ಕೆ-ಸೆಟ್ 2025: ವಿಶೇಷಚೇತನ ಅಭ್ಯರ್ಥಿಗಳ ವೈದ್ಯಕೀಯ ಪರಿಶೀಲನೆಗೆ ಅಂತಿಮ ಅವಕಾಶ – ಪಟ್ಟಿ ಬಿಡುಗಡೆ!
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನವೆಂಬರ್ 2, 2025 ರಂದು ನಡೆಸಿದ್ದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (K-SET) ಫಲಿತಾಂಶ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ವಿಶೇಷಚೇತನ (PWD) ಕೋಟಾದಡಿ ಅರ್ಹತೆ ಪಡೆಯಲು ಬಾಕಿ ಇರುವ ಅಭ್ಯರ್ಥಿಗಳಿಗೆ ಪ್ರಾಧಿಕಾರವು ಈಗ ಮಹತ್ವದ ಸೂಚನೆಯೊಂದನ್ನು ನೀಡಿದೆ.
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆವು (K-SET) ನಂತರ ವಿಷಯವಾರು ಕಟ್ ಆಫ್ ಅಂಕಗಳ ಪಟ್ಟಿ ಯನ್ನು 21 ನವೆಂಬರ್ 2025 ರಂದು KEA ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು.
ಈ ಪರೀಕ್ಷೆಗೆ ಹಾಜರಾಗಿದ್ದ ಮತ್ತು ಅರ್ಜಿಯಲ್ಲಿ ವಿಶೇಷಚೇತನ (PwD) ಮೀಸಲಾತಿ ಕೋರಿದ್ದ ಅಭ್ಯರ್ಥಿಗಳ ಪೈಕಿ, ಆಯಾ ವಿಷಯದಲ್ಲಿ ನಿಗದಿತ ಅರ್ಹತಾ ಅಂಕಗಳನ್ನು ಪಡೆದ 375 ಅಭ್ಯರ್ಥಿಗಳ ಪಟ್ಟಿ ಯನ್ನು 28 ನವೆಂಬರ್ 2025 ರಂದು ಪ್ರಕಟಿಸಿ, ವೈದ್ಯಕೀಯ ಸಮಿತಿಯ ಭೌತಿಕ ಪರಿಶೀಲನೆಗೆ ಹಾಜರಾಗಲು ಸೂಚಿಸಲಾಗಿತ್ತು.
KEA ಗ್ರೂಪ್-ಸಿ ಪರೀಕ್ಷೆಗಳಿಗಾಗಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉಚಿತವಾಗಿ ಪ್ರಾಕ್ಟೀಸ್ ಮಾಡಿ
ವೈದ್ಯಕೀಯ ಪರಿಶೀಲನೆ ಪಟ್ಟಿ ಪ್ರಕಟ
ಕೆ-ಸೆಟ್ 2025ರ ಅರ್ಜಿಯಲ್ಲಿ ವಿಶೇಷಚೇತನ ಮೀಸಲಾತಿ ಕೋರಿ, ಆಯಾ ವಿಷಯಗಳಲ್ಲಿ ನಿಗದಿತ ಅರ್ಹತಾ ಅಂಕಗಳನ್ನು ಪಡೆದಿದ್ದ 375 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿತ್ತು. ಈ ಅಭ್ಯರ್ಥಿಗಳಿಗೆ ಡಿಸೆಂಬರ್ 8 ಮತ್ತು 9 ರಂದು ವೈದ್ಯಕೀಯ ಸಮಿತಿಯಿಂದ ಭೌತಿಕ ಪರಿಶೀಲನೆ ನಡೆಸಲಾಗಿತ್ತು. ಪ್ರಸ್ತುತ, ವೈದ್ಯಕೀಯ ಸಮಿತಿಯು ಪರಿಶೀಲನೆ ನಡೆಸಿ ನೀಡಿರುವ ಅರ್ಹ ಅಭ್ಯರ್ಥಿಗಳ ಪಟ್ಟಿ ಹಾಗೂ ಅಂದು ಗೈರುಹಾಜರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
KPSCvaani ಯ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ
⚠️ ಗೈರು ಹಾಜರಾದ ಅಭ್ಯರ್ಥಿಗಳಿಗೆ 09-01-2026 ಕೊನೆಯ ಹಾಗೂ ಅಂತಿಮ ಅವಕಾಶ
ಈ ಹಿಂದೆ ವೈದ್ಯಕೀಯ ಪರಿಶೀಲನೆಗೆ ಬರಲು ಸಾಧ್ಯವಾಗದ ವಿಶೇಷಚೇತನ ಅಭ್ಯರ್ಥಿಗಳಿಗೆ KEA ಮತ್ತೊಂದು ಕೊನೆಯ ಅವಕಾಶ ನೀಡಿದೆ.
