ಪೊಲೀಸ್ ಕಾನ್‌ಸ್ಟೆಬಲ್‌ಗಳು, ಪೊಲೀಸ್ ಸಬ್-ಇನ್‌ಸ್ಪೆಕ್ಟರ್‌ಗಳು (ಪಿಎಸ್‌ಐ) ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗಳ (ಪಿಐ) ನೇಮಕಾತಿಗೆ ಮೂರು ಸ್ಲ್ಯಾಬ್‌ಗಳಲ್ಲಿ ಪ್ರತ್ಯೇಕ ಮತ್ತು ಶಾಶ್ವತ ವಯೋಮಿತಿ ಸಡಿಲಿಕೆಗೆ ಗೃಹ ಇಲಾಖೆಯು ಒಂದು ವಾರದೊಳಗೆ ಕೇಡರ್ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಪರಮೇಶ್ವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರ ವಯೋಮಿತಿ ಒಂದು ಬಾರಿಗೆ ಅನ್ವಯ ಆಗುವಂತೆ ಎಲ್ಲ ಇಲಾಖೆಗಳಲ್ಲಿ ನೇಮಕಾತಿಗಾಗಿ 2027 ರವರೆಗೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ಘೋಷಿಸಿದ್ದಾರೆ. ಆದರೆ ಗೃಹ ಇಲಾಖೆಯಲ್ಲಿ ನಾವು ವಯೋಮಿತಿಯನ್ನು ಶಾಶ್ವತವಾಗಿ ಸಡಿಲಿಸುತ್ತೇವೆ ಎಂದ ಹೇಳಿದ್ದಾರೆ.
ವಯೋಮಿತಿ ಸಡಿಲಿಕೆ ಕುರಿತು ನಾವು ಇತರ ರಾಜ್ಯಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ. ಅಲ್ಲಿ 27, 30 ಮತ್ತು 33 ವರ್ಷಗಳನ್ನು ಗರಿಷ್ಠ ವಯೋಮಿತಿಯಾಗಿ ನಿಗದಿಪಡಿಸಿವೆ. ನಾವು ಅವರ ನಿಯಮಗಳನ್ನು ಅಧ್ಯಯನ ಮಾಡುತ್ತೇವೆ ಮತ್ತು ನಮ್ಮದೇ ಆದ ವಯೋಮಿತಿ ಸಡಿಲಿಕೆಯನ್ನು ನಿಗದಿಪಡಿಸುತ್ತೇವೆ' ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ. “ಇದರಿಂದಾಗಿ ಯುವಕರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಮತ್ತು ಇಲಾಖೆಯಲ್ಲಿನ ಸೇವಾ ಗುಣಮಟ್ಟವೂ ಮತ್ತಷ್ಟು ಏರಿಕೆಯಾಗಲಿದೆ” ಎಂದರು.
➡️ ಈ ನಿರ್ಧಾರದಿಂದ ಸಾವಿರಾರು ಯುವಕರಿಗೆ ಹೊಸ ಉದ್ಯೋಗಾವಕಾಶಗಳ ದಾರಿ ತೆರೆದಿಡಲಿದೆ.
Comments