KEA Exam Cancelled 2026: ಕೆಇಎ ಇಂದ ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್! ಮೇ 9, 10ರಂದು ನಡೆಯಬೇಕಿದ್ದ ಈ ಪರೀಕ್ಷೆಗಳು ದಿಢೀರ್ ರದ್ದು!
Published by: Yallamma G | Date:6 ಮೇ 2026

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮೇ 9 ಮತ್ತು 10 ರಂದು ನಿಗದಿಯಾಗಿದ್ದ ವಿವಿಧ ಇಲಾಖೆಗಳ (BWSSB, RGUHS, KSSIDC) ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು.
ಬೆಂಗಳೂರು (KPSCVaani News): ಸರ್ಕಾರಿ ಉದ್ಯೋಗದ ಕನಸು ಹೊತ್ತು ಪರೀಕ್ಷೆಗೆ ಸಿದ್ಧರಾಗುತ್ತಿದ್ದ ರಾಜ್ಯದ ಸಾವಿರಾರು ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮಹತ್ವದ ಮಾಹಿತಿಯೊಂದನ್ನು ನೀಡಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಇದೇ ಮೇ 9 ಮತ್ತು 10 ರಂದು ನಿಗದಿಯಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದಿಢೀರ್ ಆಗಿ ರದ್ದುಗೊಳಿಸಿ ಕೆಇಎ ಪ್ರಕಟಣೆ ಹೊರಡಿಸಿದೆ.
ಹಾಗಾದರೆ ಯಾವೆಲ್ಲಾ ಹುದ್ದೆಗಳ ಪರೀಕ್ಷೆಗಳು ರದ್ದಾಗಿವೆ? ಪರೀಕ್ಷೆ ರದ್ದಾಗಲು ಅಸಲಿ ಕಾರಣವೇನು? ಮುಂದಿನ ಪ್ರಕ್ರಿಯೆಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಪರೀಕ್ಷೆಗಳು ದಿಢೀರ್ ರದ್ದಾಗಲು ಕಾರಣವೇನು? (Reason for Cancellation)
ರಾಜ್ಯ ಸರ್ಕಾರದ ಮಹತ್ವದ ನಿರ್ಧಾರವಾದ ಪರಿಶಿಷ್ಟ ಜಾತಿ (SC) ಒಳಮೀಸಲಾತಿ ಜಾರಿಯೇ ಈ ಪರೀಕ್ಷೆಗಳ ರದ್ದತಿಗೆ ಪ್ರಮುಖ ಕಾರಣವಾಗಿದೆ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
ರದ್ದಾದ ಪರೀಕ್ಷೆಗಳ ಸಂಪೂರ್ಣ ಪಟ್ಟಿ (List of Cancelled Exams)
ಕೆಇಎ ಪ್ರಕಟಣೆಯ ಪ್ರಕಾರ, ದಿನಾಂಕ 09.05.2026 ಮತ್ತು 10.05.2026 ರಂದು ನಿಗಧಿಗೊಳಿಸಲಾದ ಪತ್ರಿಕೆ-1 ಮತ್ತು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಗಳ ಪರೀಕ್ಷೆಯನ್ನು ಕೆಳಕಂಡ ಹುದ್ದೆಗಳಿಗೆ ರದ್ದುಗೊಳಿಸಲಾಗಿದೆ
ಈ ಅಭ್ಯರ್ಥಿಗಳ 'ಪತ್ರಿಕೆ-1' ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ! (Important Update for Paper-1)
ಇದೇ ರೀತಿಯ ನಿಖರವಾದ ಉದ್ಯೋಗ ಮಾಹಿತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್‌ಡೇಟ್‌ಗಳಿಗಾಗಿ ನಿಯಮಿತವಾಗಿ KPSCVaani ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.

