Loading..!

ಐಐಟಿ ಖರಗ್‌ಪುರ ನೇಮಕಾತಿ 2025: ಸೀನಿಯರ್ ರಿಸರ್ಚ್ ಫೆಲೋಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:23 ಆಗಸ್ಟ್ 2025
Image not found

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಖರಗ್‌ಪುರ ಸಂಸ್ಥೆಯು ಸೀನಿಯರ್ ರಿಸರ್ಚ್ ಫೆಲೋಶಿಪ್ (Senior Research Fellowship) ಹುದ್ದೆಗಳಿಗೆ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಪ್ರಕಾರ ಒಟ್ಟು 02 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು2025ರ ಆಗಸ್ಟ್ 26ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ನೇಮಕಾತಿ ವಿವರಗಳು : 
ಸಂಸ್ಥೆ ಹೆಸರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್‌ಪುರ (IIT Kharagpur)
ಹುದ್ದೆ ಹೆಸರು: ಸೀನಿಯರ್ ರಿಸರ್ಚ್ ಫೆಲೋಶಿಪ್ (SRF)
ಒಟ್ಟು ಹುದ್ದೆಗಳು: 02
ಅಧಿಕೃತ ವೆಬ್‌ಸೈಟ್: iitkgp.ac.in
ಅಧಿಸೂಚನೆ ಸಂಖ್ಯೆ: IIT/SRIC/R/CID/2025/101


ವೇತನ ವಿವರ : 
ಮಾಸಿಕ ಸಂಬಳ: ₹42,000 ವರೆಗೆ (ಅರ್ಹತೆ ಮತ್ತು ಅನುಭವ ಆಧಾರಿತ)


ಶೈಕ್ಷಣಿಕ ಅರ್ಹತೆ:
ಗೇಟ್ ಅಂಕಗಳೊಂದಿಗೆ EE/EC/CS/IN ಅಥವಾ ವಿದ್ಯುತ್ ವಿಜ್ಞಾನದ ಸಂಬಂಧಿತ ಶಾಖೆಗಳಲ್ಲಿ ಸ್ನಾತಕೋತ್ತರ ಪದವಿ ಅಥವಾ ಮಾನ್ಯ NET/GATE ಅಂಕಗಳೊಂದಿಗೆ EE/EC/CS/IN ಅಥವಾ ವಿದ್ಯುತ್ ವಿಜ್ಞಾನದ ಸಂಬಂಧಿತ ಶಾಖೆಗಳಲ್ಲಿ ತಂತ್ರಜ್ಞಾನ ಪದವಿ ಹೊಂದಿರಬೇಕು.


ವಯೋಮಿತಿ: 
ಅಭ್ಯರ್ಥಿಗಳು ಗರಿಷ್ಠ 32 ವರ್ಷ (ನಿಯಮಾನುಸಾರ ಸಡಿಲಿಕೆ ಅನ್ವಯ)ಗಳ ವಯೋಮಿತಿಯನ್ನು ಹೊಂದಿರಬೇಕು.

ಅರ್ಜಿಯ ಶುಲ್ಕ : 
ಯಾವುದೇ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ .(Nil)


ಆಯ್ಕೆ ವಿಧಾನ : 
- ಅರ್ಜಿಯ ಪರಿಶೀಲನೆ
- ಸಂದರ್ಶನ (ಆವಶ್ಯಕತೆ ಇದ್ದಲ್ಲಿ)


ಪ್ರಮುಖ ದಿನಾಂಕಗಳು :
- ಅರ್ಜಿಯ ಪ್ರಾರಂಭ ದಿನಾಂಕ: 05-ಆಗಸ್ಟ್-2025
- ಅರ್ಜಿಯ ಕೊನೆಯ ದಿನಾಂಕ: 26-ಆಗಸ್ಟ್-2025


ಅರ್ಜಿ ಸಲ್ಲಿಸುವ ವಿಧಾನ : 
- ಅಧಿಕೃತ ವೆಬ್‌ಸೈಟ್ iitkgp.ac.in ಗೆ ಭೇಟಿ ನೀಡಿ
- ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ, ಸಂಪೂರ್ಣವಾಗಿ ಓದಿ
- ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಿ
- ಅಗತ್ಯ ದಾಖಲೆಗಳು ಹಾಗೂ ಫೋಟೋ ಅಪ್ಲೋಡ್ ಮಾಡಿ
- ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್‌ ತೆಗೆದುಕೊಳ್ಳಿ


ಹೆಚ್ಚಿನ ಮಾಹಿತಿಗಾಗಿ ಐಐಟಿ ಖರಗ್ಪುರ್ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ. ಇದು ಸಂಶೋಧನೆ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ.

Comments