ಹಾವೇರಿ ಜಿಲ್ಲಾ ಪಂಚಾಯತ್ 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಸಹಾಯಕ ಜಿಲ್ಲಾ ಯೋಜನಾ ನಿರ್ವಾಹಕ (Assistant District Project Manager) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹಾವೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರಿ ಉದ್ಯೋಗವನ್ನು ಆಶಿಸುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತರು 2025ರ ಜೂನ್ 30 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿಯ ಪ್ರಮುಖ ವಿವರಗಳು :
ಸಂಸ್ಥೆ ಹೆಸರು : ಹಾವೇರಿ ಜಿಲ್ಲಾ ಪಂಚಾಯತ್
ಹುದ್ದೆಯ ಹೆಸರು : ಸಹಾಯಕ ಜಿಲ್ಲಾ ಯೋಜನಾ ನಿರ್ವಾಹಕ
ಒಟ್ಟು ಹುದ್ದೆಗಳ ಸಂಖ್ಯೆ : 01
ಉದ್ಯೋಗ ಸ್ಥಳ : ಹಾವೇರಿ – ಕರ್ನಾಟಕ
ವೇತನ ಶ್ರೇಣಿ :
ಅಭ್ಯರ್ಥಿಗಳಿಗೆ ತಿಂಗಳಿಗೆ ₹30,000/- ರೂ ಗಳ ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಹತೆ ಮತ್ತು ವಯೋಮಿತಿ :
ಶೈಕ್ಷಣಿಕ ಅರ್ಹತೆ : BCA, B.E ಅಥವಾ MCA ಪದವಿ ಪಡೆದಿರುವವರು ಅರ್ಹರು
ಗರಿಷ್ಠ ವಯಸ್ಸು : 40 ವರ್ಷ (ಜಿಲ್ಲಾ ಪಂಚಾಯತ್ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುವ ಸಾಧ್ಯತೆ ಇದೆ)
ಅರ್ಜಿ ಶುಲ್ಕ :
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.
ಆಯ್ಕೆ ವಿಧಾನ :
1. ದಾಖಲೆಗಳ ಪರಿಶೀಲನೆ
2. ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
2. ಅರ್ಜಿ ಸಲ್ಲಿಸುವ ಮೊದಲು ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಅಗತ್ಯ ದಾಖಲೆಗಳು (ವಯಸ್ಸು, ವಿದ್ಯಾರ್ಹತೆ, ಪಠ್ಯವಿವರಣೆ, ಗುರುತಿನ ದಾಖಲೆ, ಇತ್ಯಾದಿ) ಸಿದ್ಧಪಡಿಸಿ
3. ಆನ್‌ಲೈನ್ ಅರ್ಜಿ ಫಾರ್ಮ್ ಭರ್ತಿ ಮಾಡಿ
4. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿರಿ
5. ಅರ್ಜಿ ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಭದ್ರಪಡಿಸಿಕೊಳ್ಳಿ
ಪ್ರಮುಖ ದಿನಾಂಕಗಳು :
ಆನ್‌ಲೈನ್ ಅರ್ಜಿ ಪ್ರಾರಂಭ ದಿನಾಂಕ : 16-ಜೂನ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-ಜೂನ್-2025
ದಾಖಲೆ ಪರಿಶೀಲನೆ ದಿನಾಂಕ : 10-ಜುಲೈ-2025
ಹೆಚ್ಚಿನ ವಿವರಗಳು ಮತ್ತು ಆನ್‌ಲೈನ್ ಅರ್ಜಿ ಲಿಂಕ್‌ಗಾಗಿ ಹಾವೇರಿ ಜಿಲ್ಲಾ ಪಂಚಾಯತ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಇದು ನಿಮ್ಮ ಸರ್ಕಾರಿ ಉದ್ಯೋಗದ ಕನಸು ನನಸಾಗಿಸಬಹುದಾದ ಅವಕಾಶವಾಗಿರಬಹುದು ತಪ್ಪಿಸಿಕೊಳ್ಳಬೇಡಿ!
Comments