- ದಿನಾಂಕ 27.04.2026 ರ ಸರ್ಕಾರದ ಆದೇಶದ (ಸಿಆಸುಇ/02/ಸೇಹಿಮ/2026) ಅನ್ವಯ, ಪರಿಶಿಷ್ಟ ಜಾತಿಗೆ ಒಳಮೀಸಲಾತಿಯನ್ನು ಅಳವಡಿಸಿಕೊಂಡು ಚಾಲ್ತಿಯಲ್ಲಿರುವ ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರೆಸುವಂತೆ ಸೂಚಿಸಲಾಗಿದೆ.
- ಒಳಮೀಸಲಾತಿ ಅಳವಡಿಸದೇ ಹೊರಡಿಸಿರುವ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆದು, ಒಳಮೀಸಲಾತಿ ಅಳವಡಿಸಿಕೊಂಡು ಪರಿಷ್ಕೃತ ಅಧಿಸೂಚನೆಗಳನ್ನು ಕೂಡಲೇ ಹೊರಡಿಸಿ ನೇಮಕಾತಿಗಳನ್ನು ಮಾಡಲು ಸರ್ಕಾರ ಆದೇಶಿಸಿದೆ.
- ಆದರೆ, ದಿನಾಂಕ 30.04.2026 ರ ಸಚಿವ ಸಂಪುಟ ಸಭೆಯ ನಿರ್ಣಯದಂತೆ, ಈಗಾಗಲೇ ಪರೀಕ್ಷೆ ನಡೆಸಿರುವ ಹುದ್ದೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ, ಅವುಗಳನ್ನು ಹೊರತುಪಡಿಸಲು ಸೂಚಿಸಲಾಗಿದೆ.
ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ.
ರದ್ದಾದ ಪರೀಕ್ಷೆಗಳ ಸಂಪೂರ್ಣ ಪಟ್ಟಿ (List of Cancelled Exams)
ಕೆಇಎ ಪ್ರಕಟಣೆಯ ಪ್ರಕಾರ, ದಿನಾಂಕ 09.05.2026 ಮತ್ತು 10.05.2026 ರಂದು ನಿಗಧಿಗೊಳಿಸಲಾದ ಪತ್ರಿಕೆ-1 ಮತ್ತು ಪತ್ರಿಕೆ-2 ನಿರ್ದಿಷ್ಟ ಪತ್ರಿಕೆಗಳ ಪರೀಕ್ಷೆಯನ್ನು ಕೆಳಕಂಡ ಹುದ್ದೆಗಳಿಗೆ ರದ್ದುಗೊಳಿಸಲಾಗಿದೆ
- ಆರ್.ಜಿ.ಯು.ಹೆಚ್.ಎಸ್ (RGUHS): ಜೂನಿಯರ್ ಪ್ರೋಗ್ರಾಮರ್ ಹುದ್ದೆಗಳು.
- ಆರ್.ಜಿ.ಯು.ಹೆಚ್.ಎಸ್ (RGUHS): ಸಹಾಯಕ ಅಭಿಯಂತರರು (ಸಿವಿಲ್) ಹುದ್ದೆಗಳು.
- ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB - ಜಲಮಂಡಳಿ): ಸಹಾಯಕ ಅಭಿಯಂತರರು (ಕಂಪ್ಯೂಟರ್ ಸೈನ್ಸ್).
- ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB): ಸಹಾಯಕ ಅಭಿಯಂತರರು (ಸಿವಿಲ್).
- ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB): ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್).
- ಬಿ.ಡಬ್ಲ್ಯೂ.ಎಸ್.ಎಸ್.ಬಿ (BWSSB): ಸಹಾಯಕ ಅಭಿಯಂತರರು (ಮೆಕ್ಯಾನಿಕಲ್).
- ಕೃಷಿ ಮಾರಾಟ ಇಲಾಖೆ: ಸಹಾಯಕ ಅಭಿಯಂತರರು (ಸಿವಿಲ್).
- ಕೆ.ಎಸ್.ಎಸ್.ಐ.ಡಿ.ಸಿ (KSSIDC): ಸಹಾಯಕ ಅಭಿಯಂತರರು (ಸಿವಿಲ್).
ಈ ಅಭ್ಯರ್ಥಿಗಳ 'ಪತ್ರಿಕೆ-1' ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ! (Important Update for Paper-1)
- ಮೇಲೆ ತಿಳಿಸಿದ ಪರೀಕ್ಷೆಗಳು ರದ್ದಾಗಿದ್ದರೂ, ಈಗಾಗಲೇ ಪತ್ರಿಕೆ-2 ಬರೆದಿರುವ ಕೆಲವು ಅಭ್ಯರ್ಥಿಗಳ ಪತ್ರಿಕೆ-1 ಪರೀಕ್ಷೆಯ ಬಗ್ಗೆ ಪ್ರಾಧಿಕಾರವು ಪ್ರಮುಖ ಅಪ್ಡೇಟ್ ನೀಡಿದೆ:
- ದಿನಾಂಕ 26.04.2026 ಮತ್ತು 27.04.2026 ರಂದು ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು ಮತ್ತು ಸಹಾಯಕ ಅಭಿಯಂತರರು (ವಿದ್ಯುತ್) ಹುದ್ದೆಗಳಿಗೆ ಪತ್ರಿಕೆ-2 ಪರೀಕ್ಷೆಯನ್ನು ನಡೆಸಲಾಗಿತ್ತು.
- ಈ ಅಭ್ಯರ್ಥಿಗಳಿಗೆ 09.05.2026 ಮತ್ತು 10.05.2026 ರಂದು ನಡೆಯಬೇಕಿದ್ದ ಪತ್ರಿಕೆ-1 (ಸಾಮಾನ್ಯ ಜ್ಞಾನ ಪತ್ರಿಕೆ) ಪರೀಕ್ಷೆಯನ್ನು ದಿನಾಂಕ 08.04.2026 ರಂದು ನಡೆಸಲಾಗುವುದು ಎಂದು ಕೆಇಎ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
- ಅಭ್ಯರ್ಥಿಗಳು ತಮ್ಮ ಪರೀಕ್ಷೆಯ ಪ್ರವೇಶ ಪತ್ರವನ್ನು (Admit Card) ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.
KEA ಇಂದ ನಡೆದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು practice ಮಾಡಲು ಇಲ್ಲಿ ಕ್ಲಿಕ್ ಮಾಡಿ (To Practice Old KEA Question Papers)
ಹೆಚ್ಚಿನ ಮಾಹಿತಿಗಾಗಿ:
ಅಭ್ಯರ್ಥಿಗಳು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಮತ್ತು ಮುಂದಿನ ಅಧಿಕೃತ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ http://kea.kar.nic.in ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ:
ಇದೇ ರೀತಿಯ ನಿಖರವಾದ ಉದ್ಯೋಗ ಮಾಹಿತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್‌ಡೇಟ್‌ಗಳಿಗಾಗಿ ನಿಯಮಿತವಾಗಿ KPSCVaani ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.

Comments