ಹುಬ್ಬಳ್ಳಿ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಿಂದ ದಿನಾಂಕ 14.10.2024 ರಂದು ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಸಹನ ಶಕ್ತಿ ಪರೀಕ್ಷೆಗೆ 1:5 ಅನುಪಾತದಲ್ಲಿ Shortlist ಆಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಕಟ್- ಆಫ್ (Cut-off) ಅಂಕಗಳೊಂದಿಗೆ ಹೆಸ್ಕಾಂನ ಅಂತರ್ಜಾಲ ದಲ್ಲಿ ಬಿಡುಗಡೆಮಾಡಲಾಗಿದ್ದು ಇದೀಗ ಸಹ ಶಕ್ತಿ ಪರೀಕ್ಷೆಯನ್ನು ದಿನಾಂಕ 02.06.2025 ರಿಂದ 04.06.2015 ವರೆಗೆ ಹುಬ್ಬಳ್ಳಿ, ಧಾರವಾಡ ಮತ್ತು ಬಾಗಲಕೋಟೆ ಕಚೇರಿಗಳಲ್ಲಿ ನಡೆಸಲಾಗುತ್ತದೆ. ಸಹನ ಶಕ್ತಿ ಪರೀಕ್ಷೆಯ ಕರೆ ಪತ್ರಗಳನ್ನು ಮೆಸ್ಕಾಂನ ಅಂತರ್ಜಾಲ 28.05.2025 ರಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಮತ್ತು ಯಾವುದೇ ನವೀಕರಣಗಳಿಗಾಗಿ ಅಭ್ಯರ್ಥಿಗಳು ನಿರಂತರವಾಗಿ ಹೆಸ್ಕಾಂನ ವೆಬ್ಸೈಟ್ಗೆ ಭೇಟಿ ನೀಡುವುದು ಸೂಕ್ತ.
Comments