Loading..!

🚨 ಶೀಘ್ರದಲ್ಲೇ! ರಾಜ್ಯ ಪೊಲೀಸ್ ಇಲಾಖೆಯಲ್ಲಿ 2032 ಕಾನ್‌ಸ್ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ – ಅಭ್ಯರ್ಥಿಗಳಿಗೆ ಸಿಹಿ ಅವಕಾಶ!
Published by: Yallamma G | Date:18 ಅಕ್ಟೋಬರ್ 2025
not found

                 ಪೊಲೀಸ್ ಇಲಾಖೆಯು ವಿವಿಧ ಘಟಕಗಳಲ್ಲಿ ಕಾನ್‌ಸ್ಟೆಬಲ್‌ಗಳ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ವಿಶೇಷ ಮೀಸಲು ಪೊಲೀಸ್ ಕಾನ್‌ ಸ್ಟೆಬಲ್ ಹುದ್ದೆಗಳನ್ನು ಆಯಾ ಪಡೆಗಳಿಗೆ ಹಂಚಿಕೆ ಮಾಡಿ ಸುತ್ತೋಲೆ ಹೊರಡಿಸಿದೆ. ಬೆಟಾಲಿಯನ್‌ಗಳಿಗೆ ಹಂಚಿಕೆಯಾಗಿರುವ ಹುದ್ದೆಗಳಿಗೆ ಅನುಗುಣವಾಗಿ ನೇರ ಹಾಗೂ ಸಮತಳ ವರ್ಗೀಕರಣವನ್ನು ನೀಡುವಂತೆ ಘಟಕ ಮುಖ್ಯಸ್ಥರಿಗೆ ಕೆಎಸ್‌ಆರ್‌ಪಿಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸಂದೀಪ್ ಪಾಟೀಲ್ ನಿರ್ದೇಶನ ನೀಡಿದ್ದಾರೆ.


                 ಈಗಾಗಲೇ ಕೇಂದ್ರ ಕಚೇರಿಗೆ ನೀಡಿರುವ ವರ್ಗೀಕರಣವನ್ನು ಮಾರ್ಪಡಿಸಿ, ಮರು ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಿದ್ದಾರೆ. ವಿಶೇಷ ಮೀಸಲು ಪೊಲೀಸ್ ಪಡೆಗಳಿಗೆ ಒಟ್ಟಾರೆಯಾಗಿ 2032 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಕಲ್ಯಾಣ 366 ಹುದ್ದೆಗಳಿವೆ.ಮಹಿಳೆಯರಿಗೆ ಒಟ್ಟು 123 ಹುದ್ದೆಗಳನ್ನು ಮೀಸಲಿಡಲಾಗಿದೆ. 


                   ಇಲಾಖೆಯು ವಿವಿಧ ವಿಭಾಗಗಳಲ್ಲಿ 4,656 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲು ಸಜ್ಜಾಗುತ್ತಿದ್ದು, ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸುವ ನಿರೀಕ್ಷೆಯಿದೆ. ವಿಶೇಷ ಮೀಸಲು ಪೊಲೀಸ್ ಪಡೆಗಳ ಹೊರತಾಗಿ ಡಿಟೆಕ್ಟಿವ್ ಸಬ್ ಇನ್‌ಸ್ಪೆಕ್ಟರ್‌ಗಳ (ಡಿಎಸ್‌ಐ)- 20, ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಗಳ (ಎಪಿಸಿ) 1,650, ನಾಗರಿಕ ಪೊಲೀಸ್ ಕಾನ್ ಸ್ಟೆಬಲ್ (ಸಿವಿಲ್)- 614, ಕೈಗಾರಿಕಾ ಭದ್ರತಾ ಪಡೆಯಲ್ಲಿ 340 ಕಾನ್‌ಸ್ಟೆಬಲ್‌ಗಳ ಹುದ್ದೆಗಳನ್ನು ಮಾಡಿಕೊಳ್ಳಲಿದೆ. ಒಳ ಮೀಸಲು, ವಯೋಮಿತಿ ಹೆಚ್ಚಳ ಆದೇಶ ಹೊರಡಿಸಿದ್ದು, ಈವರೆಗೆ ನೇಮಕಾತಿ ಮೇಲೆ ವಿಧಿಸಲಾಗಿದ್ದ ವಿವಿಧ ನಿರ್ಬಂಧ ಆದೇಶಗಳನ್ನು ಹಿಂಪಡೆದಿದೆ. ಹೀಗಾಗಿ ನೇಮಕಾತಿ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.


# ಶೇ.3 ಕ್ರೀಡಾ ಮೀಸಲು ಅನ್ವಯ : ಸರ್ಕಾರದ ಮೀಸಲು ನಿಯಮಾವಳಿಗಳ ಅನ್ವಯ ಶೇ.3 ಹುದ್ದೆಗಳನ್ನು ಸಾಧಕ ಕ್ರೀಡಾಪಟುಗಳಿಗೆ ನೀಡತಕ್ಕದ್ದು. ಈ ಹಿನ್ನೆಲೆ ಒಟ್ಟು 45 ಹುದ್ದೆಗಳು ಕ್ರೀಡಾ ಮೀಸಲು ಅನ್ವಯ ನಿಗದಿ ಮಾಡಲಾಗಿದೆ. ಇದರಲ್ಲಿ 10 ಹುದ್ದೆಗಳು ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ ಇರಲಿವೆ.


ಯಾವ ಪಡೆಗೆ ಎಷ್ಟು ಹುದ್ದೆಗಳು : 2032
1ನೇ ಬೆಟಾಲಿಯನ್, ಬೆಂಗಳೂರು : 167 
2ನೇ ಬೆಟಾಲಿಯನ್, ಬೆಳಗಾವಿ : 163
3ನೇ ಬೆಟಾಲಿಯನ್, ಬೆಂಗಳೂರು : 147
4ನೇ ಬೆಟಾಲಿಯನ್, ಬೆಂಗಳೂರು : 207 
5ನೇ ಬೆಟಾಲಿಯನ್, ಮೈಸೂರು : 128
6ನೇ ಬೆಟಾಲಿಯನ್, ಬೆಂಗಳೂರು : 221
7ನೇ ಬೆಟಾಲಿಯನ್, ಮಂಗಳೂರು : 335
8ನೇ ಬೆಟಾಲಿಯನ್, ಶಿವಮೊಗ್ಗ : 120
09ನೇ ಬೆಟಾಲಿಯನ್, ಬೆಂಗಳೂರು : 108
11 ನೇ ಬೆಟಾಲಿಯನ್, ಹಾಸನ : 135
12ನೇ ಬೆಟಾಲಿಯನ್, ತುಮಕೂರು : 135
ಭಾರತೀಯ ರಿಸರ್ವ್ ಫೋರ್ಸ್ ಮುನಿರಾಬಾದ್ : 166 


ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ ಬರಲಿದೆ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸಾಧ್ಯವಾದಷ್ಟು ಬೇಗ

Comments