Loading..!

ಐಐಎಸ್‌ಸಿ ನೇಮಕಾತಿ 2025 : ಜೆ.ಆರ್.ಡಿ. ಟಾಟಾ ಸ್ಮಾರಕ ಗ್ರಂಥಾಲಯದಲ್ಲಿ ಪ್ರಾಜೆಕ್ಟ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:25 ಸೆಪ್ಟೆಂಬರ್ 2025
Image not found

ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು ತನ್ನ ಜೆ.ಆರ್.ಡಿ. ಟಾಟಾ ಸ್ಮಾರಕ ಗ್ರಂಥಾಲಯ (JRDTML) ನಲ್ಲಿ Library & Information Management (LIM) Project Trainee ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಎಂ.ಎಲ್‌ಐಎಸ್‌ಸಿ (MLISc) ಪೂರೈಸಿದ ಹೊಸ ಅಭ್ಯರ್ಥಿಗಳಿಗೆ ವಿಶ್ವಮಟ್ಟದ ಅಕಾಡೆಮಿಕ್ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುವ ಅನುಭವವನ್ನು ನೀಡುವ ವಿಶೇಷ ಅವಕಾಶವಾಗಿದೆ.


ಹುದ್ದೆಗಳ ವಿವರ : 
ಒಟ್ಟು ಹುದ್ದೆಗಳು : 09
ವರ್ಗವಾರ ಹಂಚಿಕೆ : UR – 05, OBC – 01, SC – 01, ST – 01, EWS – 01
ಹುದ್ದೆಯ ಹೆಸರು : Library & Information Management (LIM) Project Trainee
ಅವಧಿ : 2 ವರ್ಷಗಳು (ಕಾರ್ಯಕ್ಷಮತೆ ಆಧಾರಿತ ವಿಸ್ತರಣೆ ಮತ್ತು 10% ವೇತನ ಹೆಚ್ಚಳದ ಅವಕಾಶ)


ಅರ್ಹತೆಗಳು :
- ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ (ಕನಿಷ್ಠ ಸೆಕೆಂಡ್ ಕ್ಲಾಸ್)
- MLISc ಅಥವಾ ಸಮಾನ ಪದವಿ (2024 ಅಥವಾ 2025ರಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು)


ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ ವಯಸ್ಸು: 26 ವರ್ಷ (07-ಅಕ್ಟೋಬರ್-2025ರ ವೇಳೆಗೆ) ವಯೋಮಿತಿಯನ್ನು ಹೊಂದಿರಬೇಕು.
ಸರ್ಕಾರದ ನಿಯಮಾವಳಿಯ ಪ್ರಕಾರ ವಯೋಮಿತಿ ಸಡಿಲಿಕೆ ಲಭ್ಯ


ವೇತನ :
- ₹25,000 + HRA ಪ್ರತಿಮಾಸ (ಸಮಗ್ರ ವೇತನ)
- ವಿಸ್ತರಣೆ ಮಾಡಿದಲ್ಲಿ ಕಾರ್ಯಕ್ಷಮತೆಯ ಆಧಾರದ ಮೇಲೆ ಗರಿಷ್ಠ 10% ಹೆಚ್ಚಳ


ಅರ್ಜಿ ಪ್ರಕ್ರಿಯೆ (ಆನ್‌ಲೈನ್ ಮಾತ್ರ)
- IISc ತಾತ್ಕಾಲಿಕ/ಒಪ್ಪಂದ ಹುದ್ದೆಗಳ ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿ.
- ಹೊಸ ಖಾತೆ ಸೃಷ್ಟಿಸಿ ಅಥವಾ ಲಾಗಿನ್ ಮಾಡಿ, LIM Project Trainee ಹುದ್ದೆಯನ್ನು ಆಯ್ಕೆಮಾಡಿ.
- ಅರ್ಜಿ ಫಾರ್ಮ್ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು (ಜನನ ಪ್ರಮಾಣ, ಸಮುದಾಯ ಪ್ರಮಾಣ ಪತ್ರ, ಪದವಿ/ಮಾರ್ಕ್ಸ್‌ಶೀಟ್‌ಗಳು, MLISc ಪ್ರಮಾಣಪತ್ರ) ಅಪ್‌ಲೋಡ್ ಮಾಡಿ.
- ಅರ್ಜಿ ಸಲ್ಲಿಸಿ ಮತ್ತು ಆನ್‌ಲೈನ್ ದೃಢೀಕರಣ ಪ್ರತಿಯನ್ನು ಉಳಿಸಿಕೊಳ್ಳಿ.


ಆಯ್ಕೆ ವಿಧಾನ : 
- ಶಾರ್ಟ್‌ಲಿಸ್ಟಿಂಗ್/ಲಿಖಿತ ಪರೀಕ್ಷೆ (ಅರ್ಜಿಗಳ ಸಂಖ್ಯೆ ಹೆಚ್ಚು ಇದ್ದರೆ)
- ಸಂದರ್ಶನ (ಅಂತಿಮ ಆಯ್ಕೆ)
- ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಇಮೇಲ್ ಮೂಲಕ ತಿಳಿಸಲಾಗುತ್ತದೆ


ಪ್ರಮುಖ ದಿನಾಂಕಗಳು : 
ಅಧಿಸೂಚನೆ ದಿನಾಂಕ: 16-ಸೆಪ್ಟೆಂಬರ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-ಅಕ್ಟೋಬರ್-2025


👉ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು IISc ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Comments