್ರವೇಶ ಪತ್ರ ಡೌನ್‌ಲೋಡ್ ಮಾಡುವ ಸರಳ ವಿಧಾನ ಮತ್ತು ಪರೀಕ್ಷೆಗೆ ತರುವ ಅಗತ್ಯ ದಾಖಲೆಗಳ ಪಟ್ಟಿ ಕುರಿತು ತಿಳಿಸುತ್ತೇವೆ. ಅಭ್ಯರ್ಥಿಗಳು ಯಾವ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕು ಮತ್ತು ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದರ ಕುರಿತೂ ವಿವರಿಸುತ್ತೇವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದಿಂದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯ (KSET) ನೇಮಕಾತಿ ಅಧಿಸೂಚನೆಯನ್ನು 22/08/2025 ರಂದು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರವನ್ನು ಕೂಡಾ ಇದೀಗ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ 2025 (KSET) ಅನ್ನು02/11/2025 (ಭಾನುವಾರ) ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದಿಂದ ನಡೆಸಲು ಆಯೋಜಿಸಲಾಗಿದ್ದು, ಇದೀಗ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಕರ್ನಾಟಕ KSET 2025 ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಲು ಹಂತಗಳು :
1. ಕೆಇಎ ಅಧಿಕೃತ ವೆಬ್‌ಸೈಟ್ cetonline.karnataka.gov.in ಗೆ ಭೇಟಿ ನೀಡಿ.
2. ಮುಖಪುಟದಲ್ಲಿ ಲಭ್ಯವಿರುವ KSET ಹಾಲ್ ಟಿಕೆಟ್ 2025 ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಅಭ್ಯರ್ಥಿಗಳು ಲಾಗಿನ್ ವಿವರಗಳನ್ನು ನಮೂದಿಸಬೇಕಾದ ಹೊಸ ಪುಟ ತೆರೆಯುತ್ತದೆ.
4. ಸಲ್ಲಿಸು ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಪ್ರವೇಶ ಪತ್ರವನ್ನು ಪ್ರದರ್ಶಿಸಲಾಗುತ್ತದೆ.
5. ಪ್ರವೇಶ ಪತ್ರವನ್ನು ಪರಿಶೀಲಿಸಿ ಮತ್ತು ಅದನ್ನು ಡೌನ್‌ಲೋಡ್ ಮಾಡಿ.
6. ಹೆಚ್ಚಿನ ಅಗತ್ಯಕ್ಕಾಗಿ ಅದರ ಮುದ್ರಿತ ಪ್ರತಿಯನ್ನು ಇಟ್ಟುಕೊಳ್ಳಿ.
📋 ಪರೀಕ್ಷಾ ವಿಧಾನ :ಒಟ್ಟು ಎರಡು ಪತ್ರಿಕೆಗಳಿದ್ದು,ಮೊದಲ ಪತ್ರಿಕೆಯಲ್ಲಿ 50 ಕಡ್ಡಾಯ ಪ್ರಶ್ನೆಗಳಿಗೆ 100 ಅಂಕಗಳಿರುತ್ತವೆ. ವಿಷಯಾಧಾರಿತ ಎರಡನೇ ಪತ್ರಿಕೆಯಲ್ಲಿ 100 ಕಡ್ಡಾಯ ಪ್ರಶ್ನೆಗಳಿಗೆ 200 ಅಂಕಗಳು ಇರಲಿವೆ. ಒಟ್ಟಾರೆ ಎರಡೂ ಪತ್ರಿಕೆಗಳಿಗೆ 3 ತಾಸಿನ ಅವಧಿ ಇರಲಿದೆ. ಸಾಮಾನ್ಯ ಪತ್ರಿಕೆಯಲ್ಲಿ ಅಭ್ಯರ್ಥಿಗಳ ಬೋಧನೆ, ಸಂಶೋಧನೆ ಹಾಗೂ ಬೌದ್ಧಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಎರಡನೇ ಪತ್ರಿಕೆಯು ಆಯಾ ವಿಷಯಕ್ಕೆ ಸಂಬಂಧಿಸಿರುತ್ತದೆ. ಅರ್ಹತೆಗಾಗಿ ಯುಜಿಸಿ-ನೆಟ್ ಮಾನದಂಡದ ಅನುಸಾರವೇ ಕೆಸೆಟ್ ಮಾನದಂಡಗಳನ್ನು ರೂಪಿಸಲಾಗಿದ್ದು, ಸಾಮಾನ್ಯ ವರ್ಗದವರು ಎರಡೂ ಪತ್ರಿಕೆಗಳಲ್ಲಿ ಶೇ.40 ಹಾಗೂ ಉಳಿದವರು ಶೇ.35 ಅಂಕಗಳನ್ನು ಪಡೆಯಬೇಕಿದೆ.
🔍 ಗಮನಿಸಿ : ಒಟ್ಟು 33 ವಿಷಯಗಳಲ್ಲಿ ಕೆಸೆಟ್ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ರಾಜ್ಯದ ಯಾವುದೇ ವಿಶ್ವವಿದ್ಯಾಲಯ, ಪ್ರಥಮ ದರ್ಜೆ ಕಾಲೇಜು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ( ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ. ಆದರೆ, ಆಯಾ ಸಂಸ್ಥೆಯ ನಿಯಮ ಮತ್ತು ಕಾಯ್ದೆಗಳಿಗೆ ಒಳಪಟ್ಟಿರುತ್ತಾರೆ ಎಂದು ತಿಳಿಸಲಾಗಿದೆ.
* ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪ್ರವೇಶ ಪಾತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

/WhatsApp_Image_2025-10-27_at_12.03.58.jpeg)




Comments