Loading..!

ಗುಲ್ಬರ್ಗಾ ವಿಧುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಲ್ಲಿನ ಕಿರಿಯ ಪವರ್ ಮ್ಯಾನ್ ಹುದ್ದೆಗಳ ಅಂತಿಮ ಆಯ್ಕೆಪಟ್ಟಿ ಇದೀಗ ಪ್ರಕಟ
Published by: Yallamma G | Date:12 ನವೆಂಬರ್ 2025
Image not found

                ಗುಲ್ಬರ್ಗಾ ವಿಧುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ (GESCOM) ಕೈಗಾರಿಕಾ ತರಬೇತಿ ಕೇಂದ್ರ, ಕಲಬುರಗಿಯಲ್ಲಿ ಖಾಲಿ ಇರುವಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 14/10/2024 ರಂದು ಅಧಿಸೂಚನೆಯನ್ನು ಹೊರಡಿಸಿ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದೀಗ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಿರಿಯ ಪವರ್‌ಮ್ಯಾನ್ (Junior Powerman) ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯನ್ನು (Final Selection List) ಅಧಿಕೃತವಾಗಿ ಇದೀಗ ಪ್ರಕಟಿಸಲಾಗಿದೆ.            


              ಗುವಿಸಕಂಪನಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ  ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ (ಎಸ್.ಎಸ್.ಎಲ್.ಸಿ/10ನೇ ತರಗತಿ) ಗಳಿಸಿರುವ ಅಂಕಗಳ ಜೇಷ್ಠತೆಯ ಆಧಾರದ ಮೇಲೆ ದಿನಾಂಕ:16.06.2025 ರಿಂದ 19.06.2025 ರವರೆಗೆ ಅಧಿಸೂಚಿತ ಹುದ್ದೆಗಳ 1:5 ರ ಅನುಪಾತದಲ್ಲಿ ನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಕಿರಿಯ ಪವರ್‌ಮ್ಯಾನ್ (ಕೆ.ಕೆ & ಎನ್.ಕೆ.ಕೆ) ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಪ್ (Cut-Off) ಅಂಕಗಳೊಂದಿಗೆ ಗುಲ್ಬರ್ಗಾ ವಿಧುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ (GESCOM) ನ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿರುತ್ತದೆ. 


                                ಸದರಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ನಿಗದಿತ ಕಾಲಾವಧಿಯೊಳಗೆ ಅಭ್ಯರ್ಥಿಗಳು ಸಲ್ಲಿಸಿದ್ದ ಆಕ್ಷೇಪಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದ್ದು, ಅದರನ್ವಯ, ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು (Cut-Off) ಅಂಕಗಳೊಂದಿಗೆ ಗುಲ್ಬರ್ಗಾ ವಿಧುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ (GESCOM) ನ ಜಾಲತಾಣದಲ್ಲಿ ಪ್ರಕಟಿಸಲಾಗಿದೆ 


            ಕಿರಿಯ ಪವರ್‌ಮ್ಯಾನ್ (ಕೆ.ಕೆ & ಎನ್.ಕೆ.ಕೆ) ಸೂಚಿತ ಹುದ್ದೆಗಳ ಪೈಕಿ ಅರ್ಹ ಅಭ್ಯರ್ಥಿಗಳ ಕೊರತೆಯಿಂದ ಭರ್ತಿಯಾಗದೇ ಉಳಿದಿರುವ ಹುದ್ದೆಗಳನ್ನು ನಿಯಮಾನುಸಾರ ಬ್ಯಾಕ್‌ಲಾಗ್ (Backlog) ಹುದ್ದೆಗಳೆಂದು ಪರಿಗಣಿಸಲಾಗಿದ್ದು, ವಿವರಗಳನ್ನು ಅನುಬಂಧದಲ್ಲಿ ತೋರಿಸಲಾಗಿದೆ.

Comments