Loading..!

ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಭಾರೀ ಬದಲಾವಣೆ! ಸ್ಪರ್ಧಾತ್ಮಕ ಪರೀಕ್ಷೆಗೆ (CET) 90% ಅಂಕಗಳು
Published by: Basavaraj Halli | Date:23 ಜನವರಿ 2026
not found

ರಾಜ್ಯ ಸರ್ಕಾರವು ಶಾಲಾ ಶಿಕ್ಷಕರ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ (CET) ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. CET ಯಿಂದ 90% ಅಂಕ ಮತ್ತು ಪದವಿ, ಬಿ.ಇಡಿ ಯಿಂದ 10% ಅಂಕಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಹೊಸ ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ. 


ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಕರ ನೇಮಕಾತಿ ನಿಯಮಗಳಿಗೆ (Teacher Recruitment Rules) ರಾಜ್ಯ ಸರ್ಕಾರ ಮಹತ್ವದ ತಿದ್ದುಪಡಿ ತಂದಿದೆ. ಪದವಿ (Degree) ಮತ್ತು ಬಿ.ಇಡಿ (B.Ed) ಕೋರ್ಸ್‌ಗಳ ಅಂಕಗಳ ಆಧಾರದ ಮೇಲೆ ನಡೆಯುತ್ತಿದ್ದ ನೇಮಕಾತಿ ಪ್ರಕ್ರಿಯೆಗೆ ತೆರೆ ಎಳೆದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Exams - CET) ಅತಿ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ಈ ಕುರಿತು ಕರಡು ರಾಜ್ಯಪತ್ರವನ್ನು (Draft Gazette) ಸಹ ಪ್ರಕಟಿಸಲಾಗಿದೆ.


CET, TET ಗೆ 90% ಅಂಕಗಳ ವೇಟೇಜ್! (90:10 Ratio in Teacher Selection)
ಹೊಸ ನಿಯಮಗಳ ಪ್ರಕಾರ, ಶಿಕ್ಷಕರ ನೇಮಕಾತಿಯಲ್ಲಿ ಒಟ್ಟು 100 ಅಂಕಗಳ ವೇಟೇಜ್ (Weightage) ನಿಗದಿಪಡಿಸಲಾಗಿದೆ. ಇದರಲ್ಲಿ:
90 ಅಂಕಗಳು: ಸ್ಪರ್ಧಾತ್ಮಕ ಪರೀಕ್ಷೆ (CET - Competitive Exam) ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (TET - Teacher Eligibility Test) ಗಳ ಮೂಲಕ ಪಡೆದ ಅಂಕಗಳಿಂದ ಪರಿಗಣಿಸಲಾಗುತ್ತದೆ.
10 ಅಂಕಗಳು: ಪದವಿ (Degree) ಮತ್ತು ಬಿ.ಇಡಿ (B.Ed) / ಡಿ.ಇಡಿ (D.Ed) ಕೋರ್ಸ್‌ಗಳಲ್ಲಿ ಪಡೆದ ಅಂಕಗಳಿಗೆ ಕೇವಲ 10 ಅಂಕಗಳನ್ನು ಮಾತ್ರ ನಿಗದಿಪಡಿಸಲಾಗಿದೆ.

ಈ ಮೂಲಕ, ಪದವಿ ಮತ್ತು ಬಿ.ಇಡಿ ಅಂಕಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿ, ಅಭ್ಯರ್ಥಿಗಳ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ಅಳೆಯಲು ನಿರ್ಧರಿಸಲಾಗಿದೆ.


ನಿಯಮಗಳಲ್ಲಿ ಆದ ಪ್ರಮುಖ ಬದಲಾವಣೆಗಳು ಏನು? (What are the Key Changes?)
ಕರಡು ಪ್ರಕಟಣೆಯ ಪ್ರಕಾರ, 1 ರಿಂದ 5ನೇ ತರಗತಿ ಮತ್ತು 6 ರಿಂದ 8ನೇ ತರಗತಿ ಶಿಕ್ಷಕರ ನೇಮಕಾತಿಯಲ್ಲಿನ ವೇಟೇಜ್ ಈ ಕೆಳಗಿನಂತೆ ಬದಲಾಗಿದೆ: 

1 ರಿಂದ 5ನೇ ತರಗತಿ ಶಿಕ್ಷಕರು: 


ಪರೀಕ್ಷೆ |             ಪ್ರಸ್ತುತ (ಹಳೆಯದು) |  ಹೊಸ ನಿಯಮ
ಸಿಇಟಿ (CET)         35                              70 
ಟಿಇಟಿ (TET)        15                               20 
ಡಿ.ಇಡಿ (D.Ed)      25                               8 
ಪಿಯುಸಿ (PUC)     25                               2 
ಒಟ್ಟು                   100                             100 

