Loading..!

ಸಮಾಜ ಕಲ್ಯಾಣ ಇಲಾಖೆಯ 140 ವಾರ್ಡನ್ ಹುದ್ದೆಗಳ ನೇಮಕಾತಿ – ಹೆಚ್ಚುವರಿ ಆಯ್ಕೆ ಪಟ್ಟಿ ಇದೀಗ ಪ್ರಕಟ!
Published by: Yallamma G | Date:9 ಜುಲೈ 2025
Image not found

     ಕರ್ನಾಟಕ ಲೋಕ ಸೇವಾ ಆಯೋಗದಿಂದ 31-07-2020 ರಲ್ಲಿ ಅಧಿಸೂಚಿಸಲಾದ ಗ್ರೂಪ್-C ತಾಂತ್ರಿಕೇತರ ವೃಂದದ ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಿದ್ಯಾರ್ಥಿ ನಿಲಯದ ಒಟ್ಟು 140 (80 ಪುರುಷ ವಾರ್ಡನ್‌ಗಳು ಮತ್ತು 60 ಮಹಿಳಾ ವಾರ್ಡನ್‌) ವಾರ್ಡನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. 


ಹುದ್ದೆಗಳ ವಿವರ:
👨 ಪುರುಷ ವಾರ್ಡನ್ ಹುದ್ದೆಗಳು: 80
👩 ಮಹಿಳಾ ವಾರ್ಡನ್ ಹುದ್ದೆಗಳು: 60
✅ ಒಟ್ಟು ನೇಮಕಾತಿ: 140 ಹುದ್ದೆಗಳು


               ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ:11-08-2023ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಗಾಗಿ ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಯ ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ) (ಸಾಮಾನ್ಯ) ನಿಯಮಗಳು 2021ರ ತಿದ್ದುಪಡಿ ನಿಯಮಗಳ ನಿಯಮಗಳನ್ವಯ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರೇಕಟಿಸಲಾಗಿದೆ.


ಪಟ್ಟಿ ಪರಿಶೀಲಿಸಲು:
📄 ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಸಂಬಂಧಿತ ಜಿಲ್ಲಾಧಿಕಾರಿ ಕಚೇರಿಗಳ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಲಾಗಿದೆ.
🔗 ಅಧಿಕೃತ ವೆಬ್‌ಸೈಟ್: https://sw.kar.nic.in (ಅಥವಾ) https://karepass.cgg.gov.in

Comments