Loading..!

ಐಸಿಎಸ್‌ಐಎಲ್ (ICSIL) ನೇಮಕಾತಿ 2025: ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:11 ಅಕ್ಟೋಬರ್ 2025
Image not found

ಇಂಟೆಲಿಜೆಂಟ್ ಕಮ್ಯುನಿಕೇಶನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL) ನಿಂದ 2025ರ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, 04 ಕನ್ಸಲ್ಟೆಂಟ್ (Consultant) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ದೆಹಲಿ – ನವದೆಹಲಿಯಲ್ಲಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು2025ರ ಅಕ್ಟೋಬರ್ 16ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ನೇಮಕಾತಿ ಪ್ರಮುಖ ವಿವರಗಳು:


ಸಂಸ್ಥೆ ಹೆಸರು: Intelligent Communication Systems India Limited (ICSIL)
ಒಟ್ಟು ಹುದ್ದೆಗಳ ಸಂಖ್ಯೆ: 04
ಹುದ್ದೆ ಹೆಸರು: ಕನ್ಸಲ್ಟೆಂಟ್ (Consultant)
ಉದ್ಯೋಗ ಸ್ಥಳ: ದೆಹಲಿ – ನವದೆಹಲಿ
ವೇತನ ಶ್ರೇಣಿ: ₹1,50,000/- ಪ್ರತಿಮಾಸ


ಅರ್ಹತೆಗಳು:
ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೋಸ್ಟ್ ಗ್ರ್ಯಾಜುವೇಷನ್ (ಸ್ನಾತಕೋತ್ತರ) ಪದವಿ ಪಾಸಾಗಿರಬೇಕು.


ವಯೋಮಿತಿ: 
09-ಅಕ್ಟೋಬರ್-2025ರಂತೆ ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಮೀರಬಾರದು.


ವಯೋಮಿತಿ ಸಡಿಲಿಕೆ: ಸಂಸ್ಥೆಯ ನಿಯಮಾನುಸಾರ ಸಡಿಲಿಕೆ ಅನ್ವಯವಾಗುತ್ತದೆ.


ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ: ₹590/-
ಪಾವತಿ ವಿಧಾನ: ಆನ್‌ಲೈನ್ ಮೂಲಕ


ಆಯ್ಕೆ ವಿಧಾನ:
- ದಾಖಲೆ ಪರಿಶೀಲನೆ
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ (Skill Test)
- ಸಂದರ್ಶನ (Interview)


ಅರ್ಜಿ ಸಲ್ಲಿಸುವ ವಿಧಾನ:
- ಮೊದಲಿಗೆ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಇಮೇಲ್ ಐಡಿ, ಮೊಬೈಲ್ ನಂಬರ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
- ಅಧಿಕೃತ ವೆಬ್‌ಸೈಟ್‌ನಲ್ಲಿ “ICSIL Consultant Apply Online” ಲಿಂಕ್ ತೆರೆಯಿರಿ.
- ಅಗತ್ಯ ಮಾಹಿತಿಗಳನ್ನು ನಮೂದಿಸಿ, ದಾಖಲೆಗಳು ಮತ್ತು ಫೋಟೋವನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದಲ್ಲಿ).
- ಅರ್ಜಿಯನ್ನು ಸಲ್ಲಿಸಿದ ನಂತರ, ಅಪ್ಲಿಕೇಶನ್ ನಂಬರ್ ಅಥವಾ ರೆಫರೆನ್ಸ್ ನಂಬರ್ ಕಾಪಿ ಮಾಡಿಕೊಂಡಿಡಿ.


ಪ್ರಮುಖ ದಿನಾಂಕಗಳು:
- ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ: 13-ಅಕ್ಟೋಬರ್-2025
- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 16-ಅಕ್ಟೋಬರ್-2025


ದೆಹಲಿಯ ಸರ್ಕಾರಿ ಕ್ಷೇತ್ರದಲ್ಲಿ ಕನ್ಸಲ್ಟೆಂಟ್ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

Comments