6 ರಿಂದ 8ನೇ ತರಗತಿ (ಪದವೀಧರ) ಶಿಕ್ಷಕರು: 
ಪರೀಕ್ಷೆ    |         ಪ್ರಸ್ತುತ (ಹಳೆಯದು)   |    ಹೊಸ ನಿಯಮ
ಸಿಇಟಿ (CET)            35                              70
ಟಿಇಟಿ (TET)           15                               20 
ಬಿ.ಇಡಿ (B.Ed)        25                                2 
ಪದವಿ (Degree)     25                                8 
ಒಟ್ಟು                    100                              100 

ಈ ಹಿಂದೆ ನಡೆದ HSTR ಪರೀಕ್ಷೆಗಳ ಪ್ರಶ್ನೋತ್ತರಗಳನ್ನು ಪ್ರಾಕ್ಟೀಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 


ಈ ಹಿಂದೆ ನಡೆದ GPSTR ಪರೀಕ್ಷೆಗಳ ಪ್ರಶ್ನೋತ್ತರಗಳನ್ನು ಪ್ರಾಕ್ಟೀಸ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ವಿಶ್ಲೇಷಣೆ:
* ಸಿಇಟಿ (CET): ಎರಡೂ ಹಂತಗಳಲ್ಲಿ ಸಿಇಟಿ ಅಂಕಗಳನ್ನು 35 ರಿಂದ 70 ಕ್ಕೆ ಏರಿಸಲಾಗಿದೆ. ಇದು ನೇಮಕಾತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
* ಟಿಇಟಿ (TET): 15 ಅಂಕಗಳಿಂದ 20 ಅಂಕಗಳಿಗೆ ಹೆಚ್ಚಿಸಲಾಗಿದೆ.
* ಶೈಕ್ಷಣಿಕ ಅಂಕಗಳು (PUC/Degree/D.Ed/B.Ed): ಇವುಗಳ ಒಟ್ಟು ಅಂಕಗಳನ್ನು 50 ರಿಂದ ಕೇವಲ 10 ಕ್ಕೆ ಇಳಿಸಲಾಗಿದೆ. 

ಬದಲಾವಣೆಗೆ ಕಾರಣಗಳೇನು? (Reasons for Change)
* ಕೋಚಿಂಗ್ ಕೇಂದ್ರಗಳ ಹಾವಳಿ: ಉನ್ನತ ಶಿಕ್ಷಣ ಸಮಿತಿಯ ಶಿಫಾರಸ್ಸಿನ ಪ್ರಕಾರ, ಕೋಚಿಂಗ್ ಕೇಂದ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
*ದೇಶಾದ್ಯಂತ ಏಕರೂಪತೆ: ದೇಶದ ಪ್ರೌಢಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಷ್ಕರಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ. 

ಆಕ್ಷೇಪಣೆಗಳಿಗೆ ಅವಕಾಶ (Objections Invited)
ಈ ಕರಡು ರಾಜ್ಯಪತ್ರಕ್ಕೆ ಸಾರ್ವಜನಿಕರು ಮತ್ತು ಸಂಬಂಧಪಟ್ಟವರು ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆಸಕ್ತರು ತಮ್ಮ ಆಕ್ಷೇಪಣೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು:
ವಿಳಾಸ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹು ಮಹಡಿ ಕಟ್ಟಡ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು - 560001.

ಪರ-ವಿರೋಧ ಅಭಿಪ್ರಾಯ (Mixed Reactions)
ಈ ಹೊಸ ನಿಯಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಒತ್ತು ನೀಡಿರುವುದು ಸರಿಯಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟರೆ, ಪದವಿ ಮತ್ತು ಬಿ.ಇಡಿ ಕೋರ್ಸ್ ಗಳಿಗೆ ಬೆಲೆ ಇಲ್ಲದಂತಾಗಿದೆ ಎಂದು ಇನ್ನು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೊರೊನಾ ಸಮಯದಲ್ಲಿ ಉತ್ತಮ ಅಂಕ ಪಡೆದವರಿಗೆ ಮತ್ತು ಅದಕ್ಕೂ ಮೊದಲು ಪದವಿ ಪಡೆದವರಿಗೆ ಇದರಿಂದ ಅನ್ಯಾಯವಾಗಲಿದೆ ಎಂಬ ವಾದವೂ ಕೇಳಿಬಂದಿದೆ.

Comments