Loading..!

ಕರ್ನಾಟಕದಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಈ ವಾರವೇ ಆನ್ ಲೈನ್ ಲಿಂಕ್ ಬಿಡುಗಡೆ | ನಿರೀಕ್ಷಿಸಿ
Published by: Yallamma G | Date:5 ಎಪ್ರಿಲ್ 2024
Image not found

ಕರ್ನಾಟಕದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ 04/03/2024 ರಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಶುಲ್ಕ ಪಾವತಿಯ ಇಂಟರ್ ಫೇಸ್ ಅನ್ನು ಸಿದ್ಧಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾರಣ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ವಾರವೇ ಆನ್ ಲೈನ್ ಲಿಂಕ್ ಬಿಡುಗಡೆ ಮಾಡಲಾಗುವುದು ಎಂದು ಕೆಇಎ ಆಯುಕ್ತರಾದ ರಮ್ಯಾ ಅವರು ತಿಳಿಸಿದ್ದಾರೆ.


* ಈ ಕುರಿತು ಮಾನ್ಯ ಆಯುಕ್ತರಾದ ರಮ್ಯಾ ಅವರು ಅಧಿಕೃತವಾಗಿ ತಿಳಿಸಿದ್ದು, ಇನ್ನೇನು ಈ ವಾರವೇ ಆನ್ ಲೈನ್ ಲಿಂಕ್ ಹೊರಬೀಳಲಿದೆ.

Comments