Loading..!

ಕ್ರಿಸ್‌ಮಸ್‌ಗೂ ಮುನ್ನವೇ ಕರ್ನಾಟಕ TET ಫಲಿತಾಂಶ ಪ್ರಕಟ | ಅಭ್ಯರ್ಥಿಗಳಿಗೆ ದೊಡ್ಡ ಅಪ್‌ಡೇಟ್
Published by: Yallamma G | Date:20 ಡಿಸೆಂಬರ್ 2025
not found

ಶಿಕ್ಷಕರಾಗುವ ಕನಸು ಹೊತ್ತವರಿಗೆ ಗುಡ್ ನ್ಯೂಸ್: ಕ್ರಿಸ್‌ಮಸ್‌ಗೂ ಮುನ್ನವೇ ಹೊರಬೀಳಲಿದೆ ಟಿಇಟಿ (TET) ಫಲಿತಾಂಶ!


ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಇತ್ತೀಚೆಗೆ ನಡೆಸಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇಲಾಖೆಯು ಸಿಹಿ ಸುದ್ದಿ ನೀಡಲು ಸಜ್ಜಾಗಿದೆ.  ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ವತಿಯಿಂದ ಇದೇ ತಿಂಗಳ 7ರಂದು ನಡೆಸಲಾದ ಶಿಕ್ಷಕರ ಅರ್ಹತಾ ಪರೀಕ್ಷೆ (TET) ಫಲಿತಾಂಶವನ್ನು ಕ್ರಿಸ್‌ಮಸ್‌ಗೂ ಮೊದಲೇ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.


Practice Old KARTET Question Papers for Free In KPSCVaani

ವೇಗಗೊಂಡ ಪ್ರಕ್ರಿಯೆ:
ಈ ಹಿಂದೆ ಡಿಸೆಂಬರ್ 23 ಅಥವಾ 24ರಂದು ಫಲಿತಾಂಶ ಪ್ರಕಟಿಸಿ, ಡಿಸೆಂಬರ್ 31ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಅಭ್ಯರ್ಥಿಗಳ ನಿರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು, ಕ್ರಿಸ್‌ಮಸ್‌ಗೆ ಮುನ್ನವೇ ಫಲಿತಾಂಶ ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.


ಆಕ್ಷೇಪಣೆಗಳ ಇತ್ಯರ್ಥ: ಟಿಇಟಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಂದ 700ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಈ ಸಂಬಂಧ ತಜ್ಞರ ಸಮಿತಿಯೊಂದಿಗೆ ಚರ್ಚೆ ನಡೆಸಲಾಗಿದೆ. ಆಕ್ಷೇಪಣೆಗಳ ಪರಿಶೀಲನೆ ಹಾಗೂ ಮೌಲ್ಯಮಾಪನ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿದು ಬಂದಿದೆ.


ತಜ್ಞರ ಸಮಿತಿ ವರದಿ ಆಧಾರದಲ್ಲಿ ಪ್ರಶ್ನೆ ಅಥವಾ ಅಂಕಗಳಲ್ಲಿನ ಯಾವುದೇ ಬದಲಾವಣೆ ಅಗತ್ಯವಿದ್ದಲ್ಲಿ, ಅದರ ಅನುಸಾರವಾಗಿ ಫಲಿತಾಂಶವನ್ನು ಸಿದ್ಧಪಡಿಸಲಾಗುತ್ತದೆ. ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿರುವ ಹಿನ್ನೆಲೆಯಲ್ಲಿ, ಟಿಇಟಿ ಫಲಿತಾಂಶ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.


ಅಭ್ಯರ್ಥಿಗಳು ಗಮನಿಸಬೇಕಾದ ಅಂಶ: ಫಲಿತಾಂಶ ಪ್ರಕಟವಾದ ತಕ್ಷಣ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ನೋಂದಣಿ ಸಂಖ್ಯೆ ಬಳಸಿ ಅಂಕಗಳನ್ನು ಪರಿಶೀಲಿಸಬಹುದು. 


Download Old KARTET GPSTR HSTR Question Papers for Free

ಫಲಿತಾಂಶ ವೀಕ್ಷಿಸುವ ಹಂತಗಳು (Steps to Check Result) :
ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಸುಲಭವಾಗಿ ನೋಡಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:


ಹಂತ 1: ಶಾಲಾ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: schooleducation.kar.nic.in. 


ಹಂತ 2: ಮುಖಪುಟದಲ್ಲಿ ಕಾಣಿಸುವ "KARTET-2024 Result" ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. 


ಹಂತ 3: ನಿಮ್ಮ ನೋಂದಣಿ ಸಂಖ್ಯೆ (Application/Roll Number) ಮತ್ತು ಜನ್ಮ ದಿನಾಂಕವನ್ನು (Date of Birth) ನಮೂದಿಸಿ. 


ಹಂತ 4: 'Submit' ಅಥವಾ 'View Result' ಬಟನ್ ಮೇಲೆ ಕ್ಲಿಕ್ ಮಾಡಿ. 


ಹಂತ 5: ನಿಮ್ಮ ಫಲಿತಾಂಶ ಪರದೆಯ ಮೇಲೆ ಮೂಡುತ್ತದೆ. ಮುಂದಿನ ಉಲ್ಲೇಖಕ್ಕಾಗಿ ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ತೆಗೆದುಕೊಳ್ಳಿ.

ಟಿಇಟಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇದು ಮಹತ್ವದ ಬೆಳವಣಿಗೆಯಾಗಿದ್ದು, ಅಧಿಕೃತ ಪ್ರಕಟಣೆಗೆ ಕಾದಿರಲು ಶಿಕ್ಷಣ ಇಲಾಖೆ ಸೂಚಿಸಿದೆ.

KPSCVaani ಯೊಂದಿಗೆ ಸದಾ ಅಪ್‌ಡೇಟ್ ಆಗಿರಿ!

Comments