ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಗಳಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮುಖ ಚಹರೆ ಪತ್ತೆ ವ್ಯವಸ್ಥೆಯನ್ನು (ಫೇಸ್ ರೆಕಗ್ನಿಷನ್ ಸಿಸ್ಟಂ) ಹಂತಹಂತವಾಗಿ ಮಾಡಲಾಗುತ್ತಿದೆ. ಸೆ.2, 3 ಮತ್ತು 6 ಹಾಗೂ 7 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ತಪಾಸಣಾ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ.
ಈ ಸಂಬಂಧ ಫೇಸ್ ರೆಕಗ್ನಿಷನ್ ಸೇವೆ ನೀಡುವ ಕಂಪನಿಗಳಿಂದ ಕೊಟೇಶನ್ ಆಹ್ವಾನಿಸಿರುವ ಕೆಪಿಎಸ್‌ಸಿ ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯನಗರ, ರಾಯಚೂರು ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಸೌಲಭ್ಯಗಳೊಂದಿಗೆ ಸೇವೆ ನೀಡುವಂತೆ ತಿಳಿಸಿದೆ. ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲಿ ಪರೀಕ್ಷಾರ್ಥಿಯ ಮುಖವನ್ನು ಸೆರೆ ಹಿಡಿಯುವ ಮತ್ತು ಮೂಲ ಡೇಟಾದೊಂದಿಗೆ ಸಮೀಕರಿಸುವ ವ್ಯವಸ್ಥೆ ಆಗಲಿದೆ.
ಪ್ರವೇಶಪತ್ರ ಬಿಡುಗಡೆ: ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಕೆಪಿಎಸ್‌ಸಿ ಪ್ರವೇಶಪತ್ರ ಬಿಡುಗಡೆ ಮಾಡಿದೆ. ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸೆ.6ರಂದು ಕನ್ನಡ ಭಾಷಾ ಪರೀಕ್ಷೆ, ಸೆ.7ರಂದು ಪೂರ್ವಾಹ್ನ ಸಾಮಾನ್ಯ ಪತ್ರಿಕೆ, ಅಪರಾಹ್ನ ಶೇ.85 ವರ್ಗೀಕರಿಸಿದ ಹುದ್ದೆಗಳಿಗೆ ನಿರ್ದಿಷ್ಟ ಪತ್ರಿಕೆ ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳ ನೇಮಕಾತಿಗೆ 20240 2.20 ಅಧಿಸೂಚನೆ ಹೊರಡಿಸಲಾಗಿತ್ತು.
Comments