KEA Exam Alert: ಜುಲೈ 4 ಮತ್ತು 5 ರಂದು ಕೆಇಎ ಗ್ರೂಪ್ 'ಎ' ಮತ್ತು 'ಬಿ' ಹುದ್ದೆಗಳ ನೇಮಕಾತಿ ಪರೀಕ್ಷೆ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Published by: Akshata Halli | Date:14 ಜೂನ್ 2026

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿವಿಧ ಇಲಾಖೆ, ನಿಗಮ ಮತ್ತು ಮಂಡಳಿಗಳಲ್ಲಿ ಖಾಲಿ ಇರುವ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಜುಲೈ 4 ಹಾಗೂ 5 ರಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಪ್ರಾಧಿಕಾರವು ತೀರ್ಮಾನಿಸಿದೆ. ಪರೀಕ್ಷೆಯ ಸಂಪೂರ್ಣ ವೇಳಾಪಟ್ಟಿ ಮತ್ತು ವಿವರಗಳು ಕೆಳಗಿನಂತಿವೆ:
ಪರೀಕ್ಷಾ ದಿನಾಂಕದ ವಿವರಗಳು:
ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕೆಇಎ ವೃಂದದ ಆಧಾರದ ಮೇಲೆ ಎರಡು ದಿನಗಳ ಕಾಲ ವೇಳಾಪಟ್ಟಿಯನ್ನು ಹಂಚಿಕೆ ಮಾಡಿದೆ:

ಯಾವೆಲ್ಲ ಇಲಾಖೆ/ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ?
ಈ ಕೆಳಕಂಡ ಇಲಾಖೆಗಳಲ್ಲಿನ ಸಿವಿಲ್, ಮೆಕ್ಯಾನಿಕಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಸಹಾಯಕ ಅಭಿಯಂತರ (AE) ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಹುದ್ದೆಗಳನ್ನು ಭರ್ತಿ ಮಾಡಲು ಈ ಪರೀಕ್ಷೆ ನಡೆಯಲಿದೆ:
ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.
ಪರೀಕ್ಷಾ ದಿನಾಂಕದ ವಿವರಗಳು:
ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಕೆಇಎ ವೃಂದದ ಆಧಾರದ ಮೇಲೆ ಎರಡು ದಿನಗಳ ಕಾಲ ವೇಳಾಪಟ್ಟಿಯನ್ನು ಹಂಚಿಕೆ ಮಾಡಿದೆ:
- ಕಲ್ಯಾಣ ಕರ್ನಾಟಕ (HK) ವೃಂದದ ಹುದ್ದೆಗಳಿಗೆ: ಜುಲೈ 4
- ಉಳಿಕೆ ಮೂಲವೃಂದದ (RPC) ಹುದ್ದೆಗಳಿಗೆ: ಜುಲೈ 5

ಯಾವೆಲ್ಲ ಇಲಾಖೆ/ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ?
ಈ ಕೆಳಕಂಡ ಇಲಾಖೆಗಳಲ್ಲಿನ ಸಿವಿಲ್, ಮೆಕ್ಯಾನಿಕಲ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಸಹಾಯಕ ಅಭಿಯಂತರ (AE) ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಹುದ್ದೆಗಳನ್ನು ಭರ್ತಿ ಮಾಡಲು ಈ ಪರೀಕ್ಷೆ ನಡೆಯಲಿದೆ:
- ಕೆಎಸ್‌ಎಸ್‌ಡಿಸಿ (KSSDC)
- ಬೆಂಗಳೂರು ಜಲ ಮಂಡಳಿ (BWSSB)
- ಕೃಷಿ ಮಾರಾಟ ಇಲಾಖೆ
ಉದ್ಯೋಗದ ಹೊಸ ಅಧಿಸೂಚನೆಗಳು ಈಗ ನಿಮ್ಮ ಮೊಬೈಲ್‌ನಲ್ಲಿ! ಇಂದೇ 'KPSCVaani' ಆಪ್ ಡೌನ್‌ಲೋಡ್ ಮಾಡಿ.

Comments