ರಾಜ್ಯ ಸರಕಾರ ಒಳಮೀಸಲು ಜಾರಿಗೊಳಿಸಿದ್ದು, ಖಾಲಿಯಿರುವ ಸರಕಾರಿ ಹುದ್ದೆಗಳಲ್ಲಿ 90 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಖಾಲಿಯಿರುವ ಎಲ್ಲ ಸರಕಾರಿ ಹುದ್ದೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಭರ್ತಿ ಮಾಡಲಾಗುವುದು. ಮೀಸಲು ಹಾಗೂ ಸರಕಾರಿ ಕೋಟಾದಡಿ ವೈದ್ಯ ಸೀಟು ಪಡೆದ ಅಭ್ಯರ್ಥಿಗಳು ಹಳ್ಳಿ ಸೇವೆಗೆ ಒಪ್ಪದಿದ್ದರೆ ಪದವಿ ಪತ್ರಗಳನ್ನೇ ತಡೆ ಹಿಡಿಯಲಾಗುವುದು ಎಂದು ಅವರು ತಿಳಿಸಿದ್ದಾರೆ.
Comments