Life is like this loading!

We've to prepare well to perform better

ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ಉಪನ್ಯಾಸಕರ (PU Lecturer's) ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ
Published by: Savita Halli | Date:25 ಆಗಸ್ಟ್ 2022
Image not found

ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು ಅನುಮತಿ ನೀಡಿದೆ. 
ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಈ ಕೆಳಕಂಡ  778 ಐವಿಧ 10 ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಸರ್ಕಾರವು ಅನುಮತಿಯನ್ನು ನೀಡಿದೆ.  
 10 ವಿವಿಧ ವಿಷಯಗಳಲ್ಲಿ ಹುದ್ದೆಗಳು ಖಾಲಿ ಇವೆ.
- ಕನ್ನಡ ವಿಷಯದಲ್ಲಿ 100 ,
- ಇತಿಹಾಸ , ಇಂಗ್ಲಿಷ್ ತಲಾ 120 ,
- ಅರ್ಥಶಾಸ್ತ್ರ 180 ,
- ಭೂಗೋಳ ಶಾಸ್ತ್ರ 20 ,
- ವಾಣಿಜ್ಯ ಶಾಸ್ತ್ರ 80 ,
- ಸಮಾಜ ಶಾಸ್ತ್ರ  75
- ರಾಜ್ಯಶಾಸ್ತ್ರ ತಲಾ 75 ,
- ಮನಃಶಾಸ್ತ್ರ 2 ಹಾಗೂ
- ಗಣಕ ವಿಜ್ಞಾನದಲ್ಲಿ 6 ಹುದ್ದೆಗಳು ಖಾಲಿ ಇವೆ.
ಶೀಘ್ರದಲ್ಲೇ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ ಅಭ್ಯರ್ಥಿಗಳು ಗಮನಿಸಬೇಕು

Comments