ಕರ್ನಾಟಕ ಜೀವವೈವಿಧ್ಯ ಮಂಡಳಿ 2025 ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಸಲಹೆಗಾರ (ಸಸ್ಯಶಾಸ್ತ್ರ) ಹುದ್ದೆಯ ಒಂದು ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆ ಬೆಂಗಳೂರಲ್ಲಿ ಲಭ್ಯವಿದ್ದು, ಸರ್ಕಾರೀ ಸೇವೆಗೆ ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶವಾಗಿದೆ. ಅರ್ಜಿದಾರರು2025ರ ಸೆಪ್ಟೆಂಬರ್ 20ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ವಿವರಗಳು :
ಸಂಸ್ಥೆ ಹೆಸರು: ಕರ್ನಾಟಕ ಜೀವವೈವಿಧ್ಯ ಮಂಡಳಿ
ಹುದ್ದೆಗಳ ಸಂಖ್ಯೆ: 01
ಹುದ್ದೆಯ ಹೆಸರು: ಸಲಹೆಗಾರ (ಸಸ್ಯಶಾಸ್ತ್ರ)
ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ
ವೇತನ: ಪ್ರತಿ ತಿಂಗಳು ₹60,000/-
ಅರ್ಹತೆಗಳು :
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ Ph.D (ಸಸ್ಯಶಾಸ್ತ್ರ) ಪದವಿ ಪಡೆದಿರಬೇಕು.
ವಯೋಮಿತಿ :
ಗರಿಷ್ಠ ವಯಸ್ಸು: 50 ವರ್ಷ (ಮಂಡಳಿಯ ನಿಯಮಾನುಸಾರ ಸಡಿಲಿಕೆ ಅನ್ವಯವಾಗುತ್ತದೆ).
ಆಯ್ಕೆ ವಿಧಾನ :
- ಅರ್ಹತೆ
- ಅನುಭವ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
- ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಸ್ವಯಂ-ಪ್ರಮಾಣಿತ ಪ್ರತಿಗಳನ್ನು ಸೇರಿಸಿ, ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
ವಿಳಾಸ :
Administrative Officer, Karnataka Biodiversity Board,
Ground Floor, Vanavikas, 18th Cross, Malleshwaram,
Bengaluru – 560003
ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರೆ ಸೇವೆಗಳ ಮೂಲಕ ಕಳುಹಿಸಬೇಕು.
ಪ್ರಮುಖ ದಿನಾಂಕಗಳು :
- ಅರ್ಜಿ ಪ್ರಾರಂಭ ದಿನಾಂಕ: 15-09-2025
- ಅಂತಿಮ ದಿನಾಂಕ: 20-09-2025
👉 ಈ ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಓದಿ, ತಮ್ಮ ಅರ್ಹತೆ ದೃಢಪಡಿಸಿಕೊಂಡ ನಂತರವೇ ಅರ್ಜಿ ಸಲ್ಲಿಸುವುದು ಸೂಕ್ತ.
Comments