Loading..!

KSMHA ನೇಮಕಾತಿ 2025: ಕನ್ಸಲ್ಟೆಂಟ್ ಹುದ್ದೆಗಳಿಗೆ ಬಂಪರ್ ಅವಕಾಶ! ನೇರ ಸಂದರ್ಶನ
Published by: Yallamma G | Date:12 ಡಿಸೆಂಬರ್ 2025
not found

                  ಕರ್ನಾಟಕದಲ್ಲಿ ಆರೋಗ್ಯ ಮತ್ತು ಕಾನೂನು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ (Karnataka State Mental Health Authority - KSMHA) ವತಿಯಿಂದ ಪ್ರೋಗ್ರಾಂ ಕನ್ಸಲ್ಟೆಂಟ್ (Programme Consultant) ಮತ್ತು ಲೀಗಲ್ ಕನ್ಸಲ್ಟೆಂಟ್ (Legal Consultant) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ (ಸಂಖ್ಯೆ: KSMHA/EST/10/2025-26) ಹೊರಡಿಸಲಾಗಿದೆ.


ಈ ಹುದ್ದೆಗಳು ತಾತ್ಕಾಲಿಕ ಮತ್ತು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಇದ್ದು, ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನ (Walk-in-Interview) ಮೂಲಕ ಆಯ್ಕೆಯಾಗಬಹುದು.ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು - ಕರ್ನಾಟಕ ಸರ್ಕಾರ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 23-ಡಿಸೆಂಬರ್-2025 ರಂದು ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.


ಶೈಕ್ಷಣಿಕ ಅರ್ಹತೆ: ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು.
ಪ್ರೋಗ್ರಾಂ ಕನ್ಸಲ್ಟೆಂಟ್ : MD Psychiatry/DPM/DNB Psychiatry ಅಥವಾ MD Community Medicine
ಅನುಭವ : 3 ವರ್ಷಗಳ ಅನುಭವ (ಮಾನಸಿಕ ಆರೋಗ್ಯ/ಇತರೆ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದಲ್ಲಿ 3 ವರ್ಷಗಳ ಅನುಭವ ಅಪೇಕ್ಷಿತ)


ಕಾನೂನು ಸಲಹೆಗಾರ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (Law Graduate) ಮತ್ತು ಬಾರ್ ಕೌನ್ಸಿಲ್‌ನಲ್ಲಿ ನೋಂದಣಿ 
ಅನುಭವ : 2 ವರ್ಷಗಳ ಅನುಭವ (ಸರ್ಕಾರಿ/ಆರೋಗ್ಯ ಕ್ಷೇತ್ರದಲ್ಲಿ ಕಾನೂನು ಸಲಹೆ ಸೇವೆಯಲ್ಲಿ 2+ ವರ್ಷಗಳ ಅನುಭವ ಅಪೇಕ್ಷಿತ)


ಮಾಸಿಕ ವೇತನ : 
ಕಾರ್ಯಕ್ರಮ ಸಲಹೆಗಾರ : ರೂ. 80,000/-
ಕಾನೂನು ಸಲಹೆಗಾರ : ರೂ. 50,000/-


KPSCvaani ಯಿಂದ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ

ವಯೋಮಿತಿ :
ಈ ಕೆಳಗಿನಂತೆ ವಯೋಮಿತಿಯನ್ನು ನಿಗದಿಪಡಿಸಲಾಯಿದೆ.
ಕಾರ್ಯಕ್ರಮ ಸಲಹೆಗಾರ: ಗರಿಷ್ಠ 40
ಕಾನೂನು ಸಲಹೆಗಾರ : ಗರಿಷ್ಠ 50
ವಯೋಮಿತಿ ಸಡಿಲಿಕೆ : ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಮಾನದಂಡಗಳ ಪ್ರಕಾರ


ಸಂದರ್ಶನಕ್ಕೆ ಹಾಜರಾಗಲು ಬೇಕಾದ ಅಗತ್ಯ ದಾಖಲೆಗಳು : 
=> ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಗಿನ ಮೂಲ ದಾಖಲೆಗಳು ಮತ್ತು ಪ್ರತಿಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು:
=> ಎಲ್ಲಾ ಮೂಲ ದಾಖಲೆಗಳು/ಪ್ರಮಾಣಪತ್ರಗಳು.
=> ಸ್ವಯಂ ದೃಢೀಕರಿಸಿದ (Self-attested) ಎಲ್ಲಾ ದಾಖಲೆಗಳ ಪ್ರತಿಗಳು (XEROX).
=> ಇತ್ತೀಚಿನ ನವೀಕರಿಸಿದ (Updated) ಬಯೋಡೇಟಾ (CV).
=> ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದ ಪ್ರತಿ.
=> ಮಾನ್ಯ ಐಡಿ ಪುರಾವೆ (ಆಧಾರ್ ಕಾರ್ಡ್/PAN/DL/ವೋಟರ್ ಐಡಿ).
=> ಗಮನಿಸಿ: ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ತಿಳಿದಿರಬೇಕು. ಕಂಪ್ಯೂಟರ್ ಜ್ಞಾನ (MS Word, Excel & Power Point) ಅಪೇಕ್ಷಣೀಯವಾಗಿದೆ.


📍 ಸಂದರ್ಶನ ಸ್ಥಳದ ವಿಳಾಸ (Walk-in Venue)
ವಾಕ್-ಇನ್-ಇಂಟರ್ವ್ಯೂ ದಿನಾಂಕ: 23-ಡಿಸೆಂಬರ್-2025
ವರದಿ ಮಾಡುವ ಸಮಯ: ಬೆಳಗ್ಗೆ 10:00 ಗಂಟೆಗೆ
ಸಂದರ್ಶನ ಸ್ಥಳ (Walk-in Venue): ನಿರ್ದೇಶಕರು, HFW ಮತ್ತು ಸದಸ್ಯ ಕಾರ್ಯದರ್ಶಿ, KSMHA ಕಛೇರಿ 6ನೇ ಮಹಡಿ, ಆರೋಗ್ಯ ಸೌಧ, ಮಾದೇಡಿ ರಸ್ತೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೋ ನಿಲ್ದಾಣದ ಎದುರು, ಬೆಂಗಳೂರು-560023.


✅ ಗಮನಿಸಬೇಕಾದ ಅಂಶಗಳು


- ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲೆಗಳು, ಸ್ವಯಂ ದೃಢೀಕರಿಸಿದ ಪ್ರತಿಗಳು, ನವೀಕರಿಸಿದ ಬಯೋಡೇಟಾ (CV), ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಮತ್ತು ಮಾನ್ಯ ಐಡಿ ಪುರಾವೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
- ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಲು, ಓದಲು ಮತ್ತು ಬರೆಯಲು ತಿಳಿದಿರಬೇಕು. ಕಂಪ್ಯೂಟರ್ ಜ್ಞಾನ (MS Word, Excel & Power Point) ಅಪೇಕ್ಷಣೀಯವಾಗಿದೆ.


ಹೊಸ ನೇಮಕಾತಿಗಳಿಗಾಗಿ ಅಭ್ಯಸಿಸಲು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಇಲ್ಲಿ ಡೌನ್ಲೋಡ್ ಮಾಡಿ

Comments