Loading..!

ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್(EIL) ನೇಮಕಾತಿ 2025: ಮ್ಯಾನೇಜರ್ ಮತ್ತು ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Bhagya R K | Date:4 ಸೆಪ್ಟೆಂಬರ್ 2025
Image not found

ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಇಂಜಿನಿಯರಿಂಗ್ ಕನ್ಸಲ್ಟೆನ್ಸಿ ಸಂಸ್ಥೆಯಾಗಿರುವ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (EIL) ಸಂಸ್ಥೆ 2025 ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಮ್ಯಾನೇಜರ್, ಎಂಜಿನಿಯರ್ ಹಾಗೂ ಇತರ ಹುದ್ದೆಗಳ ಒಟ್ಟು 19 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025ರ ಸೆಪ್ಟೆಂಬರ್ 18ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.

ಮುಖ್ಯ ವಿವರಗಳು : 
ಸಂಸ್ಥೆ ಹೆಸರು: Engineers India Limited (EIL)
ಒಟ್ಟು ಹುದ್ದೆಗಳು: 19
ಹುದ್ದೆಗಳ ಹೆಸರು: Senior Manager, Manager, Deputy Manager, Engineer, Junior Secretary
ಉದ್ಯೋಗ ಸ್ಥಳ: ಅಖಿಲ ಭಾರತ

ಹುದ್ದೆಗಳ ವಿವರ :
ಸೀನಿಯರ್ ಮ್ಯಾನೇಜರ್ : 6
ಮ್ಯಾನೇಜರ್ : 6
ಡೆಪ್ಯುಟಿ ಮ್ಯಾನೇಜರ್ : 3
ಇಂಜಿನಿಯರ್ : 1
ಜೂನಿಯರ್ ಸೆಕ್ರೆಟರಿ : 3

ವಯೋಮಿತಿ :
ಸೀನಿಯರ್ ಮ್ಯಾನೇಜರ್ : 40 ವರ್ಷ
ಮ್ಯಾನೇಜರ್ : 36 ವರ್ಷ
ಡೆಪ್ಯುಟಿ ಮ್ಯಾನೇಜರ್ : 32 ವರ್ಷ
ಇಂಜಿನಿಯರ್ : 28 ವರ್ಷ
ಜೂನಿಯರ್ ಸೆಕ್ರೆಟರಿ : 32 ವರ್ಷ

ವೇತನ ಶ್ರೇಣಿ :
ಸೀನಿಯರ್ ಮ್ಯಾನೇಜರ್ : ₹90,000 – ₹2,40,000
ಮ್ಯಾನೇಜರ್ : ₹80,000 – ₹2,20,000
ಡೆಪ್ಯುಟಿ ಮ್ಯಾನೇಜರ್ : ₹70,000 – ₹2,00,000
ಇಂಜಿನಿಯರ್ : ₹60,000 – ₹1,80,000
ಜೂನಿಯರ್ ಸೆಕ್ರೆಟರಿ : ₹29,000 – ₹1,20,000

ಶೈಕ್ಷಣಿಕ ಅರ್ಹತೆಗಳು
Senior Manager: B.Sc, B.E/B.Tech, M.E/M.Tech, M.Sc
Manager: B.Sc, B.E/B.Tech
Deputy Manager, Engineer: B.E/B.Tech
Junior Secretary: ಡಿಪ್ಲೋಮಾ ಅಥವಾ ಪದವಿ

ವಯೋಮಿತಿಯಲ್ಲಿ ಸಡಿಲಿಕೆ:
- OBC (NCL): 03 ವರ್ಷ
- SC/ST: 05 ವರ್ಷ
- PwD (General/EWS): 10 ವರ್ಷ
- PwD (OBC): 13 ವರ್ಷ
- PwD (SC/ST): 15 ವರ್ಷ


ಅರ್ಜಿ ಶುಲ್ಕ:
ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.


ಆಯ್ಕೆ ವಿಧಾನ:
- ಸ್ಕಿಲ್ ಟೆಸ್ಟ್
- ವೈಯಕ್ತಿಕ ಸಂದರ್ಶನ


ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಸರಿಯಾದ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ.
- ಆನ್‌ಲೈನ್ ಅರ್ಜಿ ಲಿಂಕ್ ಮೂಲಕ ಫಾರ್ಮ್ ಭರ್ತಿ ಮಾಡಿ.
- ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
- ಫಾರ್ಮ್ ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಸಂಗ್ರಹಿಸಿಡಿ.

ಪ್ರಮುಖ ದಿನಾಂಕಗಳು :
- ಅರ್ಜಿಯ ಪ್ರಾರಂಭ ದಿನಾಂಕ: 03-09-2025
- ಅಂತಿಮ ದಿನಾಂಕ: 18-09-2025



ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು EIL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಇಂತಹ ತಾಂತ್ರಿಕ ಕ್ಷೇತ್ರದ ಸರ್ಕಾರಿ ಹುದ್ದೆಗಾಗಿ ಇದು ಒಳ್ಳೆಯ ಅವಕಾಶ – ಕಳೆದುಕೊಳ್ಳಬೇಡಿ.

Comments