📌 ದಿನಾಂಕ: 09 ಜನವರಿ 2026
📍 ಸ್ಥಳ: KEA ಕಚೇರಿ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು
📄 ಕಡ್ಡಾಯವಾಗಿ ತರಬೇಕಾದ ದಾಖಲೆಗಳು :(28-11-2025 ರ ಪ್ರಕಟಣೆಯಲ್ಲಿ ಸೂಚಿಸಿರುವಂತೆ)
K-SET 2025 ಅರ್ಜಿ ಪ್ರತಿ
ವಿಶೇಷಚೇತನ ಪ್ರಮಾಣ ಪತ್ರ (ಸರ್ಕಾರ ಮಾನ್ಯತೆ ಪಡೆದ)
ಆಧಾರ್ ಕಾರ್ಡ್ / ಗುರುತಿನ ದಾಖಲೆ
ವಿದ್ಯಾರ್ಹತೆ ಪ್ರಮಾಣ ಪತ್ರಗಳು
ಸಂಬಂಧಿತ ಮೀಸಲಾತಿ ದಾಖಲೆಗಳು (ಅಗತ್ಯವಿದ್ದರೆ)
KEA ಸೂಚಿಸಿದ ಇತರೆ ದಾಖಲೆಗಳು
⛔ ಈ ಅವಕಾಶ ತಪ್ಪಿದರೆ ಮತ್ತೊಮ್ಮೆ ಅವಕಾಶ ಇಲ್ಲ!
KEA ಸ್ಪಷ್ಟವಾಗಿ ತಿಳಿಸಿರುವಂತೆ:
09-01-2026 ರಂದು ಸಹ ಗೈರು ಹಾಜರಾದರೆ, ವೈದ್ಯಕೀಯ ಪರಿಶೀಲನೆಗೆ ಮತ್ತೊಮ್ಮೆ ಅವಕಾಶ ನೀಡಲಾಗುವುದಿಲ್ಲ.
ಇದು PwD ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಪಡೆಯಲು ಕೊನೆಯ ದಾರಿ ಆಗಿದ್ದು, ಈ ದಿನ ಹಾಜರಾಗಿ ಅರ್ಹತೆ ದೃಢಪಡಿಸಿದವರಿಗೆ ಮಾತ್ರ K-SET ಪ್ರಮಾಣ ಪತ್ರ ನೀಡಲಾಗುತ್ತದೆ.
💡 ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ
ವೈದ್ಯಕೀಯ ಪರಿಶೀಲನೆ ಆಯಾ ವಿಷಯದ ವಿಶೇಷಚೇತನ ಕೋಟಾ ಅಡಿಯಲ್ಲಿ ಅರ್ಹತೆ ನಿರ್ಧರಿಸಲು ಮಾತ್ರ
ಈಗಾಗಲೇ ಅರ್ಹತಾ ಅಂಕ ಪಡೆದಿದ್ದರೂ ವೈದ್ಯಕೀಯ ಪರಿಶೀಲನೆ ಕಡ್ಡಾಯ
ಎಲ್ಲಾ ದಾಖಲೆಗಳು ಮೂಲ ಪ್ರತಿ + 1 ಸೆಟ್ ಜೆರಾಕ್ಸ್ ಇರಬೇಕು
ಸಮಯಕ್ಕೆ ಸರಿಯಾಗಿ ಹಾಜರಾಗಲು ಸೂಚಿಸಲಾಗಿದೆ
🔔 K-SET 2025 ವಿಶೇಷಚೇತನ ಅಭ್ಯರ್ಥಿಗಳಿಗೆ ಕೊನೆ ಮಾತು
ಇದು ನಿಮ್ಮ ಸಹಾಯಕ ಪ್ರಾಧ್ಯಾಪಕ ಕನಸಿಗೆ ಮುಖ್ಯ ಹಂತ. ಈಗಾಗಲೇ ಅರ್ಹತಾ ಅಂಕ ಪಡೆದಿರುವುದರಿಂದ, ಒಂದು ದಿನದ ಪರಿಶೀಲನೆ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಯಾವುದೇ ಕಾರಣಕ್ಕೂ ಈ ಅವಕಾಶವನ್ನು ಕೈ ತಪ್ಪಿಸಿಕೊಳ್ಳಬೇಡಿ.
ಹೆಚ್ಚಿನ ಉದ್ಯೋಗ ಮಾಹಿತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್‌ಡೇಟ್‌ಗಳಿಗಾಗಿ KPSCVaani ಫಾಲೋ ಮಾಡಿ.
ಪ್ರತಿ ದಿನದ ಪ್ರಚಲಿತ ಘಟನೆಗಳ ಆಧಾರಿತ Quiz ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

/5f6269e8-739a-496b-893e-6fe7368fbe96.png)



Comments