ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC) 2025 ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿಯಡಿಯಲ್ಲಿ ಖಾಲಿ ಇರುವ ಸೂಪರ್ ಸ್ಪೆಷಲಿಸ್ಟ್ ಮತ್ತು ಟೀಚಿಂಗ್ ಫ್ಯಾಕಲ್ಟಿ ಹುದ್ದೆಗಳಿಗೆ ಒಟ್ಟು 14 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2025ರ ಆಗಸ್ಟ್ 29ರಂದು ನಡೆಯುವ ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಬಹುದು.
ಹುದ್ದೆಗಳ ವಿವರ :
ಸೂಪರ್ ಸ್ಪೆಷಲಿಸ್ಟ್ : 01
ಅಸೋಸಿಯೇಟ್ ಪ್ರೊಫೆಸರ್ : 04
ಅಸಿಸ್ಟೆಂಟ್ ಪ್ರೊಫೆಸರ್ : 09
ಅರ್ಹತೆ :
- MD/DNB/PG ಡಿಪ್ಲೊಮಾ (ಎಮರ್ಜೆನ್ಸಿ ಮೆಡಿಸಿನ್), MS/MD (ಜೆನರಲ್ ಸರ್ಜರಿ, ಅನಸ್ಥೀಷಿಯಾ, ಜೆನರಲ್ ಮೆಡಿಸಿನ್, ರೆಸ್ಪಿರೇಟರಿ ಮೆಡಿಸಿನ್, ಆರ್ಥೋಪೆಡಿಕ್ಸ್)
- DM/DNB ಕ್ರಿಟಿಕಲ್ ಕೇರ್ ಮೆಡಿಸಿನ್, ಅಥವಾ ಸಮಾನವಾದ ವಿಶೇಷ ಅರ್ಹತೆ
- DM/DNB/M.Ch ಸಂಬಂಧಿತ ಸೂಪರ್ ಸ್ಪೆಷಾಲಿಟಿ ಕ್ಷೇತ್ರದಲ್ಲಿ
ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ: 67 ವರ್ಷಕ್ಕಿಂತ ಹೆಚ್ಚು ಇರಬಾರದು.
ವೇತನ ಶ್ರೇಣಿ :
- ಅಸೋಸಿಯೇಟ್ ಪ್ರೊಫೆಸರ್: ₹1,67,844/-
- ಅಸಿಸ್ಟೆಂಟ್ ಪ್ರೊಫೆಸರ್: ₹1,44,201/-
ಆಯ್ಕೆ ವಿಧಾನ :
- ವಾಕ್-ಇನ್ ಸಂದರ್ಶನ
- ದಾಖಲೆ ಪರಿಶೀಲನೆ
ಪ್ರಮುಖ ದಿನಾಂಕಗಳು :
- ವಾಕ್-ಇನ್ ಸಂದರ್ಶನ ದಿನಾಂಕ: 29-08-2025
ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಪೂರ್ಣ ಅಧಿಸೂಚನೆಗಾಗಿ esic.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
✅ ಸರ್ಕಾರಿ ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಮಹತ್ವದ ಅವಕಾಶ – ತಪ್ಪಿಸಿಕೊಳ್ಳಬೇಡಿ!
Comments