KPSC ಯಿಂದ ಶೀಘ್ರದಲ್ಲೇ 275 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದ್ದು|ಈ ಕುರಿತು ಕಿರು ಮಾಹಿತಿ ನಿಮಗಾಗಿ
Published by: Yallamma G | Date:13 ಡಿಸೆಂಬರ್ 2023

KPSC ಯಿಂದ 275ಕ್ಕೂ ಅಧಿಕ ಗ್ರೂಪ್ ಎ, ಗ್ರೂಪ್ ಬಿ ವೃಂದದ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡಲು ಕರ್ನಾಟಕ ಸರಕಾರ ಮುಂದಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಸಹಾಯಕ ಆಯುಕ್ತರು 20 ಹುದ್ದೆಗಳು ಸೇರಿ 150 ಹುದ್ದೆಗಳು ಗ್ರೂಪ್ ಎ ನಲ್ಲಿವೆ ಮತ್ತು ಕಂದಾಯ ಇಲಾಖೆಯಲ್ಲಿನ ತಹಶೀಲ್ದಾರ 26 ಹುದ್ದೆಗಳು ಸೇರಿ ಒಟ್ಟು 171 ಹುದ್ದೆಗಳು ಗ್ರೂಪ್ ಬಿ ನಲ್ಲಿವೆ. 2023 ಡಿಸೆಂಬರ್ ಕೊನೆಯ ವಾರ ಅಥವಾ ಹೊಸ ವರ್ಷ(2024)ದ ಮೊದಲ ವಾರ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ. ಈ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ಛಲ ಬಿಡದೆ ನಿಮ್ಮ ತಯಾರಿಯನ್ನು ಮುಂದುವರೆಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ...ALL THE BEST

Comments